ಬೆಂಗಳೂರು: ಶಾಸಕ ಸತೀಶ್ ರೆಡ್ಡಿ ಮನೆಗೆ ನುಗ್ಗಿ ಕಾರಿಗೆ ಬೆಂಕಿ ಇಟ್ಟ ಪ್ರಕರಣ ಸಂಬಂಧ ಇದೀಗ ಪೊಲೀಸ್ ತನಿಖೆ ನಡೆಯುತ್ತಿದೆ. ಈ ಬೆನ್ನಲ್ಲೇ ಇಂದು ಸಂತೋಷ್ ಗುರೂಜಿ ನೇತೃತ್ವದಲ್ಲಿ ಆಗಮಿಸಿದ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಶಾಸಕರ ಜೊತೆ ಮಾತುಕತೆ ನಡೆಸಿದ್ದಾರೆ.
ಶಾಸಕ ಸತೀಶ್ ರೆಡ್ಡಿ ಬೆಂಬಲಕ್ಕೆ ನಿಂತ ಹಿಂದೂ ಪರ ಸಂಘಟನೆಗಳು - MLA Satish Reddy Car issue
ಶಾಸಕ ಸತೀಶ್ ರೆಡ್ಡಿ ಮನೆಗೆ ಇಂದು ಸಂತೋಷ್ ಗುರೂಜಿ ನೇತೃತ್ವದಲ್ಲಿ ಆಗಮಿಸಿದ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಅವರ ಜೊತೆ ಮಾತುಕತೆ ನಡೆಸಿದರು.

ಬೇಗೂರು ಕೆರೆ ಮಧ್ಯೆ ಕೃತಕವಾಗಿ ನಿರ್ಮಿಸಿದ್ದ ಶಿವನಮೂರ್ತಿ ಪ್ರತಿಷ್ಠಾಪನೆ ಹಾಗೂ ಪೂಜೆ ವಿಚಾರದಲ್ಲಿ ಸತೀಶ್ ರೆಡ್ಡಿ ಮಧ್ಯಪ್ರವೇಶಿಸಿದ್ದೇ ಈ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ. ಸದ್ಯ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸತೀಶ್ ರೆಡ್ಡಿ ಮನೆಗೆ ಆಗಮಿಸಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ:ಸತೀಶ್ ರೆಡ್ಡಿಗೆ ಸೇರಿದ ಕಾರುಗಳನ್ನು ಬೆಂಕಿ ಇಡಲು ಸಂಚು ರೂಪಿಸಿದ ಆರೋಪಿಗಳು ಎಲ್ಲ ರೀತಿಯ ಪ್ಲ್ಯಾನ್ ಮಾಡಿಕೊಂಡಿದ್ದರು. ಬೇಗೂರು ಬಳಿಯ ಪೆಟ್ರೋಲ್ ಬಂಕ್ವೊಂದರಲ್ಲಿ ಇಬ್ಬರು ದುಷ್ಕರ್ಮಿಗಳು ಬಂದು ಬೈಕ್ನ ಜೊತೆಗೆ ಬಾಟಲಿಯಲ್ಲಿ ಪೆಟ್ರೋಲ್ ತುಂಬಿಸಿಕೊಂಡಿದ್ದಾರೆ. ಬಳಿಕ ಸತೀಶ್ ರೆಡ್ಡಿ ಮನೆ ಹಿಂಭಾಗದ ಗೇಟ್ ಹಾರಿ ಎರಡು ಕಾರುಗಳಿಗೆ ಪೆಟ್ರೋಲ್ ಎರಚಿ, ಬೆಂಕಿ ಇಟ್ಟು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ. ತಮ್ಮ ಬೈಕ್ ಬಗ್ಗೆ ಪೊಲೀಸರಿಗೆ ಗೊತ್ತಾಗದಂತೆ ಮನೆಗೆ ಬರುವ ಮುನ್ನ ಒಂದು ಕಿಮೀ. ದೂರದಲ್ಲಿ ಬೈಕ್ ನಿಲ್ಲಿಸಿ ಎಸ್ಕೇಪ್ ಆಗಿರುವುದು ಕಂಡುಬಂದಿದೆ.