ಬೆಂಗಳೂರು:ಹರ್ಬಲ್ ಲೈಫ್ ಪ್ರೊಡಕ್ಟ್ ಮಾರುವ ನೆಪದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ದಂಪತಿಯನ್ನು ಚಂದ್ರಾ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಚಂದ್ರಾಲೇಔಟ್ ವಿನಾಯಕ ನಗರದಲ್ಲಿ ವಾಸವಾಗಿದ್ದ ರಾಮು ಹಾಗೂ ಪ್ರೇಮಾ ಬಂಧಿತ ಆರೋಪಿಗಳು. ಇವರು ಕಳೆದೊಂದು ವರ್ಷದಿಂದ ಹರ್ಬಲ್ ಲೈಫ್ ಪಾಡ್ರಕ್ಟ್ಅನ್ನು ಮನೆಯಲ್ಲಿ ಮಾರಾಟ ಸೋಗಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು.