ಬೆಂಗಳೂರು:ಹೊಸ ವರ್ಷಕ್ಕೆ ಒಂದು ದಿನ ಮುನ್ನವೇ ಹಲವು ಐಪಿಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ. ಬಡ್ತಿಯೊಂದಿಗೆ ಕೆಲವರನ್ನು ಹೊಸ ಹುದ್ದೆಗಳಿಗೆ ವರ್ಗಾಯಿಸಲಾಗಿದ್ದು, ಇನ್ನೂ ಕೆಲವರನ್ನು ಅದೇ ಹುದ್ದೆಗಳಲ್ಲಿ ಮುಂದುವರೆಸಲಾಗಿದೆ.
ಐಪಿಎಸ್ ಅಧಿಕಾರಿಗಳ ಬಡ್ತಿ, ವರ್ಗಾವಣೆ: ಹೊಸ ವರ್ಷಕ್ಕೂ ಮುನ್ನ ಸರ್ಕಾರದ ಸರ್ಜರಿ - ಇಶಾ ಪಂತ್
ಹಲವು ಐಪಿಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿರುವ ರಾಜ್ಯ ಸರ್ಕಾರ, ಕೆಲವರನ್ನು ಬೇರೆಡೆ ವರ್ಗಾಯಿಸಿದೆ.
ಐಪಿಎಸ್ ಅಧಿಕಾರಿಗಳಿಗೆ ಹೊಸ ವರ್ಷದ ಗಿಫ್ಟ್: ರಾಜ್ಯ ಸರ್ಕಾರದಿಂದ ಬಡ್ತಿ, ವರ್ಗಾವಣೆ
Published : Dec 31, 2023, 9:56 AM IST
ವರ್ಗಾವಣೆಯಾದ ಅಧಿಕಾರಿಗಳು:
- ಕಮಲ್ ಪಂತ್ - ಪೊಲೀಸ್ ಮಹಾನಿರ್ದೇಶಕರು ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮಹಾನಿರ್ದೇಶಕರು, ಗೃಹರಕ್ಷಕ ದಳದ ಕಮಾಂಡೆಂಟ್ ಜನರಲ್, ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಯ ಮಹಾನಿರ್ದೇಶಕರು, ಕರ್ನಾಟಕ ರಾಜ್ಯದ ನಾಗರಿಕ ರಕ್ಷಣಾ ನಿರ್ದೇಶಕ.
- ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಕುಮಾರ್ - ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ವಿಶೇಷ ಆಯುಕ್ತ.
- ಕರ್ನಾಟಕ ರಾಜ್ಯ ಮೀಸಲು ಪೋಲೀಸ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸೀಮಂತ್ ಕುಮಾರ್ ಸಿಂಗ್ - ಬಿಎಂಟಿಎಫ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ.
- ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹರಿಶೇಖರನ್ - ಗೃಹರಕ್ಷಕ ದಳದ ಹೆಚ್ಚುವರಿ ಕಮಾಂಡೆಂಟ್ ಹಾಗೂ ಬೆಂಗಳೂರಿನ ನಾಗರಿಕ ರಕ್ಷಣಾ ಇಲಾಖೆಯ ಪದನಿಮಿತ್ತ ಹೆಚ್ಚುವರಿ ನಿರ್ದೇಶಕ.
- ಎಂ.ನಂಜುಂಡಸ್ವಾಮಿ - ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆ)
- ಡಾ.ಚಂದ್ರಗುಪ್ತ - ಹೆಚ್ಚುವರಿ ಪೊಲೀಸ್ ಆಯುಕ್ತರು (ಅಪರಾಧ ವಿಭಾಗ)
- ಡಾ.ಕೆ.ತ್ಯಾಗರಾಜನ್ - ಐಜಿಪಿ (ಪೂರ್ವ ವಲಯ, ದಾವಣಗೆರೆ)
- ಅಮಿತ್ ಸಿಂಗ್ - ಉಪ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ (ಪಶ್ಚಿಮ ವಲಯ, ಮಂಗಳೂರು)
- ಡಾ.ವೈ.ಎಸ್.ರವಿಕುಮಾರ್ - ಉಪ ಪೊಲೀಸ್ ಮಹಾನಿರೀಕ್ಷಕರು, ಬೆಂಗಳೂರು (ಗುಪ್ತಚರ ವಿಭಾಗ)
- ಶಂತನು ಸಿನ್ಹಾ - ಉಪ ಪೊಲೀಸ್ ಮಹಾನಿರೀಕ್ಷಕ
- ಡಾ.ದಿವ್ಯಾ ವಿ.ಗೋಪಿನಾಥ್ - ಉಪ ಪೊಲೀಸ್ ಮಹಾನಿರೀಕ್ಷಕರು (ವಿಧಿ ವಿಜ್ಞಾನ ಪ್ರಯೋಗಾಲಯ, ಬೆಂಗಳೂರು)
- ಸುಧೀರ್ ಕುಮಾರ್ ರೆಡ್ಡಿ - ಉಪ ಪೊಲೀಸ್ ಮಹಾನಿರೀಕ್ಷಕರು, ಅರಣ್ಯ, ಅಪರಾಧ ತನಿಖಾ ವಿಭಾಗ
- ಆರ್.ಚೇತನ್ - ಉಪ ಪೊಲೀಸ್ ಮಹಾನಿರೀಕ್ಷಕರು ಮತ್ತು ಆಯುಕ್ತರು ಕಲಬುರಗಿ
- ವರ್ತಿಕಾ ಕಟಿಯಾರ್ - ಉಪ ಪೊಲೀಸ್ ಮಹಾನಿರೀಕ್ಷಕರು, ಆಂತರಿಕ ಭದ್ರತಾ ವಿಭಾಗ, ಬೆಂಗಳೂರು
- ಕಾರ್ತಿಕ್ ರೆಡ್ಡಿ - ಪೊಲೀಸ್ ವರಿಷ್ಠಾಧಿಕಾರಿ, ರಾಮನಗರ
- ಕುಲದೀಪ್ ಕುಮಾರ್ ಆರ್.ಜೈನ್ - ಉಪ ಪೊಲೀಸ್ ಆಯುಕ್ತರು, ಬೆಂಗಳೂರು ಪೂರ್ವ ವಿಭಾಗ
- ವಿನಾಯಕ್ ವಸಂತರಾವ್ ಪಾಟೀಲ್ - ಉಪ ಕಾರ್ಯದರ್ಶಿ, ಕ್ಯಾಬಿನೆಟ್ ಸೆಕ್ರೆಟರಿಯೇಟ್, ನವದೆಹಲಿ
- ಕೆ.ಸಂತೋಷ್ ಬಾಬು - ಉಪ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಆಡಳಿತ
- ಇಶಾ ಪಂತ್ - ಜಂಟಿ ಉಪ ನಿರ್ದೇಶಕರು, ಗುಪ್ತಚರ ಬ್ಯೂರೋ
- ಜಿ.ಸಂಗೀತಾ - ಪೊಲೀಸ್ ವರಿಷ್ಠಾಧಿಕಾರಿ, ಯಾದಗಿರಿ
- ಸೀಮಾ ಲಾಟ್ಕರ್ - ಪೊಲೀಸ್ ವರಿಷ್ಠಾಧಿಕಾರಿ, ಮೈಸೂರು
- ರೇಣುಕಾ ಕೆ.ಸುಕುಮಾರ್ - ಪೊಲೀಸ್ ಆಯುಕ್ತರು, ಹುಬ್ಬಳ್ಳಿ-ಧಾರವಾಡ ನಗರ, ಹುಬ್ಬಳ್ಳಿ
- ಡಿ.ಆರ್.ಸಿರಿಗೌರಿ - ಉಪ ಪೊಲೀಸ್ ಆಯುಕ್ತರು, ಸಂಚಾರ, ಬೆಂಗಳೂರು ನಗರ ಉತ್ತರ
- ಪುಟ್ಟಮಾದಯ್ಯ - ಪೊಲೀಸ್ ವರಿಷ್ಠಾಧಿಕಾರಿ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ
- ಟಿ. ಶ್ರೀಧರ - ಸಹಾಯಕ ಪೊಲೀಸ್ ಮಹಾನಿರೀಕ್ಷಕರು, ಪ್ರಧಾನ ಕಚೇರಿ -1, ರಾಜ್ಯ ಪೊಲೀಸ್ ಪ್ರಧಾನ ಕಚೇರಿ, ಬೆಂಗಳೂರು
- ಡಾ.ಸಂಜೀವ್ ಎಂ.ಪಾಟೀಲ್ - ಸಹಾಯಕ ಪೊಲೀಸ್ ಮಹಾನಿರ್ದೇಶಕ, ರಾಜ್ಯ ಪೊಲೀಸ್ ಪ್ರಧಾನ ಕಚೇರಿ
- ಡಾ.ಸುಮನ್ ಡಿ.ಪೆನ್ನೇಕರ್ - ಸಹಾಯಕ ಪೊಲೀಸ್ ಮಹಾನಿರೀಕ್ಷಕರು, ಆಡಳಿತ, ರಾಜ್ಯ ಪೊಲೀಸ್ ಪ್ರಧಾನ ಕಚೇರಿ, ಬೆಂಗಳೂರು
- ರವೀಂದ್ರ ಕಾಶಿನಾಥ್ ಗಡಾಡಿ - ಪೊಲೀಸ್ ವರಿಷ್ಠಾಧಿಕಾರಿ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ.
- ಕ್ಯಾಪ್ಟನ್ ಅಯ್ಯಪ್ಪ ಎಂ.ಎ. - ಪೊಲೀಸ್ ಅಧೀಕ್ಷಕರು (ಲೋಕಾಯುಕ್ತ)
- ರಿಷಿಕೇಶ್ ಭಗವಾನ್ ಸೋನವಾಣೆ- ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
- ಬಿ.ಅರುನಾಂಗ್ಷು ಗಿರಿ - ಬೆಂಗಳೂರು ನಗರದ ನಗರ ಸಶಸ್ತ್ರ ಮೀಸಲು ಕೇಂದ್ರ ಕಚೇರಿಯ ಉಪ ಪೊಲೀಸ್ ಆಯುಕ್ತ
- ಹಕೈ ಅಕ್ಷಯ್ ಮಚೀಂದ್ರ - ಗೃಹರಕ್ಷಕ ದಳದ ಡೆಪ್ಯುಟಿ ಕಮಾಂಡೆಂಟ್ ಜನರಲ್ ಮತ್ತು ನಾಗರಿಕ ರಕ್ಷಣಾ ಇಲಾಖೆಯ ಪದನಿಮಿತ್ತ ಉಪ ನಿರ್ದೇಶಕ
- ನಾಗೇಶ್ ಡಿ.ಎಲ್. - ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
- ಲೋಕೇಶ್ ಭರಮಪ್ಪ ಜಗಲಾಸರ್ - ಎಸ್ಪಿ, ಕರ್ನಾಟಕ ಪೊಲೀಸ್ ಆಕಾಡೆಮಿ
- ಡಾ.ಸಿಮಿ ಮರಿಯಮ್ ಜಾರ್ಜ್ - ಸಹಾಯಕ ಪೊಲೀಸ್ ಮಹಾನಿರೀಕ್ಷಕರು, ಅಪರಾಧಗಳು, ಬೆಂಗಳೂರು
- ಪದ್ಮಿನಿ ಸಾಹೂ - ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
- ಮಿಥುನ್ ಹೆಚ್.ಎನ್. - ಉಡುಪಿಯ ಕರಾವಳಿ ಭದ್ರತಾ ಪೊಲೀಸ್ ಪೊಲೀಸ್ ವರಿಷ್ಠಾಧಿಕಾರಿ
ಇದನ್ನೂ ಓದಿ:ಹೊಸ ವರ್ಷದ ಗಿಫ್ಟ್; 46 ಐಎಎಸ್ ಅಧಿಕಾರಿಗಳಿಗೆ ವೇತನ ಮುಂಬಡ್ತಿ