ಕರ್ನಾಟಕ

karnataka

ETV Bharat / state

ನಿಷೇಧಿತ ಇ ಸಿಗರೇಟ್​ ಮಾರಾಟ.. ಬೆಂಗಳೂರಲ್ಲಿ ನಾಲ್ವರು ಆರೋಪಿಗಳ ಬಂಧನ - ಅಶೋಕನಗರ ಠಾಣಾ ಪೊಲೀಸರು

ನಿಷೇಧಿತ ಇ ಸಿಗರೇಟುಗಳನ್ನ ಮಾರಾಟ ಮಾಡುತ್ತಿದ್ದ ವಿವಿಧ ಅಂಗಡಿಗಳ ಮೇಲೆ ಅಶೋಕನಗರ ಠಾಣಾ ಪೊಲೀಸರಿಂದ ದಾಳಿ, ನಾಲ್ವರು ಆರೋಪಿಗಳ ಬಂಧನ.

Etv BharatProhibited sale of e cigarettes four accused Arrest
Etv Bharatನಿಷೇಧಿತ ಇ ಸಿಗರೇಟುಗಳನ್ನ ಮಾರಾಟ ಮಾಡುತ್ತಿದ್ದ ವಿವಿಧ ಅಂಗಡಿಗಳ ಮೇಲೆ ಅಶೋಕನಗರ ಠಾಣಾ ಪೊಲೀಸರು ದಾಳಿ

By

Published : Dec 18, 2022, 3:16 PM IST

ಬೆಂಗಳೂರು: ವೀಕೆಂಡ್ ಪಾರ್ಟಿ ಪ್ರಿಯರ ಹಾಟ್ ಸ್ಪಾಟ್​ಗಳಲ್ಲಿ ನಿಷೇಧಿತ ಇ ಸಿಗರೇಟುಗಳನ್ನ ಮಾರಾಟ ಮಾಡುತ್ತಿದ್ದ ವಿವಿಧ ಅಂಗಡಿಗಳ ಮೇಲೆ ಅಶೋಕನಗರ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ.

ಈ ವೇಳೆ ಅಕ್ರಮವಾಗಿ ಇ ಸಿಗರೇಟ್​ ಮಾರಾಟ ಮಾಡುತ್ತಿದ್ದ ಹ್ಯಾರಿಸ್, ಜಾಫರ್, ಇಬ್ರಾಹಿಂ ಹಾಗೂ ಮೊಹಮ್ಮದ್ ಮೀರಜ್ ಅಲಿ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ಇ ಸಿಗರೇಟ್ ಮಾರಾಟ ನಿಷೇಧಿಸಲ್ಪಟ್ಟಿದ್ದರೂ ಸಹ ಆರೋಪಿಗಳು ಅಕ್ರಮವಾಗಿ ಇ ಸಿಗರೇಟುಗಳನ್ನು ದಾಸ್ತಾನು ಮಾಡಿಟ್ಟುಕೊಂಡು ಒಂದು ಸಿಗರೇಟಿಗೆ ಮೂರರಿಂದ ನಾಲ್ಕು ಸಾವಿರ ರೂಪಾಯಿವರೆಗೆ ಮಾರಾಟ ಮಾಡುತ್ತಿದ್ದರು.

ಖಚಿತ ಮಾಹಿತಿಯ ಮೇರೆಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಕೈಗೊಂಡ ಅಶೋಕನಗರ ಠಾಣಾ ಪೊಲೀಸರು 3.50 ಲಕ್ಷ ಮೌಲ್ಯದ 85 ಸಿಗರೇಟುಗಳನ್ನ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:ಸ್ನೇಹಿತನ ಹೆಸರಿನಲ್ಲಿತ್ತು 4 ಕೋಟಿ ರೂ ವಿಮೆ: ಅಪಘಾತದಂತೆ ಬಿಂಬಿಸಿ ಕೊಲೆ

ABOUT THE AUTHOR

...view details