ಕರ್ನಾಟಕ

karnataka

ETV Bharat / state

ಯಶವಂತಪುರ ಕ್ಷೇತ್ರದ ಮೂರೂ ಪಕ್ಷದ ಅಭ್ಯರ್ಥಿಗಳು ಕೋಟ್ಯಾಧಿಪತಿಗಳು! - ಉಪಚುನಾವಣೆ

ಯಶವಂತಪುರ ಕ್ಷೇತ್ರದಲ್ಲಿ ಮೂರೂ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿ ಅಖಾಡಕ್ಕೆ ಧುಮುಕ್ಕಿದ್ದಾರೆ. ಬಿಜೆಪಿ ಅಭ್ಯರ್ಥಿ ಎಸ್ ಟಿ ಸೋಮಶೇಖರ್, ಕಾಂಗ್ರೆಸ್ ಅಭ್ಯರ್ಥಿ ಪಿ.ನಾಗರಾಜ್ ಮತ್ತು ಜೆಡಿಎಸ್ ಕ್ಯಾಂಡಿಡೇಟ್‌ ಜವರಾಯಿಗೌಡ ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾ ಆಯೋಗಕ್ಕೆ ತಮ್ಮ ಆಸ್ತಿ ವಿವರ ಘೋಷಣೆ ಮಾಡಿಕೊಂಡಿದ್ದು, ಮೂರು ಅಭ್ಯರ್ಥಿಗಳು ಕೋಟ್ಯಾಧಿಪತಿಗಳಾಗಿದ್ದಾರೆ.

three party candidates ,ಮೂರೂ ಪಕ್ಷದ ಅಭ್ಯರ್ಥಿಗಳು

By

Published : Nov 18, 2019, 7:38 PM IST

ಬೆಂಗಳೂರು:ಯಶವಂತಪುರ ಕ್ಷೇತ್ರದ ಉಪಸಮರ ಜಿದ್ದಾಜಿದ್ದಿನಿಂದ ಕೂಡಿದ್ದು, ಇಂದು ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಎಸ್ ಟಿ ಸೋಮಶೇಖರ್, ಕಾಂಗ್ರೆಸ್ ಅಭ್ಯರ್ಥಿ ಪಿ.ನಾಗರಾಜ್ ಮತ್ತು ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾ ಆಯೋಗಕ್ಕೆ ತಮ್ಮ ಆಸ್ತಿ ವಿವರ ಘೋಷಣೆ ಮಾಡಿಕೊಂಡಿದ್ದು, ಮೂರು ಅಭ್ಯರ್ಥಿಗಳು ಕೋಟ್ಯಾಧಿಪತಿಗಳಾಗಿದ್ದಾರೆ.

ಎಸ್.ಟಿ.ಸೋಮಶೇಖರ್ ಆಸ್ತಿ ವಿವರ:ಬಿಜೆಪಿ ಅಭ್ಯರ್ಥಿ ಎಸ್ ಟಿ ಸೋಮಶೇಖರ್ ಒಟ್ಟು 10.23 ಕೋಟಿ ರೂ.ನ ಒಡೆಯರಾಗಿದ್ದಾರೆ. ಎಸ್ ಟಿ ಸೋಮಶೇಖರ್ ಒಟ್ಟು 2.09 ಕೋಟಿ ರೂ.‌ಚರಾಸ್ತಿ ಹೊಂದಿದ್ದು, ಪತ್ನಿ‌ ಎನ್.ರಾಧ ಹೆಸರಲ್ಲಿ ಒಟ್ಟು 39.18 ಲಕ್ಷ ರೂ. ಚರಾಸ್ತಿ ಇದೆ. ಇನ್ನು, ಪುತ್ರ ಎಸ್.ನಿಶಾಂತ್ ಹೆಸರಲ್ಲಿ 7.46 ಲಕ್ಷ ರೂ. ಚರಾಸ್ತಿ ಇದೆ. ಎಸ್.ಟಿ.ಸೋಮಶೇಖರ್ ಹೆಸರಲ್ಲಿ ಒಟ್ಟು 8.14 ಕೋಟಿ ರೂ. ಸ್ಥಿರಾಸ್ತಿ , ಪತ್ನಿ ಹೆಸರಲ್ಲಿ 3.72 ಕೋಟಿ ರೂ., ಪುತ್ರನ ಹೆಸರಲ್ಲಿ 3.75 ಕೋಟಿ ರೂ. ಸ್ಥಿರಾಸ್ತಿ ಇದೆ. ಎಸ್.ಟಿ.ಸೋಮಶೇಖರ್ ಒಟ್ಟು 1.22 ಕೋಟಿ ರೂ. ಸಾಲ ಮಾಡಿದ್ದು, ಪತ್ನಿ ಹೆಸರಲ್ಲಿ 32.20 ಲಕ್ಷ ರೂ. ಸಾಲ ಇದೆ.

ಜವರಾಯಿಗೌಡ ಆಸ್ತಿವಿವರ:ಜೆಡಿಎಸ್ ಅಭ್ಯರ್ಥಿ ಜವರಾಯಿ ಗೌಡ ಒಟ್ಟು 59.30 ಕೋಟಿ ರೂ. ಆಸ್ತಿಯ ಒಡೆಯರಾಗಿದ್ದಾರೆ. ಈ ಪೈಕಿ ಜವರಾಯಿಗೌಡರ ಚರಾಸ್ತಿ 15.93 ಕೋಟಿ ರೂ. ಇದ್ದರೆ, ಅವರ ಪತ್ನಿ ಗಾಯತ್ರಿ 8.33 ಕೋಟಿ ರೂ. ಹೊಂದಿದ್ದಾರೆ. ಜವರಾಯಿ ಗೌಡ ಒಟ್ಟು 44.37 ಕೋಟಿ ರೂ.‌ ಸ್ಥಿರಾಸ್ತಿ ಹೊಂದಿದ್ದು, ಪತ್ನಿ 85.56 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ.ಜವರಾಯಿ ಗೌಡರ ಹೆಸರಲ್ಲಿರುವ ಒಟ್ಟು ಸಾಲ 32 ಕೋಟಿ ರೂ. ಪತ್ನಿ ಹೆಸರಲ್ಲಿ ಒಟ್ಟು 28.18 ಕೋಟಿ ರೂ. ಸಾಲ ಇದೆ ಎಂದು ಘೋಷಿಸಿಕೊಂಡಿದ್ದಾರೆ.

ಪಿ.ನಾಗರಾಜ್ ಆಸ್ತಿ ವಿವರ:ಕಾಂಗ್ರೆಸ್ ಅಭ್ಯರ್ಥಿ ಪಾಳ್ಯ ನಾಗರಾಜ್ ಒಟ್ಟು 23 ಕೋಟಿ ರೂ‌. ಆಸ್ತಿ ಒಡೆಯರಾಗಿದ್ದಾರೆ. ಪಿ.ನಾಗರಾಜ್ ಒಟ್ಟು 13.14 ಕೋಟಿ ರೂ.‌ ಚರಾಸ್ತಿ ಹೊಂದಿದ್ದು, ಪತ್ನಿ ತುಂಗಾ ಹೆಸರಲ್ಲಿ 11.61 ಕೋಟಿ ರೂ, ಪುತ್ರ ಪುನೀತ್ ಹೆಸರಲ್ಲಿ 3.49 ಲಕ್ಷ ರೂ. ಚರಾಸ್ತಿ ಇದೆ. ನಾಗರಾಜ್ ಹೆಸರಲ್ಲಿ ಒಟ್ಟು 10 ಕೋಟಿ ರೂ. ಸ್ಥಿರಾಸ್ತಿ ಇದ್ದರೆ, ಪತ್ನಿ ಹೆಸರಲ್ಲಿ 25 ಲಕ್ಷ ರೂ. ಸ್ಥಿರಾಸ್ತಿ ಇದೆ. ಮಗನ ಹೆಸರಲ್ಲಿ 1 ಕೋಟಿ ರೂ. ಸ್ಥಿರಾಸ್ತಿ ಇದೆ. ಪಿ.ನಾಗರಾಜ್ ಒಟ್ಟು 3.55 ಕೋಟಿ ರೂ. ಸಾಲ ಮಾಡಿಕೊಂಡಿದ್ದಾರೆ.

ABOUT THE AUTHOR

...view details