ಬೆಂಗಳೂರು:ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಗರದ ಕಾರ್ಪೊರೇಷನ್ ವೃತ್ತದಿಂದ ಫ್ರೀಡಂ ಪಾರ್ಕ್ ವರೆಗೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಸಿಲಿಕಾನ್ ಸಿಟಿಗೂ ಮುಟ್ಟಿದ ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆ ಬಿಸಿ.. ಪ್ರೊಟೆಸ್ಟ್ ಮಾಡಿದವರ ಸೆರೆ - students protest in bengaluru latest news
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೆಂಗಳೂರಿನಲ್ಲಿ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದ್ರು.

ಕಾರ್ಪೊರೇಷನ್ ವೃತ್ತದಿಂದ ಫ್ರೀಡಂ ಪಾರ್ಕ್ ವರೆಗೂ ಮೌನ ಪ್ರತಿಭಟನೆ ಮಾಡುತ್ತಾ ಬಂದ ವಿದ್ಯಾರ್ಥಿಗಳು, ಫ್ರೀಡಂ ಪಾರ್ಕಿನಲ್ಲಿ ಹಂ ಲೇಕೆ ರಹೆಂಗೆ ಆಜಾದಿ ಎಂದು ಘೋಷಣೆ ಕೂಗಿದರು. ಪ್ರತಿಭಟನೆ ಮುನ್ನ ಪೊಲೀಸರು ಪ್ರತಿಭಟನೆ ಆಯೋಜಕರನ್ನು ಹಲಸೂರು ಗೇಟ್ ಪೊಲೀಸರು ವಶಕ್ಕೆ ಪಡೆದರು. ನಂತರ ಮೌನ ಪ್ರತಿಭಟನೆ ಮೈಸೂರು ಬ್ಯಾಂಕ್ ವೃತ್ತದಿಂದ ಫ್ರಿಡಂ ಪಾರ್ಕ್ ಸೇರಿತು. ಸುಮಾರು 200ಕ್ಕೂ ಹೆಚ್ವು ವಿದ್ಯಾರ್ಥಿಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಮುಂದಿನ ದಿನಗಳಲ್ಲಿ ಭಾರತದಲ್ಲಿ ಮುಸಲ್ಮಾನರಿಗೆ ಬದುಕುವುದು ಕಷ್ಟವಿದೆ. ಸಿಎಬಿ ಹಾಗೂ ಎನ್ ಆರ್ ಸಿ ನಂತ ಕಾಯ್ದೆಗಳು ಹಿಟ್ಲರ್ ಆಡಳಿತದಂತೆ ಇದೆ ಎಂದು ಪ್ರತಿಭಟನೆಯಲ್ಲಿ ಘೋಷಣೆಗಳನ್ನು ಕೂಗಿದರು.
ನಮ್ಮ ದೇಶದಲ್ಲಿ ಏನು ನಡೆಯುತ್ತಿದೆ ಎಂದು ನಮ್ಮ ಪೋಷಕರಿಗೆ ಹಾಗೂ ಎಲ್ಲರಿಗೂ ತಿಳಿಹೇಳಬೇಕು, ಇತ್ತೀಚಿಗೆ ಟ್ರಾನ್ಸ್ ಬಿಲ್ ಕೂಡ ಅನುಮೋದನೆ ಆಗಿದೆ. ಜೊತೆಗೆ ನಾನು ವಾರದ ಹಿಂದೆ ಅಸ್ಸಾಂ ನಲ್ಲಿ ಇದ್ದೆ ಅಲ್ಲಿ ಪರಿಸ್ಥಿತಿ ಕಠಿಣವಾಗಿದೆ, ಈಗ ನಾವು ಧ್ವನಿ ಎತ್ತಬೇಕು ಇಲ್ಲ ಇದು ಸರಿಹೋಗಲ್ಲ ಎಂದು ಪ್ರತಿಭಟನಾನಿರತರೊಬ್ಬರು ಕಳವಳ ವ್ಯಕ್ತಪಡಿಸಿದ್ರು.