ಕರ್ನಾಟಕ

karnataka

ETV Bharat / state

ಬಡವರು-ನೊಂದವರಲ್ಲಿ ಆತ್ಮಾಭಿಮಾನ ಮೂಡಿಸಿದ್ದು ಅಂಬೇಡ್ಕರ್​ ಸಾಧನೆ: ನಿರ್ದೇಶಕ ಪಾ.ರಂಜಿತ್

ಬಡವರು-ನೊಂದವರಲ್ಲಿ ಸ್ವಾಭಿಮಾನ, ಆತ್ಮಾಭಿಮಾನ ಮೂಡಿಸಿದ್ದು ಡಾ.ಬಿ.ಆರ್ ಅಂಬೇಡ್ಕರ್​ ಸಾಧನೆ ಎಂದು ತಮಿಳು ಚಿತ್ರರಂಗದ ಯುವ ನಿರ್ದೇಶಕ ಪಾ.ರಂಜಿತ್ ಅಭಿಪ್ರಾಯಪಟ್ಟರು.

procession
ಪಥ ಸಂಚಲನ

By

Published : Jan 2, 2020, 11:21 AM IST

ಆನೇಕಲ್:ಬಡವರು-ನೊಂದವರಿಗೆ ಸ್ವಾಭಿಮಾನ, ಆತ್ಮಾಭಿಮಾನ ಮೂಡಿಸಿದ್ದು ಡಾ.ಬಿ.ಆರ್ ಅಂಬೇಡ್ಕರ್​ರ ಸಾಧನೆಯಾಗಿದೆ. ಈಗಲೂ ತುಳಿತಕ್ಕೊಳಗಾದವರ ಮೇಲೆ ಎಲ್ಲ ರಂಗಗಳಲ್ಲಿಯೂ ತಾತ್ಸಾರ ಮನೋಭಾವ ಮತ್ತು ದಾಳಿ ನಡೆಯುತ್ತಲೇ ಇದೆ ಎಂದು ತಮಿಳು ಚಿತ್ರರಂಗದ ಯುವ ನಿರ್ದೇಶಕ ಪಾ. ರಂಜಿತ್ ಅಭಿಪ್ರಾಯಪಟ್ಟರು.

ಡಾ. ಅಂಬೇಡ್ಕರ್​ ಬಡವರು ಮತ್ತು ನೊಂದವರಲ್ಲಿ ಆತ್ಮಾಭಿಮಾನ ಮೂಡಿಸಿದ್ದಾರೆ- ನಿರ್ದೇಶಕ ಪಾ.ರಂಜಿತ್

ತಾಲೂಕಿಗೆ ಬುಧವಾರ ಭೇಟಿ ನೀಡಿದ್ದ ಅವರು 1818 ರಲ್ಲಿ ನಡೆದಿದ್ದ ಮಹಾನ್​ ಸೈನಿಕರ ಮಹತ್ತರ ಕೋರೆಗಾಂವ್ ಎಂಬಲ್ಲಿನ ಯುದ್ಧದ ನೆನಪಿಗೆ ಏರ್ಪಡಿಸಿದ್ದ ಪಥ ಸಂಚಲನಕ್ಕೆ ಚಾಲನೆ ನೀಡಿ ಮಾತನಾಡಿದರು. ಜಗತ್ತಿಗೆ ನೊಂದವರಲ್ಲಿಯೂ ಸೃಜನಶೀಲತೆ ಇದೆ ಎಂದು ಸಾರಲು ಛಲ ತುಂಬಿದ್ದು ಡಾ ಬಿಆರ್ ಅಂಬೇಡ್ಕರ್ ಎಂದು ಹೇಳಿದರು.

ವೇದಿಕೆಯಲ್ಲಿ ಪ್ರಜಾ ಪರಿವರ್ತನಾ ಪಕ್ಷದ ಸಂಸ್ಥಾಪಕ ಬಿ. ಗೋಪಾಲ್ ಕೋರೆಗಾಂವ್ ಯುದ್ಧದ ಬಗ್ಗೆ ವಿವರಿಸಿದರು.

ಇದಕ್ಕೂ ಮುನ್ನ ಪಟ್ಟಣದ ಅಂಬೇಡ್ಕರ್ ಪ್ರತಿಮೆಯಿಂದ ಅಂಬೇಡ್ಕರ್ ಸ್ಥಾಪಿತ ಸಮತಾ ಸೈನಿಕ ದಳದ ಪಥ ಸಂಚಲನ ತಮಟೆ ವಾದ್ಯದ ಮೂಲಕ ಪ್ರಮುಖ ಬೀದಿಗಳಲ್ಲಿ ನಡೆಯಿತು.

ABOUT THE AUTHOR

...view details