ಬೆಂಗಳೂರು :ಅಕ್ರಮವಾಗಿ ಬಡವರ ಜಮೀನು ಕಬಳಿಸಿ ಚಾಂಪಿಯನ್ ಗ್ರೂಪ್ನವರು ಕಾಂಪೌಂಡ್ ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಮತ್ತು ಕರ್ನಾಟಕ ರಿಪಬ್ಲಿಕನ್ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಜಮೀನು ಕಬಳಿಕೆ ವಿರುದ್ಧ ಪ್ರತಿಭಟನೆ : ಜಮೀನು ಬಿಟ್ಟುಕೊಡಲು ಖಡಕ್ ವಾರ್ನಿಂಗ್ - krishnappa land issue
ಅಕ್ರಮವಾಗಿ ಬಡವರ ಜಮೀನು ಕಬಳಿಸಿ ಚಾಂಪಿಯನ್ ಗ್ರೂಪ್ನವರು ಕಾಂಪೌಂಡ್ ನಿರ್ಮಿಸುತ್ತಿದ್ದಾರೆಂದು ಆರೋಪಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಮತ್ತು ಕರ್ನಾಟಕ ರಿಪಬ್ಲಿಕನ್ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜೊತೆಗೆ ಕಂಪನಿಯವರು ಎಚ್ಚೆತ್ತುಕೊಂಡು ಜಮೀನು ಬಿಟ್ಟುಕೊಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದೆಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
ಬೆಂಗಳೂರು ಪೂರ್ವ ತಾಲೂಕಿನ ವರ್ತೂರು ಹೋಬಳಿಯ ಮುಳ್ಳೂರು ಗ್ರಾಮದ ಸರ್ವೆ ನಂ.46/3 ರಲ್ಲಿ ಕೃಷ್ಣಪ್ಪ ಎಂಬುವವರಿಗೆ ಸೇರಿದ ಪಿತ್ರಾರ್ಜಿತ ಜಾಗವನ್ನು ಚಾಂಪಿಯನ್ ಗ್ರೂಪ್ ಮಾಲೀಕ ಸುಭಾಕರ್‌ರಾವ್ ಕಬಳಿಸಿ, ಈ ಜಾಗದಲ್ಲಿ ಕಾಂಪೌಂಡ್ ಸಹ ನಿರ್ಮಿಸಲು ಹೊರಟಿದ್ದರು. ಈ ಸಂಬಂಧ ಉಚ್ಚ ನ್ಯಾಯಾಲಯದಲ್ಲಿ ಸುಭಾಕರ್ ವಿರುದ್ಧ ದಾವೆ ಸಹ ಹೂಡಲಾಗಿದೆ. ಅಲ್ಲದೇ, ಮೂಲ ದಾಖಲಾತಿಗಳಲ್ಲಿ ರಸ್ತೆ ಇದ್ದರೂ ಕೂಡಾ ಇದನ್ನು ಕಬಳಿಸಿದ್ದಾರೆ.
ಈ ಸಂಬಂಧ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆ ಕೃಷ್ಣಪ್ಪನ ಪರವಾಗಿ ದಲಿತ ಸಂಘಟನೆಗಳು ಕಬಳಿಕೆ ಜಾಗದ ಮುಂದೆ ಪ್ರತಿಭಟನೆ ನಡೆಸಿದೆ. ಅಕ್ರಮ ಎಸಗಿರುವುದು ದಾಖಲಾತಿಗಳಲ್ಲಿ ನಮೂದಾಗಿದೆ, ಕಂಪನಿಯವರು ಎಚ್ಚೆತ್ತುಕೊಂಡು ಜಮೀನು ಬಿಟ್ಟುಕೊಡಬೇಕು ಇಲ್ಲವಾದರೇ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದೆಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.