ಕರ್ನಾಟಕ

karnataka

ETV Bharat / state

ನೆರೆ ಪರಿಹಾರ ನೀಡಲು ಕೇಂದ್ರದ ವಿಳಂಬ ಧೋರಣೆ ಖಂಡಿಸಿ ಅ.10ರ ನಂತರ ಪ್ರತಿಭಟನೆ..  ಕೈ ಎಂಲ್‌ಸಿ ಸಿ ಎಂ ಇಬ್ರಾಹಿಂ

ಕೇಂದ್ರ ಸರ್ಕಾರ ರಾಜ್ಯದ ನೆರೆ ಪರಿಹಾರ ನೀಡಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಅಕ್ಟೋಬರ್​ 10 ರ ನಂತರ ಕಾಂಗ್ರೆಸ್ ವಿಭಿನ್ನ ಹೋರಾಟಕ್ಕೆ ಮುಂದಾಗಲಿದೆ ಎಂದು ಕಾಂಗ್ರೆಸ್ ನಾಯಕ ಸಿ ಎಂ ಇಬ್ರಾಹಿಂ ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕ ಸಿ.ಎಂ.ಇಬ್ರಾಹಿಂ

By

Published : Oct 5, 2019, 3:47 PM IST

ಬೆಂಗಳೂರು:ಕೇಂದ್ರ ಸರ್ಕಾರ ರಾಜ್ಯದ ನೆರೆ ಪರಿಹಾರ ನೀಡಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಅಕ್ಟೋಬರ್​ 10ರ ನಂತರ ಕಾಂಗ್ರೆಸ್ ವಿಭಿನ್ನ ಹೋರಾಟಕ್ಕೆ ಮುಂದಾಗಲಿದೆ ಎಂದು ಕಾಂಗ್ರೆಸ್ ನಾಯಕ ಸಿ ಎಂ ಇಬ್ರಾಹಿಂ ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕ ಸಿ ಎಂ ಇಬ್ರಾಹಿಂ..

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಾಧ್ಯಮಗಳು, ಮಠ ಮಾನ್ಯಗಳು ರಾಜ್ಯದ ಜನರ ಪರ ಹೋರಾಟಕ್ಕೆ ಮುಂದಾಗಬೇಕು. ಇವರ ಬೆನ್ನಿಗೆ ನಾವಿರುತ್ತೇವೆ. ಅಕ್ಟೋಬರ್​ 10ಕ್ಕೆ ಅಧಿವೇಶನ ಆರಂಭವಾಗಲಿದೆ. ಇದರ ಬಳಿಕ ನಾವೂ ಪ್ರಬಲ ಹೋರಾಟಕ್ಕೆ ರೂಪುರೇಷೆ ಮಾಡಿಕೊಳ್ಳುತ್ತೇವೆ.ರಾಜ್ಯದಲ್ಲಿ ಹಿಂದೆಂದೂ ಇಂತಹ ಪ್ರವಾಹ ಆಗಿರಲಿಲ್ಲ. ಪ್ರವಾಹದಿಂದ ಸಾಕಷ್ಟು ನಷ್ಟ ಆಗಿದ್ದು, ರಾಜ್ಯ ಸರ್ಕಾರ 38 ಸಾವಿರ ಕೋಟಿ ನೆರವಿಗೆ ಕೇಂದ್ರದ ಮುಂದೆ ಬೇಡಿಕೆ ಇಟ್ಟಿದೆ.

ಇನ್ನು, ಕೇಂದ್ರ 1200 ಕೋಟಿ ಬಿಡುಗಡೆ ಮಾಡಿದ್ದು, ಸದಾನಂದಗೌಡರು ಹಂತಹಂತವಾಗಿ ಬರುತ್ತೆ ಅಂತಾರೆ. ನಾನು ಎರಡು ವರ್ಷ ಮಂತ್ರಿಯಾಗಿದ್ದವನು. ಹಿಂದೆ ಪ್ರವಾಹದ ವೇಳೆ ನಾನು ಸ್ಥಳಗಳಿಗೆ ಭೇಟಿ ನೀಡಿದ್ದೆ. ಆಗಿನ ಪ್ರಧಾನಿ ತಕ್ಷಣವೇ ಪರಿಹಾರ ಘೋಷಿಸುತ್ತಿದ್ದರು. ಈಗ ಅಧ್ಯಯನ ತಂಡವೂ ಬಂದು ಹೋಗಿದೆ. ಆದರೂ ಸಹ ಕೇಂದ್ರಕ್ಕೆ ವರದಿಯನ್ನೇ ಸಲ್ಲಿಸಿಲ್ಲವಂತೆ. ಡಿಸಿ, ತಹಶೀಲ್ದಾರ್ ಇದ್ದಾರೆ ಅವರೇ ಹಂಚುತ್ತಾರೆ. ಸಿಎಂ ಹೋಗಿ ಪರಿಹಾರ ಹಂಚುವಂತದ್ದೇನಿಲ್ಲ. ಟ್ರಜರಿಯಿಂದ ಹಣ ಬಿಡುಗಡೆ ಮಾಡಿದ್ರೇ ಸಾಕು ಎಂದರು.

ಅನರ್ಹ ಶಾಸಕರ ಕುರಿತು ಮಾತನಾಡಿ, ಪಾಪ ಪತಿವ್ರತರು 17 ಜನ ಹೋಗಿಬಿಟ್ಟಿದ್ದಾರೆ. ಅವರ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಬೇಕಿದೆ. ಎಲ್ಲರ ಗಮನ ಅತ್ತ ಹೋಗಲಿದೆ. ಆಗ ಪ್ರವಾಹ ಸಂತ್ರಸ್ತರ ಕಥೆ ಅಷ್ಟೇ.. ಪರಿಹಾರ ವಿತರಣೆ ಆಗುವವರೆಗೆ ಎಲೆಕ್ಷನ್ ಮುಂದೂಡಿ. ಬೈ ಎಲೆಕ್ಷನ್ ಮುಂದಕ್ಕೆ ಹಾಕಿದ್ರೇನೂ ತೊಂದರೆಯಿಲ್ಲ. ಇಲ್ಲ ಅವರು ಗೆದ್ದು, ಸಚಿವ ಸ್ಥಾನಕ್ಕೆ ಕಿತ್ತಾಡೋದು ಬೇಡ ಎಂದರು.

ಇನ್ನು, ಸರ್ಕಾರದ ಪ್ರತಿನಿಧಿಗಳು ನಿರಾಶ್ರಿತರ ತಾಣಗಳಿಗೆ ಭೇಟಿ ಕೊಡುವುದಕ್ಕೆ ಪ್ರತಿ ಕಿಲೋಮೀಟರ್ 12 ರೂಪಾಯಿ ಟಿಎ/ಡಿಎ ಪಡೆದುಕೊಳ್ಳುತ್ತಿದ್ದಾರೆ. ಇದೇ ಹಣವನ್ನು ಸಂತ್ರಸ್ತರಿಗೆ ನೀಡಿದ್ರೆ ಒಂದೊಂದು ಹಳ್ಳಿಯಲ್ಲಿ 25 ಮನೆ ಕಟ್ಟಬಹುದಿತ್ತು ಎಂದರು.

ABOUT THE AUTHOR

...view details