ಕರ್ನಾಟಕ

karnataka

ಪ್ರೋ ಕಬಡ್ಡಿ ಲೀಗ್‌: ಪಿಂಕ್‌ ಪ್ಯಾಂಥರ್ಸ್‌, ಬೆಂಗಾಲ್‌ ವಾರಿಯರ್ಸ್‌ಗೆ ಜಯ

By

Published : Oct 10, 2022, 6:45 AM IST

Pro Kabaddi.. ದಿನದ ಮೊದಲ ಪಂದ್ಯದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡ ಎದುರಾಳಿ ಪಾಟ್ನಾ ಪೈರೇಟ್ಸ್‌ ವಿರುದ್ಧ 35-30 ಅಂಕಗಳ ಅಂತರದಲ್ಲಿ ಜಯ ಗಳಿಸಿತು. 2ನೇ ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ಸ್‌ 45-25 ಅಂಕಗಳ ಅಂತರದಲ್ಲಿ ತೆಲುಗು ಟೈಟಾನ್ಸ್‌ ವಿರುದ್ಧ ಜಯ ಗಳಿಸಿತು.

Pro Kabaddi
ಪ್ರೋ ಕಬಡ್ಡಿ ಲೀಗ್‌: ಪಿಂಕ್‌ ಪ್ಯಾಂಥರ್ಸ್‌, ಬೆಂಗಾಲ್‌ ವಾರಿಯರ್ಸ್‌ಗೆ ಜಯ

ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರೋ ಕಬಡ್ಡಿ ಲೀಗ್‌ನ ಮೂರನೇ ದಿನದ ಮೊದಲ ಎರಡು ಪಂದ್ಯಗಳಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ಹಾಗೂ ಬೆಂಗಾಲ್‌ ವಾರಿಯರ್ಸ್‌ ತಂಡಗಳು ಜಯ ಗಳಿಸಿ ಪ್ರಭುತ್ವ ಸಾಧಿಸಿದವು.

ಪ್ರೋ ಕಬಡ್ಡಿ ಲೀಗ್‌: ಪಿಂಕ್‌ ಪ್ಯಾಂಥರ್ಸ್‌, ಬೆಂಗಾಲ್‌ ವಾರಿಯರ್ಸ್‌ಗೆ ಜಯ

ದಿನದ ಮೊದಲ ಪಂದ್ಯದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡ ಎದುರಾಳಿ ಪಾಟ್ನಾ ಪೈರೇಟ್ಸ್‌ ವಿರುದ್ಧ 35-30 ಅಂಕಗಳ ಅಂತರದಲ್ಲಿ ಜಯ ಗಳಿಸಿತು. 2ನೇ ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ಸ್‌ 45-25 ಅಂಕಗಳ ಅಂತರದಲ್ಲಿ ತೆಲುಗು ಟೈಟಾನ್ಸ್‌ ವಿರುದ್ಧ ಜಯ ಗಳಿಸಿತು.ಬೆಂಗಾಲ್‌ ವಾರಿಯರ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್‌ (11) ಮತ್ತು ದೀಪಕ್‌ ಹೂಡಾ (11) ಈ ಬೃಹತ್‌ ಅಂತರದ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.

ಪ್ರೋ ಕಬಡ್ಡಿ ಲೀಗ್‌: ಪಿಂಕ್‌ ಪ್ಯಾಂಥರ್ಸ್‌, ಬೆಂಗಾಲ್‌ ವಾರಿಯರ್ಸ್‌ಗೆ ಜಯ

ಇದನ್ನೂ ಓದಿ:9ನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್‌ಗೆ ಚಾಲನೆ: ಬೆಂಗಳೂರಲ್ಲಿ ಇಂದು ಮೂರು ಪಂದ್ಯಗಳು

ಜಯದ ಆತ್ಮವಿಶ್ವಾಸ:ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಬೆಂಗಾಲ್‌ ವಾರಿಯರ್ಸ್‌ಗೆ ಈ ಜಯ ಆತ್ಮವಿಶ್ವಾಸವನ್ನು ತುಂಬಿತು. ತೆಲುಗು ಟೈಟಾನ್ಸ್‌ ಸತತ ಎರಡು ಸೋಲುಗಳೊಂದಿಗೆ ಅಂಕ ಪಟ್ಟಿಯಲ್ಲಿ ಹಿನ್ನೆಡೆ ಕಂಡಿತು.

ಪ್ರೋ ಕಬಡ್ಡಿ ಲೀಗ್‌: ಪಿಂಕ್‌ ಪ್ಯಾಂಥರ್ಸ್‌, ಬೆಂಗಾಲ್‌ ವಾರಿಯರ್ಸ್‌ಗೆ ಜಯ

ಪ್ರಥಮಾರ್ಧದಲ್ಲಿ ವಾರಿಯರ್ಸ್‌ ಮುನ್ನಡೆ: ತೆಲುಗು ಟೈಟಾನ್ಸ್‌ ತಂಡದ ವಿರುದ್ಧ ಉತ್ತಮ ಪ್ರದರ್ಶನ ತೋರಿದ ಬೆಂಗಾಲ್‌ ವಾರಿಯರ್ಸ್‌ ಪ್ರಥಮಾರ್ಧದಲ್ಲಿ 25-10 ಅಂಕಗಳ ಅಂತರದಲ್ಲಿ ಮುನ್ನಡೆ ಕಂಡುಕೊಂಡಿತು. ರೈಡಿಂಗ್‌ನಲ್ಲಿ ಒಟ್ಟು 14 ಅಂಕಗಳನ್ನು ಗಳಿಸಿತು. ಟ್ಯಾಕಲ್‌ನಲ್ಲಿ 7 ಅಂಕಗಳನ್ನು ಗಳಿಸಿತಲ್ಲದೇ, ಎರಡು ಬಾರಿ ಟೈಟಾನ್ಸ್‌ ತಂಡವನ್ನು ಆಲೌಟ್‌ ಮಾಡಿತು. ನಾಯಕ ಮಣಿಂದರ್‌ ಸಿಂಗ್‌ ವಾರಿಯರ್ಸ್‌ ಪರ 8 ಅಂಕಗಳನ್ನು ಗಳಿಸಿ ಮುನ್ನಡೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಶ್ರೀಕಾಂತ್‌ ಜಾದವ್‌ 6 ಅಂಕಗಳನ್ನು ಗಳಿಸಿ ಯಶಸ್ವಿ ರೈಡರ್‌ ಎನಿಸಿದರು. ಟ್ಯಾಕಲ್‌ನಲ್ಲಿ ಗಿರೀಶ್‌ ಮಾರುತಿ 3 ಅಂಕಗಳನ್ನು ಗಳಿಸಿ ತಂಡಕ್ಕೆ ನೆರವಾದರು.

ಪ್ರೋ ಕಬಡ್ಡಿ ಲೀಗ್‌: ಪಿಂಕ್‌ ಪ್ಯಾಂಥರ್ಸ್‌, ಬೆಂಗಾಲ್‌ ವಾರಿಯರ್ಸ್‌ಗೆ ಜಯ

ಇದನ್ನೂ ಓದಿ:Pro Kabaddi: ಗುಜರಾತ್ ಜೈಂಟ್ಸ್‌ ಹಾಗೂ ತಮಿಳು ತಲೈವಾಸ್ ರೋಚಕ ಕಾದಾಟ... ಕೊನೆಗೆ ಟೈ

ಪಿಂಕ್‌ ಪ್ಯಾಂಥರ್ಸ್‌ಗೆ ಜಯ: ಅರ್ಜುನ್‌ ದೆಶ್ವಾಲ್‌ (17 ಅಂಕಗಳು) ಅವರ ಅದ್ಭುತ ರೈಡಿಂಗ್‌ ನೆರವಿನಿಂದ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡ ವಿವೋ ಪ್ರೋ ಕಬಡ್ಡಿ ಲೀಗ್‌ನ ತನ್ನ ಎರಡನೇ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್‌ ವಿರುದ್ಧ 35-30 ಅಂಕಗಳ ಅಂತರದಲ್ಲಿ ಜಯಗಳಿಸಿದೆ.ಪಾಟ್ನಾ ಪೈರೇಟ್ಸ್‌ ತಂಡದ ಸಚಿನ್‌ (10)ಹಾಗೂ ರೋಹಿತ್‌ ಗುಲಿಯಾ(11) ದ್ವಿತಿಯಾರ್ಧದ ಕೊನೆಯಲ್ಲಿ ಉತ್ತಮ ಹೋರಾಟ ನೀಡಿ ಸೂಪರ್‌ 10 ಸಾಧನೆ ಮಾಡಿದರೂ ಆಗಲೇ ಕಾಲ ಮಿಂಚಿತ್ತು. ಮೊದಲ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್‌ ತಂಡ ಪುಣೇರಿ ಪಲ್ಟನ್‌ ವಿರುದ್ಧ ಸಮಬಲ ಸಾಧಿಸಿತು.

ಪ್ರೋ ಕಬಡ್ಡಿ ಲೀಗ್‌: ಪಿಂಕ್‌ ಪ್ಯಾಂಥರ್ಸ್‌, ಬೆಂಗಾಲ್‌ ವಾರಿಯರ್ಸ್‌ಗೆ ಜಯ

ಪಿಂಕ್‌ ಪ್ಯಾಂಥರ್ಸ್‌ ಪ್ರಥಮಾರ್ಧದ ಮುನ್ನಡೆ:ಅರ್ಜುನ್‌ ದೇಶ್ವಾಲ್‌(11) ಅವರು ರೈಡಿಂಗ್‌ ಮೂಲಕ ಸೂಪರ್‌ 10 ಸಾಧನೆ ಮಾಡುವುದರೊಂದಿಗೆ ಜೈಪುರ ಪಿಂಕ್‌ ಪ್ಯಾಂಥರ್ಸ್‌ ಪ್ರಥಮಾರ್ಧದಲ್ಲಿ ಪಾಟ್ನಾ ಪೈರೇಟ್ಸ್‌ ವಿರುದ್ಧ 18-14 ಅಂತರದಲ್ಲಿ ಮುನ್ನಡೆ ಕಂಡಿದೆ. ಅಂಕುಶ್‌ ಟ್ಯಾಕಲ್‌ ಮೂಲಕ 2 ಅಂಕ ಗಳಿಸಿ ತಂಡದ ಮುನ್ನಡೆಗೆ ನೆರವಾದರು.

ಪಾಟ್ನಾ ಪೈರೇಟ್ಸ್​​ಗೆ ಪ್ರಥಮಾರ್ಧದ ಹಿನ್ನೆೆಡೆ:ಪಾಟ್ನಾ ಪೈರೇಟ್ಸ್‌ ಪರ ಆಲ್​​ರೌಂಡರ್‌ ರೋಹಿತ್‌ ಗೂಲಿಯಾ 6 ಅಂಕ ಮತ್ತು ರೈಡಿಂಗ್‌ನಲ್ಲಿ ಸಚಿನ್‌ 4 ಅಂಕಗಳನ್ನು ಗಳಿಸಿ ಆರಂಭದಲ್ಲಿ ದಿಟ್ಟ ಸವಾಲು ನೀಡಿದ್ದರು. ಆದರೆ ತಂಡ ಒಂದು ಬಾರಿ ಆಲೌಟ್‌ ಆದದ್ದು ಪ್ರಥಮಾರ್ಧದ ಹಿನ್ನೆಡೆಗೆ ಕಾರಣವಾಯಿತು.

ಇದನ್ನೂ ಓದಿ:ಪ್ರೋ ಕಬಡ್ಡಿ ಲೀಗ್‌: ಬೆಂಗಾಲ್‌ ವಾರಿಯರ್ಸ್‌ಗೆ ಸೋಲುಣಿಸಿದ ಹರಿಯಾಣ ಸ್ಟೀಲರ್ಸ್‌

ABOUT THE AUTHOR

...view details