ಕರ್ನಾಟಕ

karnataka

ETV Bharat / state

ಪ್ರವಾಸಿ ವೀಸಾದಡಿ ಬಂದು ಧರ್ಮಪ್ರಚಾರ: 19 ವಿದೇಶಿಗರ ವಿರುದ್ಧ ಎಫ್ಐಆರ್ - Foreigners

ಬೆಂಗಳೂರಿನ ಜೆಜೆ ನಗರ ವ್ಯಾಪ್ತಿಯಲ್ಲಿ ಧರ್ಮ ಪ್ರಚಾರ ನಡೆಸುತ್ತಿದ್ದ 19 ವಿದೇಶಿ ಪ್ರಜೆಗಳನ್ನು ಪೊಲೀಸರು ವಶಕ್ಕೆ ಪಡೆದು ಎಫ್​ಐಆರ್​ ದಾಖಲಿಸಿದ್ದಾರೆ.

police
ಪೊಲೀಸ್​ ಇಲಾಖೆ

By

Published : Apr 8, 2020, 1:43 PM IST

ಬೆಂಗಳೂರು: ವಿದೇಶದಿಂದ ಬಂದು ಕಾನೂನುಬಾಹಿರವಾಗಿ ಧರ್ಮ ಪ್ರಚಾರದಲ್ಲಿ ತೊಡಗಿದ್ದವರ ವಿರುದ್ದ ಜೆ.ಜೆನಗರ ಠಾಣೆಯಲ್ಲಿ ಎಫ್ಐಆರ್​ ದಾಖಲಾಗಿದೆ.‌

ಇಂಡೋನೇಷ್ಯಾ ಮತ್ತು ಕಿರ್ಗಿಸ್ತಾನ್​ ಮೂಲದ ವಿದೇಶಿಗರು ಮೊದಲು‌ ದೆಹಲಿಯ ತಬ್ಲಿಘಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಧರ್ಮ ಪ್ರಚಾರ ಮಾಡೋದಕ್ಕೆ ಮಾರ್ಚ್ ಮೊದಲ ವಾರದಲ್ಲಿ ಪ್ರವಾಸಿ ವೀಸಾದಡಿ ಭಾರತಕ್ಕೆ ಬಂದಿದ್ದರು.

ಭಾರತಕ್ಕೆ ಬಂದವರು ಬೆಂಗಳೂರಿನ ಜೆಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಾದರಾಯನಪುರದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸುತ್ತಿದ್ದರು ಎಂಬ ಮಾಹಿತಿಯ ಮೇರೆಗೆ 19 ಮಂದಿಯನ್ನು ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರು ವಶಕ್ಕೆ ಪಡೆದು ಇಂದಿರಾ ನಗರದ ಸಿ.ವಿ.ರಾಮನ್ ಆಸ್ಪತ್ರೆಗೆ ಕರೆದೊಯ್ದು ಕೊರೊನಾ ತಪಾಸಣೆ ನಡೆಸಿದ ನಂತರ 19 ಜನರ ವರದಿ ನೆಗೆಟಿವ್​ ಬಂದ ಹಿನ್ನಲೆಯಲ್ಲಿ ಸಾರಾಯಿಪಾಳ್ಯದಲ್ಲಿರುವ ಹಜ್ ಭವನದಲ್ಲಿ ಅವರನ್ನು ಕ್ವಾರಂಟೈನ್ ಮಾಡಲಾಗಿದೆ.

ಕಾನೂನು ಉಲ್ಲಂಘಿಸಿ ಧರ್ಮ ಪ್ರಚಾರದಲ್ಲಿ ತೊಡಗಿದ್ದ 19 ಮಂದಿಯ ವಿರುದ್ಧ ಕಾನೂನು ಉಲ್ಲಂಘನೆ ಪ್ರಕರಣದಡಿ ಜೆಜೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details