ಬೆಂಗಳೂರು : ಭಾರತದ ಅತ್ಯಂತ ಪುರಾತನ, ಅತಿ ದೊಡ್ಡ ಮತ್ತು ಅತ್ಯುತ್ತಮ ಆಭರಣ ಮೇಳ ಜ್ಯುವೆಲ್ಸ್ ಆಫ್ ಇಂಡಿಯಾದ ಪ್ರದರ್ಶನ ಮತ್ತು ಮಾರಾಟ ಮೇಳ ಇದೇ ತಿಂಗಳು ಅಕ್ಟೋಬರ್ 15 ರಿಂದ 18ರವರೆಗೆ ನಗರದ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಆಯೋಜಿಸಲಾಗಿದೆ.
ದೇಶದಾದ್ಯಂತ 100ಕ್ಕೂ ಹೆಚ್ಚು ಖ್ಯಾತ ಆಭರಣ ಮಾರಾಟಗಾರರು ಈ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ಮೊದಲ ಬಾರಿಗೆ ಶೇ.20ರಷ್ಟು ನೂತನ ಮತ್ತು ಅತ್ಯಾಧುನಿಕ ಮಾದರಿಯ ಆಭರಣಗಳು ಈ ಮೇಳದಲ್ಲಿ ಮಾರಲಾಗುತ್ತೆ.
ಅಂಭೂಷಣ್, ಶ್ರೀ ಗಣೇಶ್ ಡೈಮಂಡ್ಸ್ ಅಂಡ್ ಜ್ಯುವೆಲ್ಸ್, ಪಂಚ್ ಕೇಸರಿ ಬಡೇರಾ ಜ್ಯುವೆಲ್ಸ್, ಎಂ.ಪಿ. ಸ್ವರ್ಣಮಹಲ್, ಕ್ರಿಯೇಷನ್ಸ್ ಜ್ಯುವೆಲ್ಲರಿ, ಪಿಎಂಜೆ. ಜ್ಯುವೆಲ್ಸ್ ಹೀಗೆ ಹತ್ತು-ಹಲವು ಆಭರಣ ಮಾರಾಟಗಾರರು ಮೇಳದಲ್ಲಿ ಭಾಗವಹಿಸಲಿದ್ದಾರೆ. ಇನ್ನು, ಅಕ್ಟೋಬರ್ 15ರಂದು ಮಧ್ಯಾಹ್ನ 12ಗಂಟೆಗೆ ನಟಿ ಪ್ರಿಯಾಂಕಾ ಉಪೇಂದ್ರ ಮೇಳಕ್ಕೆ ಚಾಲನೆ ನೀಡುತ್ತಿದ್ದು, ಈ ಸಂದರ್ಭ ಆಭರಣ ಪ್ರಿಯರಿಗೆ ಸುಮಧುರ ಕ್ಷಣಗಳಾಗಲಿವೆ.