ಬೆಂಗಳೂರು: ಐಟಿ ವಿರುದ್ಧ ಬೆಂಗಳೂರು ಪೊಲೀಸರು ಸಮರ ಸಾರಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಐಟಿ ಕಚೇರಿ ಎದುರು ಪ್ರತಿಭಟನೆ ಮಾಡಿದ್ದಕ್ಕೆ ಆದಾಯ ತೆರಿಗೆ ಇಲಾಖೆಯು ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಈ ಹಿನ್ನೆಲೆ ಆದಾಯ ತೆರಿಗೆ ಇಲಾಖೆ ಡಿ ಜಿ ಬಾಲಕೃಷ್ಣನ್ಗೆ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ನೋಟಿಸ್ ಜಾರಿ ಮಾಡಿದ್ದಾರೆ.
ಐಟಿ ಇಲಾಖೆಗೇ ಶಾಕ್ ನೀಡಿದ ಬೆಂಗಳೂರು ಪೊಲೀಸರು: ಆದಾಯ ತೆರಿಗೆ ಇಲಾಖೆ ಮುಖ್ಯಸ್ಥನಿಗೆ ನೋಟಿಸ್! - ಚುನಾವಣಾ ಆಯೋಗ
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಅವರ ಸಂಪುಟದ ಸಚಿವರು ಇತ್ತೀಚೆಗೆ ಐಟಿ ದಾಳಿ ಖಂಡಿಸಿ ಆದಾಯ ತೆರಿಗೆ ಇಲಾಖೆ ಎದುರು ಪ್ರತಿಭಟನೆ ನಡೆಸಿದ್ದು ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಇದೀಗ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಐಟಿ ಇಲಾಖೆ ಮುಖ್ಯಸ್ಥರಿಗೆ ನೋಟಿಸ್ ರವಾನಿಸಿದ್ದಾರೆ.
ನೋಟಿಸ್ನಲ್ಲಿ 'ನೀವು ದೂರು ನೀಡುವ ಮೊದಲೇ ನಾವು ಕುಮಾರಸ್ವಾಮಿ ವಿರುದ್ಧ ಕೇಸ್ ದಾಖಲು ಮಾಡಿದ್ದೆವು. ಮತ್ತೆ ಚುನಾವಣಾ ಆಯೋಗಕ್ಕೆ ಹೆಸರು ಸಮೇತ ದೂರು ನೀಡಿದ್ದೀರಿ. ಈ ಹಿನ್ನೆಲೆಯಲ್ಲಿ ನೀವು ವಿಚಾರಣೆಗೆ ಹಾಜರಾಗಬೇಕು, ಅಲ್ಲದೆ ಮೂರು ದಿನಗೊಳಗಾಗಿ ಉತ್ತರಿಸುವಂತೆ ನೋಟಿಸ್ನಲ್ಲಿ ತಿಳಿಸಿದ್ದಾರೆ. ಹಾಗೆ ಚುನಾವಣಾ ಆಯೋಗಕ್ಕೆ ಕೂಡ ಪತ್ರ ಬರೆದು ಅದರಲ್ಲಿ ಕೆಲವೊಂದು ಸೆಕ್ಷನ್ಗಳನ್ನು ಎಫ್ಐಆರ್ನಲ್ಲಿ ಸೇರಿಸಲು ಕೋರ್ಟ್ ಅನುಮತಿ ಕೇಳಲಾಗಿದೆ. ಜೊತೆಗೆ ದೂರು ಕೊಟ್ಟವರಿಗೂ ಉತ್ತರ ನೀಡುವಂತೆ ನೋಟಿಸ್ ನೀಡಿರುದನ್ನು' ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.
ಸಿಎಂ ಕುಮಾರಸ್ವಾಮಿ ಹಾಗೂ ಅವರ ಸಂಪುಟದ ಸಚಿವರು ಐಟಿ ದಾಳಿ ಖಂಡಿಸಿ ಆದಾಯ ತೆರಿಗೆ ಇಲಾಖೆ ಎದುರು ಪ್ರತಿಭಟನೆ ಮಾಡಿದ್ದರು. ಈ ಹಿನ್ನೆಲೆ ಚುನಾವಣಾ ಆಯೋಗಕ್ಕೆ ಐಟಿ ಇಲಾಖೆ ಕೆಲಸಕ್ಕೆ ಅಡ್ಡಿಪಡಿಸಿದೆ. ಕಾನೂನು ವಿರುದ್ಧವಾಗಿ ನಡೆದುಕೊಂಡಿದೆ ಎಂದು ಐಟಿ ಇಲಾಖೆಯಿಂದ ದೂರು ಸಲ್ಲಿಸಲಾಗಿತ್ತು. ಇದಕ್ಕೆ ಪ್ರತ್ಯಸ್ತ್ರವೆಂಬಂತೆ ನಗರ ಪೊಲೀಸರು ಐಟಿಗೆ ಶಾಕ್ ನೀಡಿದ್ದಾರೆ.