ಕರ್ನಾಟಕ

karnataka

ETV Bharat / state

ರಾಜ್ಯ ಸರ್ಕಾರದ ವೈಫಲ್ಯ ವಿರುದ್ಧ ಉಭಯ ಸದನಗಳಲ್ಲೂ ಹೋರಾಟ: ಬಿ ಕೆ ಹರಿಪ್ರಸಾದ್ - ಮಳೆಗಾಲದ ಅಧಿವೇಶನ

ಇಂದಿನಿಂದ ಮಳೆಗಾಲದ ಅಧಿವೇಶನ ಆರಂಭವಾಗಿದೆ. ಈ ಹಿನ್ನೆಲೆ ಮಳೆ ಅನಾಹುತ, ಸರ್ಕಾರದ ವೈಫಲ್ಯದ , ಜನರ ಕಷ್ಟಗಳ ಬಗ್ಗೆ ಸದನದಲ್ಲಿ ಮಾತನಾಡುತ್ತೇವೆ- ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್.

BK Hariprasad
ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್

By

Published : Sep 12, 2022, 11:46 AM IST

ಬೆಂಗಳೂರು:ರಾಜ್ಯ ಸರ್ಕಾರದ ವೈಫಲ್ಯಗಳ ಕುರಿತು ಉಭಯ ಸದನಗಳಲ್ಲಿಯೂ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಳೆಗಾಲದ ಅಧಿವೇಶನ ಆರಂಭವಾಗಿದೆ. ಈ ಹಿನ್ನೆಲೆ ಮಳೆ ಅನಾಹುತ, ಸರ್ಕಾರದ ವೈಫಲ್ಯದ , ಜನರ ಕಷ್ಟಗಳ ಬಗ್ಗೆ ಸದನದಲ್ಲಿ ಮಾತನಾಡುತ್ತೇವೆ. ಇದಕ್ಕೆ ಅವಕಾಶ ಕೋರಿದ್ದೇವೆ. ಪೊಲೀಸ್ ಇಲಾಖೆಯಲ್ಲಿನ ನೇಮಕಾತಿ ಅಕ್ರಮ, ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.

ಈ ಹಿಂದೆ ಸದನದಲ್ಲಿ ಪೊಲೀಸ್ ನೇಮಕಾತಿಯಲ್ಲಿ ಯಾವುದೇ ಅಕ್ರಮ ಆಗಿಲ್ಲ ಎಂದು ಆರಗ ಜ್ಞಾನೇಂದ್ರ ಹೇಳಿದ್ದರು. ಆದರೆ ನಂತರದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಬಂಧನ ಆಯಿತು. ತಾನು ತಪ್ಪಿಸಿಕೊಳ್ಳಲು ಐಪಿಎಸ್ ಅಧಿಕಾರಿಯನ್ನು ಬಲಿ ಕೊಟ್ಟರು. ಅಂತಹ ಗೃಹ ಸಚಿವರು ಅಮಿತ್ ಶಾ ಬಿಟ್ಟರೆ ಆರಗ ಮಾತ್ರ ಎಂದು ಹೇಳಿದರು.

ಸದನದಲ್ಲಿ 40 ಪರ್ಸೆಂಟ್​​ ಕಮಿಷನ್ ಆರೋಪದ ಬಗ್ಗೆಯೂ ಚರ್ಚೆ ಮಾಡುತ್ತೇವೆ. ಮಳೆಯಿಂದ ಜನರು ಯಾವ ರೀತಿ ತತ್ತರಿಸುತ್ತಿದ್ದಾರೆ ಎಂಬ ಬಗ್ಗೆ ಸದನದಲ್ಲಿ ಚರ್ಚೆ ಆಗಬೇಕು. ಪಿಎಸ್​​ಐ ಅಕ್ರಮಕ್ಕೆ ಸಂಬಂಧಿಸಿದಂತೆ 46 ಜನ ಅಧಿಕಾರಿಗಳು ಜೈಲಿಗೆ ಹೋಗಿದ್ದಾರೆ. ಈಗಾಗಲೇ ಆರಗ ಪರಪ್ಪನ ಅಗ್ರಹಾರಕ್ಕೆ ಹೋಗಿ ಜೈಲು ಯಾವ ರೀತಿ ಇದೆ ಎಂದು ನೋಡಿಕೊಂಡು ಬಂದಿದ್ದಾರೆ. ಅವರು ಕೂಡಾ ಹೋಗಲು ತಯಾರಿ ಮಾಡಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.

ಅಂಗೈ ಹುಣ್ಣಿಗೆ ಕನ್ನಡಿ ಬೇಕಾಗಿಲ್ಲ. ಜನಸ್ಪಂದನ ಸಂದರ್ಭದಲ್ಲಿ ಶೋಕಾಚರಣೆ ಇದ್ದರೂ ಮಂತ್ರಿಗಳು, ಶಾಸಕರು ಡ್ಯಾನ್ಸ್ ಮಾಡ್ತಾರೆ. ಜನರು ಸಂಕಷ್ಟದಲ್ಲಿ ಇದ್ದಾರೆ. ಇದು ಒಂದು ರೀತಿಯ ವಿಕೃತಿಯ ನಡೆ. ಬಿಜೆಪಿಗರು ವಿಕೃತ ಮನೋಭಾವದವರು ಎಂದು ದೇಶಕ್ಕೆ ತೋರಿಸಿಕೊಟ್ಟರು ಎಂದರು.

ಇದನ್ನೂ ಓದಿ:ಮಧ್ಯಾಹ್ನ ಕಾಂಗ್ರೆಸ್‌ ಮಹತ್ವದ ಸುದ್ದಿಗೋಷ್ಠಿ: ಬಿಜೆಪಿ ಶಾಸಕರ ವಿಡಿಯೋ ಬಿಡುಗಡೆ?

ABOUT THE AUTHOR

...view details