ಕರ್ನಾಟಕ

karnataka

ಪ್ರೋ ಕಬಡ್ಡಿ ಲೀಗ್: ಯುಪಿ ಯೋಧಾಸ್​​ಗೆ ಶರಣಾದ ಬೆಂಗಳೂರು ಬುಲ್ಸ್‌

By

Published : Oct 17, 2022, 10:25 AM IST

ಭಾನುವಾರ ನಡೆದ ಪ್ರೋ ಕಬ್ಬಡ್ಡಿ ಲೀಗ್​ ಪಂದ್ಯದಲ್ಲಿ ಯುಪಿ ಯೋಧಾಸ್‌ ವಿರುದ್ದ ಬೆಂಗಳೂರು ಬುಲ್ಸ್​ ತಂಡ ಸೋಲೊಪ್ಪಿದೆ.

KN_BNG_01_PRO
ಯೋಧಾಸ್​​ಗೆ ಶರಣಾದ ಬೆಂಗಳೂರು ಬುಲ್ಸ್‌

ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿವೋ ಪ್ರೋ ಕಬಡ್ಡಿ ಲೀಗ್‌ನ ಭಾನುವಾರದ ಪಂದ್ಯದಲ್ಲಿ ಯುಪಿ ಯೋಧಾಸ್‌ ಪಡೆಯು ಬೆಂಗಳೂರು ಬುಲ್ಸ್‌ ವಿರುದ್ಧ 44-37 ಅಂತರದಲ್ಲಿ ಜಯಗಳಿಸಿ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆರಿದೆ. ಸತತ ಎರಡು ಸೋಲಿನಿಂದ ಬೆಂಗಳೂರು ಬುಲ್ಸ್‌ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಕುಸಿತ ಕಂಡಿತು.

ಪ್ರದೀಪ್‌ ನರ್ವಾಲ್‌ ಹಾಗೂ ಸುರಿಂದರ್‌ ಸಿಂಗ್‌ ತಲಾ 14 ಅಂಕಗಳನ್ನು ಕಲೆಹಾಕುವ ಮೂಲಕ ತಂಡದ ಜಯದ ಹಾದಿಯನ್ನು ಸುಗಮಗೊಳಿಸಿದರು. ಪ್ರದೀಪ್‌ ನರ್ವಾಲ್‌ 21 ರೈಡಿಂಗ್‌ ಮೂಲಕ 14 ಅಂಕ ಗಳಿಸಿದರೆ, ಸುರಿಂದರ್‌ ಕೇವಲ 18 ರೈಡಿಂಗ್‌ ಮೂಲಕ 14 ಅಂಕಗಳನ್ನು ಗಳಿಸಿ ಜಯದ ರೂವಾರಿ ಎನಿಸಿದರು. ಬೆಂಗಳೂರು ಬುಲ್ಸ್‌ ಪ್ರಥಮಾರ್ಧದಲ್ಲಿ ನೀರಸ ಪ್ರದರ್ಶನ ತೋರಿತು. ಆದರೆ ದ್ವಿತಿಯಾರ್ಧದ ಕೊನೆಯ ಹಂತದಲ್ಲಿ ಮಿಂಚಿನ ಆಟ ಪ್ರದರ್ಶಿಸಿದ ಬುಲ್ಸ್ ಪ್ರಯತ್ನ ಸಮಯದ ಅಭಾವದಿಂದ ವ್ಯರ್ಥವಾಯಿತು.

ಬೆಂಗಳೂರು ಬುಲ್ಸ್‌ ಪರ ವಿಕಾಶ್‌ ಕಂಡೋಲ (12) ಹಾಗೂ ಭರತ್‌ (9) ರೈಡಿಂಗ್‌ ಅಂಕಗಳನ್ನು ಗಳಿಸಿದರು. ಆದರೆ ಇಬ್ಬರ ಪ್ರಯತ್ನ ಬಲಿಷ್ಠ ಯುಪಿ ಯೋಧಾಸ್‌ ಪಡೆಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ದ್ವಿತಿಯಾರ್ಧದ ಕೊನೆಯಲ್ಲಿ ಯುಪಿ ಯೋಧಾಸ್‌ ಪಡೆಯನ್ನು ಆಲೌಟ್‌ ಮಾಡುವಲ್ಲಿ ಯಶಸ್ವಿಯಾಯಿತು. ಆದರೆ ಪ್ರಥಮಾರ್ಧದಲ್ಲಿ ಬೆಂಗಳೂರು ಎರಡು ಬಾರಿ ಆಲೌಟ್‌ ಆದದ್ದು ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರಿತು.

ಪ್ರಥಮಾರ್ಧದಲ್ಲಿ ಯುಪಿ ಯೋಧಾಸ್‌ ಅದ್ಭುತ ರೈಡಿಂಗ್‌:ಸುರೇಂದರ್‌ ಗಿಲ್‌ ಹಾಗೂ ಪ್ರದೀಪ್‌ ನರ್ವಾಲ್‌ ಅದ್ಭುತ ರೈಡಿಂಗ್‌ ಅಂಕಗಳ ನೆರವಿನಿಂದ ಯುಪಿ ಯೋಧಾಸ್‌ ಪಡೆ ಬೆಂಗಳೂರು ಬುಲ್ಸ್‌ ವಿರುದ್ಧ ಪಂದ್ಯದ ಪ್ರಥಮಾರ್ಧದಲ್ಲಿ 26-12 ಅಂತರದಲ್ಲಿ ಬೃಹತ್‌ ಮುನ್ನಡೆ ಸಾಧಿಸಿತು. ಈ ಇಬ್ಬರು ಆಟಗಾರರು 16 ರೈಡಿಂಗ್‌ ಅಂಕಗಳನ್ನು ಕಲೆಹಾಕುವ ಮೂಲಕ, ತಂಡದ ಜಯದ ಹಾದಿಯನ್ನು ಸುಗಮಗೊಳಿಸಿದರು. 5 ಟ್ಯಾಕಲ್‌ ಅಂಕಗಳ ಜೊತೆಯಲ್ಲಿ ಎರಡು ಬಾರಿ ಬೆಂಗಳೂರು ಬುಲ್ಸ್‌ ತಂಡವನ್ನು ಆಲೌಟ್‌ ಮಾಡುವ ಮೂಲಕ ಯುಪಿ ಯೋಧಾಸ್‌ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು.

ಇದನ್ನೂ ಓದಿ:T20 World Cup: ಕೊರೊನಾ ಇದ್ದರೂ ವಿಶ್ವಕಪ್​ನಲ್ಲಿ ಆಡಲು ಆಟಗಾರರಿಗೆ ಅವಕಾಶ

ABOUT THE AUTHOR

...view details