ಬೆಂಗಳೂರು:ನಗರದಲ್ಲಿ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದರ ಪೈಕಿ 27 ಎಎಸ್ಐಗಳು ಪಿಎಸ್ಐಗಳಾಗಿ ಪ್ರಮೋಷನ್ ಪಡೆದಿದ್ದಾರೆಂದು ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ಮುರುಗನ್ ಆದೇಶ ಹೊರಡಿಸಿದ್ದಾರೆ.
27 ಎಎಸ್ಐಗಳು ಪಿಎಸ್ಐಗಳಾಗಿ ಬಡ್ತಿ... ಹೆಚ್ಚುವರಿ ಪೊಲೀಸ್ ಆಯುಕ್ತರಿಂದ ಆದೇಶ - Order of Additional Superintendent of Police S. Murugan
ನಗರದಲ್ಲಿ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದರ ಪೈಕಿ 27 ಎಎಸ್ಐಗಳು ಪಿಎಸ್ಐಗಳಾಗಿ ಪ್ರಮೋಷನ್ ಪಡೆದಿದ್ದಾರೆಂದು ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ಮುರುಗನ್ ಆದೇಶ ಹೊರಡಿಸಿದ್ದಾರೆ.
ಸುಪ್ರೀಂಕೋರ್ಟ್ ನಿಯಮದ ಅನ್ವಯ ಎಎಸ್ಐ ಆಗಿ ಇಲಾಖೆಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿ, ಪಿಎಸ್ಐ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಜೇಷ್ಠತೆ ಆಧಾರದ ಮೇಲೆ ಪಿಎಸ್ಐ ಆಗಿ ಬಡ್ತಿ ಪಡೆಯಬಹುದು. ಇದೇ ರೀತಿ ಬೆಂಗಳೂರು ನಗರದ ವಿವಿಧ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ 27 ಅರ್ಹ ಎಎಸ್ಐಗಳು ಪಿಎಸ್ಐ ಆಗಿ ಪ್ರಮೋಷನ್ ಪಡೆದಿದ್ದಾರೆ.
ಈ ಬಡ್ತಿಯು ತಾತ್ಕಾಲಿಕವಾಗಿದ್ದು, ಯಾವುದೇ ಸಮಯದಲ್ಲಾದರೂ ಆದೇಶ ರದ್ದುಗೊಳ್ಳಬಹುದು. ಪ್ರಭಾರಿ ಪಿಎಸ್ಐಗಳಾಗಿ ಕಾರ್ಯನಿರ್ವಹಿಸಲಿರುವ ಇವರಿಗೆ ಬಡ್ತಿ ಬಳಿಕ ವೇತನ ಹಾಗೂ ಸೌಲಭ್ಯದಲ್ಲಿ ಬದಲಾವಣೆ ಇರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.