ಬೆಂಗಳೂರು:ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ 75 ವರ್ಷ ಆಗಿರುವುದು ಒಂದು ನೆಪ ಅಷ್ಟೇ. ಸಿದ್ದರಾಮೋತ್ಸವ ಅಂತಾ ನಾವು ಯಾರು ಹೆಸರು ಕೊಟ್ಟಿಲ್ಲ. ಆ ಹೆಸರಿನಿಂದ ಕಾರ್ಯಕ್ರಮ ಮಾಡುತ್ತಿಲ್ಲ. ಈ ಕಾರ್ಯಕ್ರಮ ಯಾವುದೇ ವ್ಯಕ್ತಿಯನ್ನು ವೈಭವೀಕರಿಸಲು ಅಲ್ಲ, ಆ ವ್ಯಕ್ತಿ ಹಿಂದೆ ಇರುವ ವಿಚಾರಗಳನ್ನು ಬಿಂಬಿಸಲು ಮಾತ್ರ ಕಾರ್ಯಕ್ರಮ ಮಾಡಲಾಗುತ್ತಿದೆ. ದಾವಣಗೆರೆಯಲ್ಲಿ ನಡೆಯುವ ಈ ಬೃಹತ್ ಕಾರ್ಯಕ್ರಮ ಮುಂದಿನ ರಾಜ್ಯ ರಾಜಕಾರಣದ ದಿಕ್ಕು ಬದಲಿಸುವ ಕಾರ್ಯಕ್ರಮ ಆಗಲಿದೆ ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಬಿ. ಎಲ್. ಶಂಕರ್ ಹೇಳಿದ್ದಾರೆ.
ಮಾಜಿ ಸಚಿವ, ಹಿರಿಯ ಮುಖಂಡ ಪಿ.ಜಿ. ಆರ್. ಸಿಂಧ್ಯಾ ಮಾತನಾಡಿ, ಸಿದ್ದರಾಮಯ್ಯ ಈ ರಾಷ್ಟ್ರದ ಓರ್ವ ವಿಶೇಷ ವ್ಯಕ್ತಿ. ನಿಜಲಿಂಗಪ್ಪ, ದೇವರಾಜ್ ಅರಸು ಈ ನಾಡಿನಿಂದ ರಾಷ್ಟ್ರಕ್ಕೆ ಪರಿಚಯ ಆಗಿದ್ರು. ಈ ನಾಯಕರ ಒಡನಾಟ ಕೂಡ ಸಿದ್ದರಾಮಯ್ಯರಿಗೆ ಇತ್ತು. ಜೆ ಪಿ ಚಳವಳಿ ಮೂಲಕ ಸಿದ್ದರಾಮಯ್ಯ ಹೋರಾಟ ಆರಂಭಿಸಿದ್ದರು. ಹಲವು ಏಳುಬೀಳುಗಳನ್ನು ಸಿದ್ದರಾಮಯ್ಯ ನೋಡಿದ್ದಾರೆ ಎಂದು ಹೇಳಿದರು.