ಕರ್ನಾಟಕ

karnataka

ETV Bharat / state

ನನ್ನ‌ ಮಗ ತುಂಬಾ ಮೃದು ಸ್ವಭಾವದವನು: ನಿರ್ಮಾಪಕ ಸೌಂದರ್ಯ ಜಗದೀಶ್ - ನಿರ್ಮಾಪಕ ಸೌಂದರ್ಯ ಜಗದೀಶ್

ಅಪ್ಪು ಪಪ್ಪು ಸಿನಿಮಾ ಖ್ಯಾತಿಯ ನಟ ಸ್ನೇಹಿತ್ ಅವರು ಮಹಿಳೆಯೊಬ್ಬರಿಗೆ ನಿಂದಿಸಿದ ಕಾರಣಕ್ಕಾಗಿ ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ನಿರ್ಮಾಪಕ ಸೌಂದರ್ಯ ಜಗದೀಶ್ ಹಾಗೂ ನಟ ಸ್ನೇಹಿತ್
ನಿರ್ಮಾಪಕ ಸೌಂದರ್ಯ ಜಗದೀಶ್ ಹಾಗೂ ನಟ ಸ್ನೇಹಿತ್

By

Published : Sep 30, 2022, 9:07 PM IST

ಕನ್ನಡ ಚಿತ್ರರಂಗದ ಪ್ರಸಿದ್ಧ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಪುತ್ರ, ಅಪ್ಪು ಪಪ್ಪು ಸಿನಿಮಾ ಖ್ಯಾತಿಯ ನಟ ಸ್ನೇಹಿತ್ ಮತ್ತೆ ಕಿರಿಕ್ ಮಾಡಿಕೊಂಡಿದ್ದಾರೆ. ಈ ಹಿಂದೆ ಎದುರು ಮನೆ ನಿವಾಸಿ ಮಹಿಳೆಗೆ ಅವಾಚ್ಯ ಪದಗಳಿಂದ ನಿಂದಿಸಿದ್ದ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪ ಹೊತ್ತು ಸ್ಟೇಷನ್ ಮೆಟ್ಟಿಲು ಹತ್ತಿದ್ದರು. ಇದೀಗ ಮತ್ತೆ ಮಹಿಳೆಯೊಬ್ಬರಿಗೆ ನಿಂದಿಸಿದ ಕಾರಣಕ್ಕಾಗಿ ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ಈ ಸಂಬಂಧ ಸ್ನೇಹಿತ ತಂದೆ ಸೌಂದರ್ಯ ಜಗದೀಶ್ ಹಾಗೂ ರೇಖಾ ಜಗದೀಶ್ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಠಿ ನಡೆಸಿ ನನ್ನ ಮಗ ಭವಿಷ್ಯ ಹಾಳು ಮಾಡೋದಿಕ್ಕೆ ಅನ್ನಪೂರ್ಣ ಈ ರೀತಿ ಮಾಡ್ತಾ ಇದ್ದಾರೆ ಅಂತಾ ಆರೋಪಿಸಿದ್ದಾರೆ. ಇಂದು ಬೆಳಗ್ಗೆಯಿಂದ ನಾನು ಮಾಧ್ಯಮಗಳನ್ನ ನೋಡುತ್ತಿದ್ದೇವೆ. ನನ್ನ ಮಗನಿಗೆ ತುಂಬಾ ತೊಂದರೆಯಾಗ್ತಿದೆ. ಈ ಹಿಂದೆ ಕಂಪ್ಲೇಂಟ್ ಕೊಟ್ಟು ತೊಂದರೆ ಕೊಟ್ರು. ನಮ್ಮ ಮಗನ ಕೆರಿಯರ್ ಹಾಳು ಮಾಡೋದಕ್ಕೆ ಟ್ರೈ ಮಾಡ್ತಿದ್ದಾರೆ. ಸುಖಾ ಸುಮ್ಮನೆ ಸುಳ್ಳು ಕಂಪ್ಲೇಂಟ್ ಕೊಟ್ಟು ನಮ್ಮ ನೆಮ್ಮದಿ ಹಾಳು ಮಾಡುತ್ತಿದ್ದಾರೆ. ಯಾಕೆ ಈ ರೀತಿ ಮಾಡ್ತಿದ್ದಾರೋ ಗೊತ್ತಿಲ್ಲ. ರಕ್ಷಿತ್ ನಮ್ಮ ಚಾಲಕ. ಆತನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದರು.

ನಿರ್ಮಾಪಕ ಸೌಂದರ್ಯ ಜಗದೀಶ್​ ಅವರು ಮಾತನಾಡಿದರು

ಸುಳ್ಳು ದೂರು ಕೊಟ್ಟಿದ್ದಾರೆ:ರಕ್ಷಿತ್ ನಮ್ಮ ಬಳಿ ಹಲವು ಬಾರಿ ಹೇಳಿದ್ದಾರೆ. ಆಮೇಲೆ ರಕ್ಷಿತ್ ಕಂಪ್ಲೆಂಟ್ ಕೊಟ್ಟಿದ್ದಾರೆ. ಇನ್ನು ರಜತ್ ಮತ್ತು ಶಮಂತ್ ಮೇಲೆ ದೂರು ಕೊಟ್ಟಿದ್ರೂ. ದೂರನ್ನ ಹಿಂಪಡೆಯಲು ಬೆದರಿಕೆ ಹಾಕಿದ್ರು. ಆದರೆ ದೂರನ್ನ ರಕ್ಷಿತ್ ಹಿಂಪಡೆಯಲು ನಿರಾಕರಿಸಿದ್ದರು. ಅದಕ್ಕೆ ಅವರು ಎರಡು ದಿನಗಳ ನಂತರ ಹೋಗಿ ಸುಳ್ಳು ದೂರು ಕೊಟ್ಟಿದ್ದಾರೆ. ರಜತ್ ಪತ್ನಿ ಮೇಲೆ ನನ್ನ ಮಗ ಹಲ್ಲೆ ಮಾಡಿದ್ದಾನೆ ಅಂತಾ ಸುಳ್ಳು ಕೇಸ್ ಕೊಟ್ಟಿದ್ದಾರೆ. ಆದ್ರೆ ಆ ಸಮಯದಲ್ಲಿ ನನ್ನ ಮಗ ಇರಲೇ ಇಲ್ಲ. ಅದಕ್ಕೆ ನನ್ನ ಬಳಿಯೂ ಸಾಕ್ಷಿ ಇದೆ ಅಂತಾ ಆರೋಪಗಳನ್ನ ಸೌಂದರ್ಯ ಜಗದೀಶ್ ಮಾಡಿದ್ದಾರೆ.

ನನಗೆ ಯಾರ ಬಗ್ಗೆನೂ ದ್ವೇಷವಿಲ್ಲ: ಮೂರು ತಿಂಗಳು ನಾವು ಇವರಿಂದ ಹಿಂಸೆ ಅನುಭವಿಸಿದ್ವಿ. ನನ್ನ ಮಗನ ಮೇಲೆ ದ್ವೇಷ ಕಾರುತ್ತಿದ್ದಾರೆ. ನನ್ನ ಮಗನಿಗೆ ಕಾರು ಓಡಿಸೋದು ಬಿಟ್ಟು ಆತ ಏನು ಮಾಡಲ್ಲ. ಅವರ ಚಿಕ್ಕ ಮಗ ಶಮಂತ್ ನನ್ನ ಮೇಲೆ ಕಾರು ಹತ್ತಿಸಲು ಬಂದಿದ್ರೂ. ನನಗೆ ಯಾರ ಬಗ್ಗೆಯೂ ದ್ವೇಷವಿಲ್ಲ. ಅವರು ಯಾಕೆ ಹಾಗೆ ಮಾಡ್ತಿದ್ದಾರೆ. ಅನ್ನಪೂರ್ಣ ಸುಳ್ಳು ದೂರು ಕೊಟ್ಟಿದ್ದಾರೆ. ನನ್ನ ಮಗ ಕಾಲೇಜ್​ಗೆ ಹೋಗ್ಬಾರದಾ, ನಾವು ಫ್ರೀಯಾಗಿ ಓಡಾಡಬಾರದಾ? ನನ್ನ ಮಗ ಚಿನ್ನ. ಅವನಿಗೆ 20 ವರ್ಷ ಆಗಿದ್ರೂ ಕೂಡ ಇನ್ನೂ ಮಗು ರೀತಿ ಇದ್ದಾನೆ ಅಂತಾ ಸೌಂದರ್ಯ ಜಗದೀಶ್ ಹಾಗು ಪತ್ನಿ ರೇಖಾ ಜಗದೀಶ್ ತಮಗೆ ಆಗುತ್ತಿರುವ ತೊಂದರೆ ಬಗ್ಗೆ ಹೇಳಿಕೊಂಡರು.

ಓದಿ:ಮತ್ತೆ ಮುನ್ನೆಲೆಗೆ ಬಂದ ಅಪ್ಪು ಪಪ್ಪು ಖ್ಯಾತಿಯ ಸ್ನೇಹಿತ್ ಕಿರಿಕ್.. ದೂರು - ಪ್ರತಿದೂರು ದಾಖಲು!

ABOUT THE AUTHOR

...view details