ಕರ್ನಾಟಕ

karnataka

ETV Bharat / state

'ಇಡಿ'ತದಲ್ಲಿ ಡಿಕೆಶಿ: ನಾಳೆ ಬೆಂಗಳೂರಲ್ಲಿ ಬೃಹತ್​ ಪ್ರತಿಭಟನೆ, ವಾಹನ ಸಂಚಾರದಲ್ಲಿ ಬದಲಾವಣೆ - ಸಂಚಾರಿ ಆಯುಕ್ತ ರವಿಕಾಂತೇಗೌಡ

ಮಾಜಿ ಸಚಿವ ಡಿ.ಕೆ ಶಿವಕುಮಾರ್​ ಬಂಧನ ಖಂಡಿಸಿ ನಾಳೆ ಬೆಂಗಳೂರಲ್ಲಿ ಒಕ್ಕಲಿಗ ಸಮುದಾಯದಿಂದ ನಡೆಯಲಿರುವ ಪ್ರತಿಭಟನಾ ಮೆರವಣಿಗೆ ಹಿನ್ನೆಲೆಯಲ್ಲಿ ರಸ್ತೆ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.

ಪ್ರತಿಭಟನಾ ಮೆರವಣಿಗೆ

By

Published : Sep 10, 2019, 8:27 PM IST

ಬೆಂಗಳೂರು:ಜಾರಿ ನಿರ್ದೇಶನಾಲಯದಿಂದ ಮಾಜಿ ಸಚಿವ ಡಿ.ಕೆ ಶಿವಕುಮಾರ್​ ಬಂಧನ ಖಂಡಿಸಿ ನಾಳೆ ಒಕ್ಕಲಿಗ ಸಮುದಾಯದಿಂದ ಶಂಕರಪುರ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯಾಷನಲ್ ಕಾಲೇಜು ಮೈದಾನದಿಂದ ರಾಜಭವನದವರೆಗೆ ನಡೆಯಲಿರುವ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಖಾಕಿ ಕಣ್ಗಾವಲು ಹಾಕಲಾಗಿದೆ. ಈ ವೇಳೆ ಸವಾರರಿಗೆ ತೊಂದರೆ ತಪ್ಪಿಸಲು ಟ್ರಾಫಿಕ್ ಪೊಲೀಸರು ರಸ್ತೆ ಸಂಚಾರದಲ್ಲಿ ಬದಲಾವಣೆ ಮಾಡಿದ್ದಾರೆ.

ಪ್ರತಿಭಟನೆಯಲ್ಲಿ ರಾಜಕೀಯ ಪಕ್ಷದ ಮುಖಂಡರು, ಸ್ವಾಮೀಜಿಗಳು, ಕರವೇ ಅಧ್ಯಕ್ಷರು, ರಾಮನಗರ, ಮಂಡ್ಯ, ಚಿಕ್ಕಾಬಳ್ಳಾಪುರ ಜಿಲ್ಲೆಯ ಒಕ್ಕಲಿಗ ಸಮುದಾಯದ ಜನರು ಭಾರಿ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನಾ ಮೆರವಣಿಗೆ ಹೋಗುವ ರಸ್ತೆಗಳಲ್ಲಿ ಸಂಚಾರಕ್ಕೆ ಅಡಚಣೆಯಾಗುವ ಕಾರಣ ಹಲವಾರು ಬದಲಾವಣೆ ಮಾಡಲಾಗಿದೆ. ಹಾಗೆಯೇ ಸಂಚಾರ ಪೊಲೀಸರು ನಾಳೆ ಸಂಪುರ್ಣವಾಗಿ ರಸ್ತೆಗಿಳಿದು ವಾಹನ ಸಂಚಾರ ಬಗ್ಗೆ ಕಣ್ಗಾವಲು ಇಡಲಿದ್ದಾರೆ ಎಂದು ಸಂಚಾರಿ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.

ಬೃಹತ್ ಪ್ರತಿಭಟನಾ ಮೆರವಣಿಗೆ ಮಾರ್ಗ:

ನ್ಯಾಷನಲ್ ಕಾಲೇಜ್ ಮೈದಾನ - ಎಡ ತಿರುವು - ಪಿ ಎಂ.ಕೆ ರಸ್ತೆ - ಎಡ ತಿರುವು - ವಾಣಿವಿಲಾಸ ರಸ್ತೆ - ನ್ಯಾಷನಲ್ ಕಾಲೇಜ್ ಜಂಕ್ಷನ್ - ಡಯಾಗನಲ್ ರಸ್ತೆ - ಸಜ್ಜನ್ ರಾವ್ ಸರ್ಕಲ್ - ಡಯಾಗನಲ್ ರಸ್ತೆಯಲ್ಲಿ ಮುಂದುವರೆದು - ಮಿನರ್ವ ಸರ್ಕಲ್- ಜೆಸಿ ರಸ್ತೆ - ಶಿವಾಜಿ ಜಂಕ್ಷನ್- ಟೌನ್ ಹಾಲ್ - ಎನ್. ಆರ್ ಜಂಕ್ಷನ್ - ಪೊಲೀಸ್ ಠಾಣೆ ಜಂಕ್ಷನ್ - ಪೊಲೀಸ್ ಕಾರ್ನರ್ - ಎಡ ತಿರುವು - ಕೆ. ಜಿ ರಸ್ತೆ - ಮೈಸೂರು ಬ್ಯಾಂಕ್ ಸರ್ಕಲ್ - ಬಲ ತಿರುವು - ಪ್ಯಾಲೇಸ್ ರೋಡ್ - ಪ್ಯಾಲೇಸ್ ಜಂಕ್ಷನ್ - ಎಡ ತಿರುವು - ವೈ ರಾಮಚಂದ್ರ ರಸ್ತೆ - ಕನಕದಾಸ ವೃತ್ತ - ಬಲ ತಿರುವು - ಕಾಳಿದಾಸ ರಸ್ತೆ ಮೂಲಕ ಫ್ರೀಡಂಪಾರ್ಕ್​​ವರೆಗೆ ಮೆರವಣಿಗೆಗೆ ಮಾರ್ಗ ಮಾಡಿಕೊಡಲಾಗಿದೆ.

ಸಂಚಾರಿ ಆಯುಕ್ತ ರವಿಕಾಂತೇಗೌಡ ಸುದ್ದಿಗೋಷ್ಠಿ

ವಾಹನ ಮಾರ್ಗ ಬದಲಾವಣೆ :

ಲಾಲ್ ಬಾಗ್ ವೆಸ್ಟ್ ಗೇಟ್ ಆರ್. ವಿ ರಸ್ತೆ, ನ್ಯಾಷನಲ್ ಕಾಲೇಜ್ ಜಂಕ್ಷನ್,​ ಶೇಷ ಮಹಲ್ ಜಂಕ್ಷನ್, ಕೆ. ಆರ್ ರಸ್ತೆ ಮೆಡಿಕೇರ್ ಆಸ್ಪತ್ರೆ ಜಂಕ್ಷನ್, ಬಸಪ್ಪ ಸರ್ಕಲ್, ಎಲ್ .ಬಿ.ಎಫ್ ರಸ್ತೆ ಲಾಲ್ ಬಾಗ್ ಮೇನ್​​ ಗೇಟ್, ಕಾಫಿ ಪಾಯಿಂಟ್‌ ಆರ್ಮುಗಂ ರಸ್ತೆ, ಜರ್ನಲಿಸ್ಟ್ ಕಾಲೊನಿ, ಆನಂದರಾವ್ ವೃತ್ತದ ಬಳಿ, ಖೊಡೆ ಜಂಕ್ಷನ್, ಮೈಸೂರು ಬ್ಯಾಂಕ್ ಜಂಕ್ಷನ್, ನವರಙಗ್ ಜಂಕ್ಷನ್ ಬಳಿ, ಮಲ್ಲೇಶ್ವರಂ ಬ್ರೀಡ್ಜ್, ಸಂಗೋಳಿರಾಯಣ್ಣ ವೃತ್ತ, ಆನಂದ ರಾವ್ ವೃತ್ತದ ಜೆಡಿಎಸ್ ಕ್ರಾಸ್ ಹತ್ತಿರ, ಆನಂದ್ ರಾವ್ ಸರ್ಕಲ್, ಮೈಸೂರು ಬ್ಯಾಂಕ್ ವೃತ್ತ, ಮಹಾರಾಣಿ ಬ್ರಿಡ್ಜ್​​ವರೆಗೆ ಬದಲಾವಣೆ ಪಾಯಿಂಟ್ ಮಾಡಲಾಗಿದೆ.

ಪಾರ್ಕಿಂಗ್​ಗೆ ಈ ಸ್ಥಳಗಳಲ್ಲಿ ಸ್ಥಳಾವಕಾಶ:

  • ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು, ಬನ್ನಪ್ಪ ಪಾರ್ಕ್, ವೈ.ಎಂ ಸಿಎ ಮೈದಾನ, ನೃಪತುಂಗ ರಸ್ತೆ.
  • ಕನಕಪುರ ಕಡೆಯಿಂದ ಬರುವ ವಾಹನಗಳಿಗೆ ಪಟಾಲಮ್ಮ ರಸ್ತೆ, ಹೋಂ ಸ್ಕೂಲ್ ಜಂಕ್ಷನ್, ನಾರಾಯಣ ರೋಡ್, ಕೆ.ಆರ್ ರಸ್ತೆ, ಹೋಂ ಸ್ಕೂಲ್ ರಸ್ತೆ.
  • ಮೈಸೂರು ರಸ್ತೆ ಕಡೆಯಿಂದ ಬರುವ ವಾಹನಗಳಿಗೆ ಬುಲ್ ಟೆಂಪಲ್ ರಸ್ತೆ, ಮರಾಠ ಹಾಸ್ಟೆಲ್, ಶಂಕರಪುರಂ ರಸ್ತೆ,ಪ್ಯಾಲೇಸ್ ರಸ್ತೆಯಲ್ಲಿ ಒಂದು ಬದಿಯಲ್ಲಿ ಸುಮಾರು 20 ಬಸ್​​ಗಳಿಗೆ ಪಾರ್ಕಿಂಗ್ ವ್ಯವಸ್ಥೆ.
  • ಹಾಗೆಯೇ ಎಲ್​ಟಿ‌ಪಿ ರೇಸ್ ಒಂದು ಬದಿಯಲ್ಲಿ, ಶೇಷಾದ್ರಿ ರಸ್ತೆಯಲ್ಲಿ ಒಂದು ಬದಿಗೆ, ಲಕ್ಷ್ಮಣ ಪುರಿ ಬ್ರಿಡ್ಜ್ ಕೆಲಗಡೆ ಇರುವ ಧನ್ವಂತರಿ ರಸ್ತೆಯ ಒಂದು ಬದಿಗೆ ‌ವ್ಯವಸ್ಥೆ ಮಾಡಲಾಗಿದೆ.

ಮೆರವಣಿಗೆ ವೇಳೆ ಈ ರಸ್ತೆಗಳಲ್ಲಿ ಎಲ್ಲಾ ಮಾದರಿ ವಾಹನಗಳ ನಿಲುಗಡೆಗೆ ನಿಷೇಧ:

ಜೆ.ಸಿ ರಸ್ತೆ, ಎನ್.ಆರ್ ರಸ್ತೆ,‌ ನೃಪತುಂಗ ರಸ್ತೆ, ಪಿ. ಕಾಳಿಂಗರಾವ್ ರಸ್ತೆ, ಕಸ್ತೂರಿ ಬಾ ರಸ್ತೆ, ಮಲ್ಯ ರಸ್ತೆ, ಆರ್.ಆರ್.ಎಂ.ಆರ್ ರಸ್ತೆ, ಎಂ.ಜಿ ರಸ್ತೆ, ಟ್ರಿನಿಟಿ ರಸ್ತೆ , ಸೆಂಟ್ರಲ್ ಸ್ಟ್ರೀಟ್, ಕ್ವೀನ್ ರಸ್ತೆ, ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ, ಶೇಷಾದ್ರಿ ರಸ್ತೆ, ಹಳೇ ಅಂಚೆ ಕಚೇರಿ ರಸ್ತೆ, ರೇಸ್ ಕೋರ್ಸ್ ರಸ್ತೆ, ಟಿ. ಔಡಯ್ಯ ರಸ್ತೆ, ಪ್ಯಾಲೇಸ್ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ABOUT THE AUTHOR

...view details