ಬೆಂಗಳೂರು :ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ರಾಜ್ಯ ಸರ್ಕಾರ ಹಂತ ಹಂತವಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಪ್ರಾಥಮಿಕ ಹಂತದಲ್ಲೇ ಎಲ್ಲ ಕೌಶಲ್ಯವನ್ನ ಒಂದು ಚೌಕಟ್ಟಿನಲ್ಲಿ ಮಕ್ಕಳಿಗೆ ಹೇಳಿಕೊಟ್ಟು ವೃತ್ತಿಪರ ಉಪಯುಕ್ತವಾಗುವ ರೀತಿ ಸಿದ್ಧಗೊಳಿಸಲಾಗುತ್ತಿದೆ.
ಇದರ ಮೊದಲ ಹಂತವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹೊಸ ರಾಷ್ಟೀಯ ಶಿಕ್ಷಣ ನೀತಿಯಲ್ಲಿ ಕೋಡಿಂಗ್ ಕೂಡ ಇತರೆ ಎಲ್ಲ ವಿಷಯದಂತೆ ಇದು ಒಂದು ವಿಷಯದಂತೆ ಪರಿಚಯಿಸಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಯಾಗುತ್ತಿದೆ. ಬಾಲ್ಯಾವಸ್ಥೆಯಲ್ಲಿಯೇ ಮಕ್ಕಳಿಗೆ ಅನಿಮೇಷನ್ ತಂತ್ರಾಂಶವನ್ನು ಕಲಿಸುವ ಕೋಡಿಂಗ್ ವಿಷಯವನ್ನ ಪರಿಚಯ ಮಾಡಲಾಗುತ್ತಿದೆ.
ಏನಿದು ಕೋಡಿಂಗ್ ಕ್ಲಾಸ್?:ಇತ್ತೀಚೆಗೆ ಅನಿಮೇಟೆಡ್ ವಿಡಿಯೋ, ಮೂವೀಸ್, ಗೇಮ್ಸ್ ಸಾಮಾನ್ಯವಾಗಿದೆ. ಇದರಲ್ಲಿ ಬಳಸಿರುವ ಜಾವಾ ಇತ್ಯಾದಿ ಪ್ರೋಗ್ರಾಮಿಂಗ್ ಬಗ್ಗೆ ಮಕ್ಕಳಿಗೆ ಕಲಿಸಲಾಗುತ್ತದೆ. 2ಡಿ, 3ಡಿ ಬಗ್ಗೆ ಅವು ಯಾವ ರೀತಿ ಕೆಲಸ ಮಾಡಲಿವೆ. ಅದರ ಹಿಂದೆ ಇರುವ ತಂತ್ರಜ್ಞಾನ ಯಾವುದು, ಯಾವ ಸಂಕೇತಗಳನ್ನ ಬಳಸಿ ಅನಿಮೇಟೆಡ್ ವಿಡಿಯೋದಲ್ಲಿನ ವಸ್ತುವಿನ ಚಲನೆ ಮಾಡಲಾಗುತ್ತದೆ ಎನ್ನುವ ಮಾಹಿತಿ ನೀಡಲಾಗುತ್ತದೆ.
ಇತರೆ ಪಠ್ಯಕ್ರಮದ ಜೊತೆ ಜೊತೆಗೆ ಕೋಡಿಂಗ್ ಕೂಡ ಒಂದು ವಿಷಯವಾಗಿ ಕಲಿಸಲಾಗುತ್ತೆ. 1ರಿಂದ 9ನೇ ತರಗತಿಯ ಮಕ್ಕಳಿಗೆ ಪಾಠ ಮಾಡಲಾಗುತ್ತೆ. ಯಾವ ತರಗತಿಯ ಮಕ್ಕಳಿಗೆ ಕೋಡಿಂಗ್ನಲ್ಲಿ ಯಾವುದನ್ನ ಕಲಿಸಬೇಕು ಎಂಬುದರ ಕುರಿತು ಐಐಟಿ ತಜ್ಞರು ನಿರ್ಧರಿಸಿದ್ದು, ಇದಕ್ಕೆ ಬೇಕಾಗಿರುವ ಸಿಲಬಸ್, ಪ್ಲಾನಿಂಗ್, ಟ್ರೈನಿಂಗ್ ಎಲ್ಲವನ್ನೂ ಮಾಡಲಾಗಿದೆ ಎಂದು ಖಾಸಗಿ ಶಾಲೆ ಪ್ರಾಂಶುಪಾಲೆ ಶೀತಲ್ ಮಾಹಿತಿ ನೀಡಿದ್ದಾರೆ.