ಬೆಂಗಳೂರು : ಮಸಾಜ್ ಪಾರ್ಲರ್ ಹೆಸರಿನಲ್ಲಿ ಅಕ್ರಮ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ : ಆರೋಪಿ ಅಂದರ್ ! - bangalore prostitution latest news
ಮಸಾಜ್ ಪಾರ್ಲರ್ ಹೆಸರಿನಲ್ಲಿ ಹುಡುಗಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪಿ ನಾರಾಯಣ ಸ್ವಾಮಿಯನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
![ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ : ಆರೋಪಿ ಅಂದರ್ ! Prostitution in the name of massage parlor : Accused arrested !](https://etvbharatimages.akamaized.net/etvbharat/prod-images/768-512-5349308-thumbnail-3x2-bng.jpg)
ನಗರದ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯ ಸಲೂನ್ವೊಂದರಲ್ಲಿ ಆರೋಪಿ ನಾರಾಯಣ ಸ್ವಾಮಿ ಎಂಬಾತ ಅಕ್ರಮವಾಗಿ ಹುಡುಗಿಯರನ್ನು ಇಟ್ಟುಕೊಂಡು ಪಾರ್ಲರ್ಗೆ ಗಿರಾಕಿ ಬರುವಂತೆ ಮಾಡಿ ಅವರಿಂದ 1500ರಿಂದ 2000ದವರೆಗೆ ಹಣ ಪಡೆಯುತ್ತಿದ್ದ. ಸೆಕ್ಸ್ಗಾಗಿ ಹುಡುಗಿಯರನ್ನು ಒದಗಿಸುತ್ತಿದ್ದ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ದಾಳಿ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ
ಇನ್ನು ತನಿಖೆ ವೇಳೆ ಆರೋಪಿಯು ಅಮಾಯಕ ಹೆಣ್ಣು ಮಕ್ಕಳನ್ನ ಟಾರ್ಗೆಟ್ ಮಾಡಿಕೊಂಡು ಕೆಲಸ ನೀಡುವುದಾಗಿ ತಿಳಿಸಿ ವೇಶ್ಯಾವಾಟಿಕೆ ದಂಧೆಗೆ ತೊಡಗಿಸಿದ್ದ ಹಿನ್ನೆಲೆ ಆರು ಮಹಿಳೆಯರನ್ನು ರಕ್ಷಿಸಿ ನಗದು ಕೆಲ ದಾಖಲಾತಿ ವಶಪಡಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.