ಕರ್ನಾಟಕ

karnataka

ETV Bharat / state

ಕೆರೆ ಬಳಕೆದಾರರ ಸಂಘಗಳ ಬಲವರ್ಧನೆಯ ಪ್ರಸ್ತಾವನೆ ಸಿಎಂಗೆ ಸಲ್ಲಿಕೆ: ಸಚಿವ ಭೋಸರಾಜು - ಕರ್ನಾಟಕ ಕೆರೆ ಸಂರಕ್ಷಣಾ

ಕೆರೆ ಬಳಕೆದಾರರ ಸಂಘಗಳ ಬಲವರ್ಧನೆಯ ಬಗ್ಗೆ ಸಿಎಂಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಚಿವ ಎನ್​.ಎಸ್.ಭೋಸರಾಜು ಹೇಳಿದರು.​

ಸಂಘಗಳ ಬಲವರ್ಧನೆಯ ಪ್ರಸ್ತಾವನೆ ಸಿಎಂಗೆ ಸಲ್ಲಿಕೆ
ಸಂಘಗಳ ಬಲವರ್ಧನೆಯ ಪ್ರಸ್ತಾವನೆ ಸಿಎಂಗೆ ಸಲ್ಲಿಕೆ

By ETV Bharat Karnataka Team

Published : Dec 27, 2023, 9:11 PM IST

ಬೆಂಗಳೂರು: ಕೆರೆ ಬಳಕೆದಾರರ ಸಂಘಗಳ ಬಲವರ್ಧನೆಯ ನಿಟ್ಟಿನಲ್ಲಿ ಮಾರ್ಗಸೂಚಿ ಸಿದ್ಧಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಸದ್ಯದಲ್ಲೇ ಕರ್ನಾಟಕ ಕೆರೆ ಸಂರಕ್ಷಣಾ ಮತ್ತು ಪ್ರಾಧಿಕಾರದ ಅಧ್ಯಕ್ಷರಾಗಿರುವ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು ತಿಳಿಸಿದರು.

ವಿಕಾಸಸೌಧದಲ್ಲಿಂದು ಕೆರೆ ಬಳಕೆದಾರರ ಸಂಘಗಳ ಕಾರ್ಯ ಚಟುವಟಿಕೆಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರಕಾರ 2023-24ನೇ ಸಾಲಿನ ಬಜೆಟ್​ನಲ್ಲಿ ಸಂಘಗಳ ಬಲವರ್ಧನೆಗೊಳಿಸುವುದಾಗಿ ಘೋಷಣೆ ಮಾಡಿದೆ. ಈ ಕೆರೆ ಬಳಕೆದಾರರ ಸಂಘಗಳನ್ನು ಬಲವರ್ಧನೆಗೊಳಿಸಿದಲ್ಲಿ ಕೆರೆಗಳನ್ನು ಅಭಿವೃದ್ದಿಗೊಳಿಸುವುದು ಹಾಗೂ ಅಂತರ್ಜಲ ವೃದ್ಧಿಗೊಳಿಸುವುದು ಸಾಧ್ಯವಿದೆ. ರೈತರಿಗೆ ಕೆರೆ ಸಂಘಗಳಲ್ಲಿ ಹೆಚ್ಚಿನ ಆದ್ಯತೆ ನೀಡುವ ಜೊತೆಯಲ್ಲಿಯೇ, ಕೆರೆ ಸಂಘಗಳನ್ನು ಆರ್ಥಿಕವಾಗಿ ಸದೃಢಗೊಳಿಸುವುದು ನಮ್ಮ ಪ್ರಮುಖ ಉದ್ದೇಶ. ಸಣ್ಣ ನೀರಾವರಿ ಇಲಾಖೆ ಅಷ್ಟೇ ಅಲ್ಲದೇ, ಗ್ರಾಮೀಣಾಭಿವೃದ್ದಿ ವ್ಯಾಪ್ತಿಯಲ್ಲಿ 28,345 ಹಾಗೂ ಬೃಹತ್ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ 2082 ಕೆರೆಗಳಿವೆ. ಈ ಕೆರೆಗಳಲ್ಲಿ ಕೇವಲ ಕೆರೆ ಬಳಕೆದಾರರ ಸಂಘಗಳ ರಚನೆಯಿಂದ ಮಾತ್ರ ಅವುಗಳ ಬಲವರ್ಧನೆ ಸಾಧ್ಯವಿಲ್ಲ ಎಂದರು.

ಕೆರೆ ಸಂಘಗಳನ್ನು ಆರ್ಥಿಕವಾಗಿ ಬಲವರ್ಧನೆಗೊಳಿಸುವ ಉದ್ದೇಶದಿಂದ ಹಲವಾರು ಅಂಶಗಳನ್ನ ಅಳವಡಿಸುವ ಅಗತ್ಯತೆಯಿದೆ. ಈ ನಿಟ್ಟಿನಲ್ಲಿ ಕೆರೆಗೆ ಸೇರಿದ ನೀರು ನಿಲ್ಲುವ ಅಂಗಳ ಹೊರತುಪಡಿಸಿ ಇತರೆ ಪ್ರದೇಶದಲ್ಲಿ ಹುಲ್ಲು ಬೆಳೆದು ಮಾರಾಟ ಮಾಡುವುದು, ಕೆರೆ ಅಂಚು ಹಾಗೂ ಕೆಳಭಾಗದಲ್ಲಿ ಹಣ್ಣು ಅಥವಾ ತೆಂಗಿನ ಗಿಡಗಳನ್ನ ನೆಟ್ಟು ಅದರಿಂದ ಆದಾಯ ಬರುವಂತೆ ಮಾಡುವುದು, ಮೀನುಗಾರಿಕೆ ಉತ್ಪನ್ನದಲ್ಲಿ ಶೇಕಡಾವಾರು ಸಂಘಗಳಿಗೆ ಆದಾಯ ಹಂಚಿಕೆ, ಜಲಕ್ರೀಡೆ/ಬೋಟಿಂಗ್ ಆದಾಯದಲ್ಲಿ ಕೆರೆ ಸಂಘಕ್ಕೆ ಪಾಲು, ಜಾಹೀರಾತು ಫಲಕಗಳ ಆದಾಯದಲ್ಲಿ ಪಾಲು ಹೀಗೆ ಹಲವಾರು ಆರ್ಥಿಕ ಮೂಲಗಳ ಬಗ್ಗೆ ಸಭೆಯಲ್ಲಿ ವ್ಯಾಪಕವಾಗಿ ಚರ್ಚಿಸಲಾಯಿತು.

ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೆರೆ ಬಳಕೆದಾರರ ಸಂಘಗಳ ಬಲವರ್ಧನೆಗೆ ಮಾರ್ಗಸೂಚಿಗಳ ಪ್ರಸ್ತಾವನೆಯನ್ನ ಸಿದ್ದಪಡಿಸಲಾಗುವುದು. ಈ ಪ್ರಸ್ತಾವನೆಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು ಹಾಗೂ ಅವರ ಒಪ್ಪಿಗೆಯ ನಂತರ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.

ಕಾಲುವೆ, ಕೆರೆ ಜಲಾಶಯದ ಪ್ರತಿ ಎಂಸಿಎಫ್​ಟಿ ನೀರಿಗೆ ₹3 ಲಕ್ಷ ರಾಜಧನ:ನೀರಿನ ಕರ ದರ ಇನ್ನು ಮುಂದೆ ವಾರ್ಷಿಕ ಹಣದುಬ್ಬರ ಸೂಚ್ಯಂಕಕ್ಕೆ ಸಂವಾದಿಯಾಗಿ ಹೆಚ್ಚಳ ಮಾಡುವ ಷರತ್ತಿನೊಂದಿಗೆ ನೀರಿನ ಕರ ವಿಧಿಸುವಿಕೆ ನಿಯಮಕ್ಕೆ ತಿದ್ದುಪಡಿ ಮಾಡಲಾಗಿದೆ. ಪ್ರತಿ ಎಂಸಿಎಫ್​ಟಿ ನೀರಿಗೆ ಮೂರು ಲಕ್ಷ ರೂಪಾಯಿ ರಾಜಧನ ನಿಗದಿ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಕಳೆದ ವಾರ ಅನುಮೋದನೆ ನೀಡಲಾಗಿತ್ತು.

ಇದನ್ನೂ ಓದಿ:ಕನ್ನಡ ನಾಮಫಲಕ ಕಡ್ಡಾಯಕ್ಕೆ ಕಾನೂನು ಮಾಡುತ್ತಿದ್ದೇವೆ: ಸಚಿವ ತಂಗಡಗಿ

ABOUT THE AUTHOR

...view details