ಕರ್ನಾಟಕ

karnataka

ETV Bharat / state

ಒಬ್ಬರು ಲಕ್ಷಾಧಿಪತಿ, ಮತ್ತೊಬ್ಬರು ಕೋಟ್ಯಧಿಪತಿ.. ಇದು ರಾಜ್ಯಸಭೆ ಬಿಜೆಪಿ ಅಭ್ಯರ್ಥಿಗಳ ಆಸ್ತಿ ವಿವರ.. - ರಾಜ್ಯಸಭಾ ಚುನಾವಣೆ

ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿಗಳಾಗಿ ಆಯ್ಕೆಯಾಗಿರುವ ಅಶೋಕ್ ಗಸ್ತಿ,ಈರಣ್ಣ ಕಡಾಡಿ ತಮ್ಮ ಆಸ್ತಿ ವಿವರ ಘೋಷಣೆ ಮಾಡಿದ್ದಾರೆ.

dsdd
ರಾಜ್ಯಸಭೆ ಬಿಜೆಪಿ ಅಭ್ಯರ್ಥಿಗಳ ಆಸ್ತಿ ವಿವರ

By

Published : Jun 9, 2020, 10:34 PM IST

ಬೆಂಗಳೂರು :ಬಿಜೆಪಿಯಿಂದ ರಾಜ್ಯಸಭೆಗೆ ಸ್ಪರ್ಧೆ ಮಾಡಿರುವ ಅಶೋಕ್ ಗಸ್ತಿ ಕೇವಲ 2.85 ಲಕ್ಷ ಮೌಲ್ಯದ ಸಂಪತ್ತು ಹೊಂದಿದ್ದಾರೆ. ಗಸ್ತಿಗಿಂತ ಅವರ ಪತ್ನಿಯೇ ಸಿರಿವಂತೆಯಾಗಿದ್ದಾರೆ.

ಬಿಜೆಪಿ ಅಭ್ಯರ್ಥಿ ಆಶೋಕ್ ಗಸ್ತಿ ಅವರ ಆಸ್ತಿ ವಿವರ ನೋಡಿದ್ರೆ ನಗದು-1,00,900, ಬಜಾಜ್ ಸ್ಕೂಟರ್ 1996 ಮಾಡೆಲ್ ಟೂ ವ್ಹೀಲರ್, ವಿಮಾ ಪಾಲಿಸಿಗಳು ಸೇರಿ ಚರಾಸ್ತಿ- 2,85,673 ಲಕ್ಷ ರೂ. ಮೌಲ್ಯ. ಪತ್ನಿ ಸುಮಾ ಗಸ್ತಿ ಹೆಸರಲ್ಲಿ 50 ಗ್ರಾಂ ಚಿನ್ನ,1000 ಗ್ರಾಂ ಬೆಳ್ಳಿ, 50,369 ರೂ. ನಗದು ಸೇರಿ ಒಟ್ಟು 4,45,375 ಲಕ್ಷ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಪುತ್ರಿ ನೇಹಾ 40 ಗ್ರಾಂ ಚಿನ್ನ, 2,05000 ರೂ. ಮೌಲ್ಯದ ಚರಾಸ್ತಿ, ಎರಡನೇ ಪುತ್ರಿ ನಿತ್ಯಾ 20 ಗ್ರಾಂ ಚಿನ್ನ, 2,04,000 ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಇನ್ನೊಂದು ವಿಶೇಷ ಎಂದರೆ ಗಸ್ತಿಗಿಂತಲೂ ಪತ್ನಿ ಸುಮಾ ಗಸ್ತಿ ಶ್ರೀಮಂತೆಯಾಗಿದ್ದಾರೆ. 1,59,702 ರೂ. ಮೌಲ್ಯದ ಸ್ವತ್ತು ಪತ್ನಿ ಬಳಿ ಇದೆ. ಇಡೀ ಕುಟುಂಬದ ಆಸ್ತಿ ಮೌಲ್ಯ 11,40,048 ರೂ.ಮಾತ್ರ ಹೊಂದಿದ್ದಾರೆ.

ಮತ್ತೊಬ್ಬ ಬಿಜೆಪಿ ಅಭ್ಯರ್ಥಿ ಈರಣ್ಣ ಕಡಾಡಿ ಮೂರು ಕೋಟಿ ಸಂಪತ್ತಿನ ಒಡೆಯರಾಗಿದ್ದಾರೆ. ಸಾಮಾನ್ಯ ಕಾರ್ಯಕರ್ತರಾದರೂ ಕೋಟಿ ಕೋಟಿ ಸಂಪತ್ತು ಹೊಂದಿರುವ ಕಡಾಡಿ ಆಸ್ತಿ ವಿವರ ಹೀಗಿದೆ.

ಚರಾಸ್ತಿ 1,02,62,417 ಕೋಟಿ ರೂಪಾಯಿ ಮೌಲ್ಯದ ಆಸ್ತಿ. ಒಂದು ಟೊಯೋಟಾ ಇನ್ನೋವಾ ಕಾರು,60 ಗ್ರಾಂ ಚಿನ್ನ ಹೊಂದಿದ್ದಾರೆ. ಸ್ಥಿರಾಸ್ತಿ 1,33,00,000 ಕೋಟಿ. ಪತ್ನಿ ಸುಮಿತ್ರ ಚರಾಸ್ತಿ 9,26,079,100 ಗ್ರಾಂ ಚಿನ್ನ,ಪತ್ನಿ ಸ್ಥಿರಾಸ್ತಿ 11,28,000, ಪುತ್ರ ಸತೀಶ್ ಈರಣ್ಣ ಕಡಾಡಿ ಚರಾಸ್ತಿ 11,01,579,ಸ್ಥಿರಾಸ್ತಿ, 24,50,000 ಲಕ್ಷ, ಸಂಜಯ್ ಈರಣ್ಣ ಕಡಾಡಿ,ಚರಾಸ್ತಿ 8,04,941 ಹೊಂದಿದ್ದಾರೆ.

ABOUT THE AUTHOR

...view details