ಕರ್ನಾಟಕ

karnataka

ETV Bharat / state

ಕರ್ನಾಟಕ ಸಂಸ್ಕೃತ ವಿವಿ ನೂತನ ಕುಲಪತಿಗಳಾಗಿ ಪ್ರೊ.ದೇವನಾಥನ್ ನೇಮಕ - ಸಂಸ್ಕೃತ ವಿವಿಗೆ ಪ್ರೊ.ದೇವನಾಥನ್ ಕುಲಪತಿ

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿಗಳನ್ನು ನೇಮಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

New Chancellor for Karnataka Sanskrit University
ಕರ್ನಾಟಕ ಸಂಸ್ಕೃತ ವಿವಿಗೆ ನೂತನ ಕುಲಪತಿ

By

Published : Oct 11, 2020, 9:45 PM IST

ಬೆಂಗಳೂರು : ಪ್ರೊ. ದೇವನಾಥನ್ ಅವರನ್ನು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ನೇಮಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

ಪ್ರೊಫೆಸರ್ ದೇವನಾಥನ್ ಅವರು, ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ವಿಶಿಷ್ಟಾದ್ವೈತ ವೇದಾಂತದ ಪ್ರೊಫೆಸರ್ ಹಾಗೂ ತಿರುಪತಿಯ ವೇದ ವಿಶ್ವವಿದ್ಯಾಲಯದ ಪೂರ್ವ ಕುಲಪತಿಗಳಾಗಿದ್ದರು.

ರಾಜ್ಯಪಾಲರ ಆದೇಶ ಪ್ರತಿ

ಪ್ರೊ.ವಿ.ಗಿರೀಶ್ ಚಂದ್ರ ಕರ್ನಾಟಕ ಸಂಸ್ಕೃತ ವಿವಿಯ ಪ್ರಬಾರಿ ಕುಲಪತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಶೋಧನಾ ಸಮಿತಿ ಶಿಫಾರಸು ಮೇರೆಗೆ ರಾಜ್ಯಪಾಲರು ಪ್ರೊ. ದೇವನಾಥನ್​ರನ್ನು ಮುಂದಿನ ನಾಲ್ಕು ವರ್ಷಗಳಿಗೆ ವಿವಿಯ ಕುಲಪತಿಗಳಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ.

ABOUT THE AUTHOR

...view details