ಕರ್ನಾಟಕ

karnataka

ETV Bharat / state

ಮಕ್ಕಳ ಅಶ್ಲೀಲ ವಿಡಿಯೋ ಅಪ್ಲೋಡ್ ಮಾಡುತ್ತಿದ್ದ ಪ್ರೊಫೆಸರ್ ವಶಕ್ಕೆ - ಐಟಿ ಕಾಯ್ದೆಯ ಸೆಕ್ಷನ್ 67

ಮಕ್ಕಳ ಪೋರ್ನ್ ವಿಡಿಯೋ ಅಪ್ಲೋಡ್ ಮಾಡುತ್ತಿದ್ದ ಪ್ರೊಫೆಸರ್ ಒಬ್ಬರನ್ನು ಬೆಂಗಳೂರು ನಗರದ ಈಶಾನ್ಯ ವಿಭಾಗದ ಸೆನ್​ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರೊಫೆಸರ್ ಮಧುಸೂದನ್
ಪ್ರೊಫೆಸರ್ ಮಧುಸೂದನ್

By

Published : Oct 20, 2022, 7:29 PM IST

ಬೆಂಗಳೂರು:ಮಕ್ಕಳ‌ ಅಶ್ಲೀಲ ವಿಡಿಯೋಗಳನ್ನು ಇನ್​​ಸ್ಟ್ರಾಗ್ರಾಮ್‌ನಲ್ಲಿ ಅಪ್​ಲೋಡ್​ ಮಾಡುತ್ತಿದ್ದ ಪ್ರತಿಷ್ಠಿತ ಕಾಲೇಜಿನ ಪ್ರೊಫೆಸರ್ ಒಬ್ಬನನ್ನು ನಗರ ಈಶಾನ್ಯ ವಿಭಾಗದ ಸೆನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಯಲಹಂಕ ಭಾಗದ ಖಾಸಗಿ ಕಾಲೇಜೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಧುಸೂದನ್ (45) ಎಂಬಾತನನ್ನು ವಿಚಾರಣೆ ನಡೆಸಿರುವ ಪೊಲೀಸರು ಬಳಿಕ ನೋಟಿಸ್​ ನೀಡಿ ಕಳುಹಿಸಿದ್ದಾರೆ. ಆರೋಪಿ ವಿವಾಹಿತನಾಗಿದ್ದು ಮಕ್ಕಳಿರಲಿಲ್ಲ. ಮಕ್ಕಳ ಪೋರ್ನ್ ವಿಡಿಯೋ ನೋಡುವ ಚಟ ಅಂಟಿಸಿಕೊಂಡಿದ್ದ‌ನಂತೆ.

ಆನ್​ಲೈನ್​ನಲ್ಲಿ ಸಿಗುವ ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಈತ ಇನ್​ಸ್ಟ್ರಾಗ್ರಾಮ್ ಮೂಲಕ ಅಪ್‌ಲೋಡ್ ಮಾಡುತ್ತಿದ್ದ. ನಿರಂತರವಾಗಿ ವಿಡಿಯೋ ಮಾಡುತ್ತಿರುವ ಬಗ್ಗೆ ಎನ್​ಸಿಆರ್​ಬಿ ಅಧೀನದಲ್ಲಿರುವ ಅಧಿಕಾರಿಗಳ ತಂಡದ ಗಮನಕ್ಕೆ ಬಂದಿತ್ತು. ಪರಿಶೀಲಿಸಿದಾಗ ಬೆಂಗಳೂರಿನಿಂದ ವಿಡಿಯೋ ಅಪ್​ಲೋಡ್​ ಮಾಡಿರುವುದು ಗೊತ್ತಾಗಿದೆ.

ಶಿಕ್ಷೆ ಏನು?:ಐಟಿ ಕಾಯ್ದೆಯ ಸೆಕ್ಷನ್ 67 ಪ್ರಕಾರ, ಮಕ್ಕಳಿಗೆ ಸಂಬಂಧಿಸಿದ ಅಶ್ಲೀಲ ವಿಡಿಯೋ ವೀಕ್ಷಣೆ, ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದು ಕಾನೂನುಬಾಹಿರ ಚಟುವಟಿಕೆ. ಪ್ರಕರಣದಲ್ಲಿ ಆರೋಪ ಸಾಬೀತಾದರೆ 5 ವರ್ಷ ಜೈಲು ಶಿಕ್ಷೆ ಹಾಗೂ ಎರಡನೇ ಬಾರಿ ಅಪರಾಧವೆಸಗಿದರೆ 7 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

ಇದನ್ನೂ ಓದಿ:ಸರ್ಕಾರಿ ಆಸ್ಪತ್ರೆ ವೈದ್ಯ, ವಾರ್ಡ್‌ಬಾಯ್‌ ವಿರುದ್ಧ ಸಾಮೂಹಿಕ ಅತ್ಯಾಚಾರ ಕೇಸ್

ABOUT THE AUTHOR

...view details