ಕರ್ನಾಟಕ

karnataka

ETV Bharat / state

ಬೆಂಗಳೂರು: ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ; 44 ಮಹಿಳೆಯರ ರಕ್ಷಣೆ, 34 ಆರೋಪಿಗಳು ವಶಕ್ಕೆ - spa

ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದವರ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ದಂಧೆಯನ್ನು ಬಯಲಿಗೆಳೆದಿದ್ದಾರೆ.

prostitution racket
ವೇಶ್ಯಾವಾಟಿಕೆ ದಂಧೆ

By ETV Bharat Karnataka Team

Published : Jan 7, 2024, 8:46 AM IST

ಬೆಂಗಳೂರು:ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಹದೇವಪುರ ಠಾಣಾ ವ್ಯಾಪ್ತಿಯ ಅಡ್ಡೆಯೊಂದರ ಮೇಲೆ ತಡರಾತ್ರಿ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ದಾಳಿ ನಡೆಸಿದ್ದಾರೆ. ಹೊರ ರಾಜ್ಯಗಳು ಹಾಗು ವಿದೇಶಗಳ ಒಟ್ಟು 44 ಮಹಿಳೆಯರನ್ನು ರಕ್ಷಿಸಿರುವ ಪೊಲೀಸರು, 34 ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಬಹುಮಹಡಿ‌ ಕಟ್ಟಡವೊಂದರ 1 ಮತ್ತು 6ನೇ ಅಂತಸ್ತಿನಲ್ಲಿ​ ಅನಿಲ್ ಎಂಬಾತ ಸ್ಪಾ ನಡೆಸುತ್ತಿದ್ದ. ಸದ್ಯ ಈತನನ್ನು ಬಂಧಿಸಲಾಗಿದೆ. ಈತ ಕೂಡಾ ಹೊರ ರಾಜ್ಯದಿಂದ ಬೆಂಗಳೂರಿಗೆ ಆಗಮಿಸಿ ಸ್ಪಾ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಹಾವೇರಿಯಲ್ಲಿ ತನ್ನದೇ ಹಸುಗೂಸನ್ನು ಮಾರಲು ಯತ್ನಿಸಿದ ಅಪ್ಪ; ಪತಿ ವಿರುದ್ಧ ಪೊಲೀಸರ ಮೊರೆ ಹೋದ ಪತ್ನಿ

ABOUT THE AUTHOR

...view details