ಕರ್ನಾಟಕ

karnataka

ETV Bharat / state

ಶಾಸಕ ಶರತ್ ಬಚ್ಚೇಗೌಡ ಹಕ್ಕುಚ್ಯುತಿ ಮಂಡನೆ.. ಸಂಪೂರ್ಣ ವರದಿ ತರಿಸಿ ಕ್ರಮ ಎಂದ ಬೊಮ್ಮಾಯಿ

ಹೊಸಕೋಟೆಯಲ್ಲಿ ಕಾರ್ಯಕ್ರಮ ನಡೆಯುತ್ತದೆ. ಶನಿವಾರ ಬೆಳಗ್ಗೆ ಕಾರ್ಯಕ್ರಮಕ್ಕೆ ಸಚಿವರನ್ನು ಆಹ್ವಾನಿಸುತ್ತಾರೆ. ಇದೆಲ್ಲವೂ ನಗರಸಭೆಯ ಆಯುಕ್ತರು ಮಾಡ್ತಾರೆ. ನಾನು ಸ್ಥಳೀಯ ಶಾಸಕ. ಸ್ಥಳೀಯ ಶಾಸಕನಿಗೆ ಆಹ್ವಾನ ಕೊಡಿಸುವಷ್ಟೂ ಸೌಜನ್ಯವಿಲ್ವೇ ಎಂದು ಪ್ರಶ್ನಿಸಿದರು..

Bring back the full report then take action says Bommayi
ಸಂಪೂರ್ಣ ವರದಿ ತರಿಸಿ ಕ್ರಮ ಎಂದ ಬೊಮ್ಮಾಯಿ

By

Published : Feb 1, 2021, 7:01 PM IST

ಬೆಂಗಳೂರು :ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡರ ಹಕ್ಕುಚ್ಯುತಿಯಾಗಿರುವುದರ ಬಗ್ಗೆ ಸಂಪೂರ್ಣ ವರದಿ ತರಿಸಿ ಕ್ರಮಕೈಗೊಳ್ಳುತ್ತೇವೆ ಎಂದು ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಶಾಸಕ ಶರತ್ ಬಚ್ಚೇಗೌಡ ಹಕ್ಕುಚ್ಯುತಿ ಮಂಡನೆ ಸಂಬಂಧ ಉತ್ತರಿಸಿದ ಅವರು, ಯಾವುದೇ ಸದಸ್ಯರ ಹಕ್ಕು ಮೊಟಕುಗೊಳಿಸಲು ಸರ್ಕಾರ ಮುಂದಾಗಿಲ್ಲ. ನಮ್ಮ ಅನುಭವದಲ್ಲಿ ಹಲವಾರು ಸಂದರ್ಭದಲ್ಲಿ ಕೆಲವೊಮ್ಮೆ ಕಾರ್ಡ್ ಮುದ್ರಿಸಲ್ಲ. ಸ್ಥಳೀಯ ಶಾಸಕರನ್ನು ಆಹ್ವಾನಿಸುವುದು ಶಿಷ್ಟಾಚಾರ.

ಅದನ್ನು ಅನುಸರಿಸಬೇಕು. ಈ ಸಂಬಂಧ ಸಂಪೂರ್ಣ ವರದಿ ತರಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ಎಲ್ಲಾ ಶಾಸಕರ ಹಕ್ಕನ್ನು ಕಾಪಾಡುವುದು ನಮ್ಮ ಜವಾಬ್ದಾರಿ. ಅದನ್ನು ನಮ್ಮ ಸರ್ಕಾರ ಮಾಡಲಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಡಿಸಿಗಳಿಗೆ ಪತ್ರ ಬರೆದು ದೊಡ್ಡದಾಗಲಿ ಅಥವಾ ಸಣ್ಣ ಕಾರ್ಯಕ್ರಮವಾಗಲಿ ಶಿಷ್ಟಾಚಾರ ಪಾಲನೆ ಮಾಡಬೇಕು ಎಂದು ಸೂಚನೆ ನೀಡಲಾಗುತ್ತದೆ ಎಂದರು.

ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಯಾವ ಶಾಸಕರ ಹಕ್ಕುಚ್ಯುತಿ ಆಗಬಾರದು. ನಮ್ಮ ಪಕ್ಷ ಆಗಲಿ ನಿಮ್ಮ ಪಕ್ಷ ಆಗಲಿ ಹಕ್ಕುಚ್ಯುತಿ ಆಗಬಾರದು. ನಾಳೆ ಕಾರ್ಯಕ್ರಮ ಇದೆ ಬನ್ನಿ ಎಂದು ಅಧಿಕಾರಿಗಳು ಹೇಳಿದ್ರೆ ಹೋಗೋಕಾಗುತ್ತದಾ?. ಆಹ್ವಾನ ಪತ್ರ ಮುದ್ರಿಸಿ ಶಿಷ್ಟಾಚಾರ ಪಾಲನೆ ‌ಮಾಡಬೇಕು. ಈ ಪ್ರಕರಣವನ್ನು ಹಕ್ಕು ಬಾಧ್ಯತಾ ಸಮಿತಿ ತನಿಖೆ ಮಾಡಲಿ ಎಂದು ಆಗ್ರಹಿಸಿದರು.

ಓದಿ: ಹಕ್ಕುಚ್ಯುತಿ ಮಂಡನೆಗೆ ಅವಕಾಶ ಕೊಡಬೇಕೆಂದು ಶರತ್ ಬಚ್ಚೇಗೌಡ ಧರಣಿ: ಕಾಂಗ್ರೆಸ್- ಜೆಡಿಎಸ್ ಸದಸ್ಯರ ಬೆಂಬಲ

ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಕಾಗೇರಿ, ಶಿಷ್ಠಾಚಾರ ಉಲ್ಲಂಘನೆ ನಡೆಯುತ್ತಿರುತ್ತದೆ‌. ಶಾಸಕರ ಹಕ್ಕು ಚ್ಯುತಿಯಾಗುವುದನ್ನು ನಾವು ಒಟ್ಟಾಗಿ ನಿಭಾಯಿಸಬೇಕು. ಸರ್ಕಾರ ಈ ಬಗ್ಗೆ ಗಮನ ಹರಿಸಿ, ಕ್ರಮ ಕೈಗೊಳ್ಳಬೇಕು. ಇದಕ್ಕೆ ನಾನೂ ನ್ಯಾಯ ಒದಗಿಸಲು ಯತ್ನಿಸುತ್ತೇನೆ. ವರದಿ ಪರಿಶೀಲನೆ ನಡೆಸಿದ ಬಳಿಕ ನಾನೂ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದರು.

ಶರತ್ ಬಚ್ಚೇಗೌಡ ಆಕ್ರೋಶ :ಭೋಜನದ ಬಳಿಕ ವಿಧಾನಸಭೆ ಕಲಾಪ ಪುನರಾರಂಭವಾಗುತ್ತಿದ್ದ ಹಾಗೇ, ಶಾಸಕ ಶರತ್ ಬಚ್ಚೇಗೌಡ ಹಕ್ಕುಚ್ಯುತಿ ಮಂಡನೆ ಮಾಡಿದರು. ಈ ವೇಳೆ ಮಾತನಾಡುತ್ತಾ, ಅಧಿಕಾರ ಎನ್ನುವುದು ಶಾಶ್ವತವಲ್ಲ. ಇವತ್ತು ಇಲ್ಲಿ ಕೂತವರು ನಾಳೆ ಅಲ್ಲಿ ಕೂರಬಹುದು. ಅಲ್ಲಿ ಕೂತವರು ಇಲ್ಲಿ‌ಬರಬಹುದು. ಅದಕ್ಕೆ ಅಧಿಕಾರ ಯಾವತ್ತು ಶಾಶ್ವತವಲ್ಲ.

ಹೊಸಕೋಟೆಯಲ್ಲಿ ಕಾರ್ಯಕ್ರಮ ನಡೆಯುತ್ತದೆ. ಶನಿವಾರ ಬೆಳಗ್ಗೆ ಕಾರ್ಯಕ್ರಮಕ್ಕೆ ಸಚಿವರನ್ನು ಆಹ್ವಾನಿಸುತ್ತಾರೆ. ಇದೆಲ್ಲವೂ ನಗರಸಭೆಯ ಆಯುಕ್ತರು ಮಾಡ್ತಾರೆ. ನಾನು ಸ್ಥಳೀಯ ಶಾಸಕ. ಸ್ಥಳೀಯ ಶಾಸಕನಿಗೆ ಆಹ್ವಾನ ಕೊಡಿಸುವಷ್ಟೂ ಸೌಜನ್ಯವಿಲ್ವೇ ಎಂದು ಪ್ರಶ್ನಿಸಿದರು.

ಇದನ್ನು ಪ್ರಶ್ನಿಸಿ ನಮ್ಮ ಬೆಂಬಲಿಗರು ಪ್ರತಿಭಟನೆ ಮಾಡ್ತಾರೆ. ಧರಣಿ ಮಾಡಿದವರ ಮೇಲೆ ಲಾಠಿಚಾರ್ಜ್ ಮಾಡ್ತಾರೆ. ಲಾಠಿಚಾರ್ಜ್‌ನಿಂದ ಹಲವರು ಗಾಯಗೊಂಡಿದ್ದಾರೆ. ಸಬ್ ಇನ್​​ಸ್ಪೆಕ್ಟರ್ ಬಾಯಿಬಿಟ್ಟರೆ ಬಾರಿಸ್ತೇವೆ ಅಂತಾರೆ. ನಮ್ಮವರ ಮೇಲೆ ಧಮ್ಕಿ ಹಾಕ್ತಾರೆ. ಶಾಂತಿಯನ್ನು ರಕ್ಷಣೆ ಮಾಡಬೇಕು. ಸಮಾಜಕ್ಕೆ ಸೇವೆ ಮಾಡಬೇಕು ಎಂದು ಬಂದವರು ನಾವು.

ಇವತ್ತು ನಮ್ಮನ್ನ ಹೊಡೆದು ಕೋರ್ಟ್ ಕೇಸ್ ಹಾಕ್ತಾರೆ. ಇಲ್ಲಿ ಯಾರು ಮೇಲೂ ಅಲ್ಲ ಕೆಳಗೂ ಅಲ್ಲ. ಇಲ್ಲಿ ಸಭ್ಯತೆಯ ಪ್ರಶ್ನೆ ಎದುರಾಗಿದೆ. ಸಭ್ಯತೆಯನ್ನು ಯಾರೂ ಮರೆಯಬಾರದು. ಇದು ನನ್ನೊಬ್ಬನ ಶಿಷ್ಟಾಚಾರದ ಉಲ್ಲಂಘನೆಯಲ್ಲ. ಇದು ಇಡೀ ಸದನದ ಸದಸ್ಯರ ಶಿಷ್ಟಾಚಾರದ ಪ್ರಶ್ನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details