ಕರ್ನಾಟಕ

karnataka

ETV Bharat / state

9ನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್‌ಗೆ ಚಾಲನೆ: ಬೆಂಗಳೂರಲ್ಲಿ ಇಂದು ಮೂರು ಪಂದ್ಯಗಳು

ಪ್ರೋ ಕಬಡ್ಡಿ ಲೀಗ್ 9ನೇ ಆವೃತ್ತಿಗೆ ಗುರುವಾರ ಚಾಲನೆ ನೀಡಲಾಯಿತು. ಮೊದಲ ದಿನವಾದ ಇಂದು ಮೂರು ಪಂದ್ಯಗಳು ನಡೆಯಲಿವೆ.

Pro Kabaddi League
9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ಗೆ ಚಾಲನೆ

By

Published : Oct 7, 2022, 9:28 AM IST

ಬೆಂಗಳೂರು: ವಿವೋ ಪ್ರೋ ಕಬಡ್ಡಿ ಲೀಗ್‌ನ 9ನೇ ಆವೃತ್ತಿಗೆ ಬೆಂಗಳೂರಲ್ಲಿ ಗುರುವಾರ ಚಾಲನೆ ನೀಡಲಾಯಿತು. ವಿಶೇಷ ಕಾರ್ಯಕ್ರಮದಲ್ಲಿ ಮಷಾಲ್‌ ಸ್ಪೋರ್ಟ್ಸ್‌ ಸಂಸ್ಥೆಯು ಕಬಡ್ಡಿ ಲೀಗ್​​ಗೆ ಚಾಲನೆ ನೀಡಿತು.

ಎಲ್ಲ 12 ತಂಡಗಳ ತಲಾ ಒಬ್ಬೊಬ್ಬ ಆಟಗಾರರು ಖಾಸಗಿ ಹೋಟೆಲ್​​ನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಇಂದು ಬೆಂಗಳೂರಿನ ಕಂಠೀರಣ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ‌ದಬಾಂಗ್‌ ಡೆಲ್ಲಿ ಕೆಸಿ ತಂಡವು ಎರಡನೇ ಸೀಸಸ್​ನ ಚಾಂಪಿಯನ್‌ ಯು ಮುಂಬಾ ವಿರುದ್ಧ ಸೆಣಸಲಿದೆ.

ಈ ಸೀಸನ್​​ನಲ್ಲಿ ಪಂದ್ಯಗಳು ಬೆಂಗಳೂರು, ಪುಣೆ ಮತ್ತು ಹೈದರಾಬಾದ್‌ನಲ್ಲಿ ನಡೆಯಲಿದ್ದು, ಮೂರು ವರ್ಷಗಳ ನಂತರ ಕಬಡ್ಡಿ ಪ್ರೇಕ್ಷಕರು ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸುವ ಅವಕಾಶ ಪಡೆದಿರುವುದು ವಿಶೇಷ ಎಂದು ಮಷಾಲ್‌ ಸ್ಪೋರ್ಟ್ಸ್‌ನ ಸಿಇಒ ಅನುಪಮ್‌ ಗೋಸ್ವಾಮಿ ತಿಳಿಸಿದರು.

ಪ್ರೇಕ್ಷಕರಿದಲೇ ಪಂದ್ಯಾವಳಿ ಯಶಸ್ಸು:ಯಾವುದೇ ಕ್ರೀಡೆಯಲ್ಲಿ ಅಭಿಮಾನಿಗಳು ಮತ್ತು ಪ್ರೇಕ್ಷಕರು ಹೃದಯವಿದ್ದಂತೆ. ನಾವು ಈ ಸೀಸನ್​​​​ನಲ್ಲಿ ಕ್ರೀಡಾಂಗಣದ ಒಳಗಡೆ ಪ್ರೇಕ್ಷಕರಿಗೆ ವಿವಿಧ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡುವ ಮೂಲಕ ಹೊಸ ಮಾನದಂಡವನ್ನು ನಿರ್ಮಿಸಲಿದ್ದೇವೆ. ಪ್ರೇಕ್ಷಕರ ಮೇಲೆ ಹೆಚ್ಚು ಗಮನವಿರಿಸುವುದು ಲೀಗ್‌ನ ಪ್ರಮುಖ ಉದ್ದೇಶವಾಗಿದೆ. ಪ್ರೇಕ್ಷಕರ ಹೊರತಾಗಿ ಯಾವುದೇ ಲೀಗ್‌ ಯಶಸ್ಸು ಕಾಣುವುದಿಲ್ಲ. ಪ್ರೇಕ್ಷಕರು ಮತ್ತು ಅಭಿಮಾನಿಗಳಿಂದ ಯಶಸ್ಸು ಕಾಣಲು ನಾವು ಉತ್ತಮ ಗುಣಮಟ್ಟದ ಸ್ಪರ್ಧೆ ಒದಗಿಸಬೇಕು. ಇದು ನಮ್ಮ ಪ್ರಮುಖ ಗುರಿ ಕೂಡ ಆಗಿದೆ. ನಿರಂತರವಾಗಿ ಉತ್ತಮಗೊಳ್ಳುತ್ತಿರುವ ಲೀಗ್‌ ಮಾದರಿಯು ಕೂಡ ಲೀಗ್‌ನ ಯಶಸ್ಸಿನಲ್ಲಿ ಪ್ರಮುಖ ಅಂಶಗಳಲ್ಲಿ ಒಂದಾಗಿದೆ ಎಂದರು.

ರೋಚಕ ಕ್ಷಣಗಳಿಗೆ ಇಂದಿನ ಉದ್ಘಾಟನಾ ಪಂದ್ಯಗಳು ಸಾಕ್ಷಿಯಾಗಲಿವೆ. ಮೊದಲ ದಿನದ ಮೊದಲ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಕೆಸಿ ಮತ್ತು ಯು ಮುಂಬಾ ಮಧ್ಯೆ ನಡೆಯಲಿದೆ. 2ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ - ತೆಲುಗು ಟೈಟಾನ್ಸ್ ಹಾಗೂ 3ನೇ ಪಂದ್ಯದಲ್ಲಿ ಯುಪಿ ಯೋಧಾಸ್ - ಜೈಪುರ ಪಿಂಕ್ ಪ್ಯಾಂಥರ್ಸ್ ಸೆಣಸಲಿವೆ.

ಸಂಜೆ 7:30 ರಿಂದ ಪಂದ್ಯ ಆರಂಭ: ಕಬಡ್ಡಿ ಅಭಿಮಾನಿಗಳು ಬುಕ್‌ ಮೈಶೋ ಆಪ್ ಮತ್ತು ವೆಬ್​ಸೈಟ್ ಮೂಲಕ 9ನೇ ಸೀಸನ್​ನ ಟಿಕೆಟ್‌ಗಳನ್ನು ಕಾಯ್ದಿರಿಸಿಕೊಳ್ಳಬಹುದು. ವಿವೋ ಪ್ರೋ ಕಬಡ್ಡಿ ಲೀಗ್‌ 9ನೇ ಋತುವಿನ ಪಂದ್ಯಗಳು ಸಂಜೆ 7:30ರಿಂದ ಆರಂಭಗೊಳ್ಳಲಿದ್ದು, ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್ಸ್‌ ಮತ್ತು ಡಿಸ್ನಿ+ ಹಾಟ್‌ಸ್ಟಾರ್​‌ನಲ್ಲಿ ನೇರ ಪ್ರಸಾರ ಸಿಗಲಿದೆ. ವಿವೋ ಪ್ರೋ ಕಬಡ್ಡಿ ಲೀಗ್‌ 9ನೇ ಸೀಸನ್​​ ನೇರ ಮಾಹಿತಿಗಾಗಿ www.prokabaddi.com ಗೆ ಲಾಗಿನ್‌ ಆಗಿ ನೋಡಬಹುದು ಎಂದು ಗೋಸ್ವಾಮಿ ಮಾಹಿತಿ ನೀಡಿದರು.

ಜವಾಬ್ದಾರಿಯಿಂದಾಗಿ ವ್ಯಕ್ತಿ ಬಲಿಷ್ಠನಾಗುತ್ತಾನೆ:ಋತುವಿನ ಆರಂಭಿಕ ಪಂದ್ಯದಲ್ಲಿ ಸ್ಪರ್ಧಿಸುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿ ಮಾತನಾಡಿದ ದಬಾಂಗ್‌ ಡೆಲ್ಲಿ ತಂಡದ ನಾಯಕ ನವೀನ್‌ ಕುಮಾರ್‌, “ನಾವು ಹಾಲಿ ಚಾಂಪಿಯನ್ನರು, ಆದ್ದರಿಂದ ಈ ಋತುವಿನಲ್ಲಿಯೂ ನಾವು ಉತ್ತಮ ಪ್ರದರ್ಶನ ನೀಡುತ್ತೇವೆಂಬ ಆತ್ಮವಿಶ್ವಾಸವಿದೆ. ಈ ಹಿಂದೆ ನಾನು ತಂಡದಲ್ಲಿ ಒಬ್ಬ ಆಟಗಾರನಾಗಿ ಆಡುತ್ತಿದ್ದೆ, ಈಗ ನಾಯಕನಾಗಿ ತಂಡದ ಪರ ಆಡುತ್ತಿರುವೆ. ಉತ್ತಮ ಪ್ರದರ್ಶನದೊಂದಿಗೆ ತಂಡವನ್ನು ಮುನ್ನಡೆಸಬೇಕಿದೆ, ಜವಾಬ್ದಾರಿಯಿಂದಾಗಿ ಒಬ್ಬ ವ್ಯಕ್ತಿ ಬಲಿಷ್ಠನಾಗುತ್ತಾನೆ, ಆದ್ದರಿಂದ ನನ್ನ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಂಡು ಈ ಋತುವಿನಲ್ಲಿ ಉತ್ತಮವಾಗಿ ಆಡುವೆ ಎಂದರು.

ಸ್ಟಾರ್‌ ರೈಡರ್‌ ವಿಕಾಶ್‌ ಕಂಡೋಲ ಬೆಂಗಳೂರು ಬುಲ್ಸ್‌ ಸೇರ್ಪಡೆ:ತವರು ತಂಡ (ಬೆಂಗಳೂರು ಬುಲ್ಸ್‌) ನಾಯಕ ಮಹೇಂದರ್‌ ಸಿಂಗ್‌, ಸ್ಟಾರ್‌ ರೈಡರ್‌ ವಿಕಾಶ್‌ ಕಂಡೋಲ ಅವರ ಸೇರ್ಪಡೆಯಾಗಿರುವುದರ ಬಗ್ಗೆ ಮಾತನಾಡಿ, ವಿಕಾಶ್‌ ಒಬ್ಬ ಉತ್ತಮ ರೈಡರ್‌ ಮತ್ತ ಅವರು ಕಳೆದ ಸೀಸನ್​ನ ವಿವೋ ಪ್ರೋ ಕಬಡ್ಡಿ ಲೀಗ್‌ನಲ್ಲಿ ಉತ್ತಮವಾಗಿ ಆಡಿದ್ದಾರೆ. ಅವರಿಂದ ನಾವು ಬಹಳಷ್ಟು ನಿರೀಕ್ಷೆಯಲ್ಲಿದ್ದೇವೆ. ಈ ಸೀಸನ್​​ನಲ್ಲೂ ಅವರು ಉತ್ತಮವಾಗಿ ಆಡಿ ಹೆಚ್ಚಿನ ಪಂದ್ಯಗಳಲ್ಲಿ ಜಯ ಗಳಿಸಲು ನೆರವಾಗುತ್ತಾರೆಂದು ನಾನು ನಂಬಿದ್ದೇನೆ ಎಂದರು.

ಮಷಾಲ್‌ ಸ್ಪೋರ್ಟ್ಸ್‌ನ ಸಿಇಒ, ಸ್ಪೋರ್ಟ್ಸ್‌ ಲೀಗ್‌, ಡಿಸ್ನಿ ಸ್ಟಾರ್‌ ಮತ್ತು ಲೀಗ್‌ ಕಮಿಷನರ್‌ ಅನುಪಮ್‌ ಗೋಸ್ವಾಮಿ ಈ ಸಂದರ್ಭದಲ್ಲಿ ಹಾಜರಿದ್ದರು.

ABOUT THE AUTHOR

...view details