ಬೆಂಗಳೂರು :ಬಿಟ್ ಕಾಯಿನ್ (Bit coin scam) ಪ್ರಕರಣದ ಕುರಿತಂತೆ ಸರ್ಕಾರದಿಂದ ಸಮರ್ಪಕ ತನಿಖೆ ನಡೆಯುತ್ತಿಲ್ಲ. ಅದರ ಪ್ರತಿ ನಡೆಯೂ ಅನುಮಾನ ಮೂಡಿಸುತ್ತಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ (Former Minister Priyank Kharge) ಅಭಿಪ್ರಾಯ ಪಟ್ಟಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಬಿಟ್ಕಾಯಿನ್ ಹಗರಣ ದೇಶದಲ್ಲೇ ಅತಿದೊಡ್ಡ ಹಗರಣವಾಗಿದೆ. ಸರ್ಕಾರಕ್ಕೆ ಆಗಿರುವ ನಷ್ಟ ಯಾರು ಭರಿಸುತ್ತಾರೆ?. ಗುತ್ತಿಗೆದಾರರ ಮನವೊಲಿಸುವುದಕ್ಕೆ ಈ ಹಗರಣ ನಡೆದಿದೆ.
ಗೃಹ ಇಲಾಖೆ ಯಾರ ನಿಯಂತ್ರಣದಲ್ಲಿದೆ?. ನ್ಯಾಯಾಲಯ, ಸರ್ಕಾರದ ಬಳಿ ಇರುವ ದಾಖಲೆ ಇಟ್ಟು ಮಾತನಾಡುತ್ತೇನೆ. ಪ್ರಕರಣ ಮುಚ್ಚಿ ಹಾಕುವುದಕ್ಕೆ ಈ ರೀತಿಯ ತನಿಖೆ ನಡೆಯುತ್ತಿದೆ.
ಬಿಟ್ ಕಾಯಿನ್ ಹಗರಣದ ಬಗ್ಗೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿರುವುದು.. ನಮ್ಮ ಪ್ರಕಾರ, ಸೂಕ್ತ ತನಿಖೆ ನಡೆದರೆ ಮೂರನೇ ಸಿಎಂ ಕಾಣುವ ಅವಕಾಶ ಒದಗಿ ಬರಲಿದೆ. ಸರ್ಕಾರದ ಕೈಗೊಂಬೆಗಳಾಗಿ ತನಿಖಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ನ್ಯಾಯ ಸಿಗಬೇಕಾದರೆ ನ್ಯಾಯಾಂಗ ತನಿಖೆ ಮಾತ್ರ ಪರಿಹಾರ ಎಂದು ಅಭಿಪ್ರಾಯಪಟ್ಟರು.
ವೈಯಕ್ತಿಕ ಟೀಕೆಗೆ ಕಿಡಿ ಪರಿಣಾಮ ಎದುರಿಸಿ :ರಾಜಕಾರಣಿಗಳು ಪರ್ಸನಲ್ ಟೀಕೆ ಮಾಡಲ್ಲ. ಬಿಜೆಪಿ ಅವರು ನನ್ನ ಮತ್ತು ನಮ್ಮ ಕುಟುಂಬದ ವಿರುದ್ಧ ವೈಯುಕ್ತಿಕ ಟೀಕೆ ಮಾಡ್ತಿದ್ದಾರೆ. ನಾನು ಬಿಟ್ ಕಾಯಿನ್ ವಿಚಾರ ಪ್ರಸ್ತಾಪ ಮಾಡಿದ ಬಳಿಕ ಬಿಜೆಪಿ ಪಕ್ಷದವರು ಹಲವು ಬಿರುದುಗಳನ್ನ ನೀಡಿದ್ದಾರೆ. ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು 50 ಸಾವಿರ ಕೋಟಿ ಖರ್ಗೆ ಆಸ್ತಿ ಇದೆ ಎಂದು ಹೇಳಿದ್ದಾರೆ. ನಮ್ಮ ಬಜೆಟ್ ಎಷ್ಟಿದೆಯೋ ಅದಕ್ಕಿಂತಲೂ ಜಾಸ್ತಿ ಎಂದು ಹೇಳಿದ್ದೀರಿ. ಎಲ್ಲರ ವಿರುದ್ಧವೂ ಸಹ ಲೀಗಲ್ ಫೈಟ್ ಮಾಡ್ತೀನಿ. ಎಲ್ಲರಿಗೂ ನೋಟೀಸ್ ಕೊಡ್ತೀನಿ ಎಂದರು.
ಮೈಸೂರು ಸಂಸದರು ಏಕವಚನದಲ್ಲಿ ಮಾತಾಡಿದ್ದಾರೆ. ಪ್ರಿಯಾಂಕ ಅಲ್ಲ ಪ್ರಿಯಾಂಕ್ ಎಂಬುದು ನನ್ನ ಹೆಸರು. 'ಪ್ರಿಯಾಂಕ್' ಅಂದರೆ ಎಲ್ಲರನ್ನೂ ಇಷ್ಟಪಡುವವರು ಅಂತಾ. ಪ್ರತಾಪ ಅಂದ್ರೆ 'ಗಂಭೀರ' ಎಂದು ಅರ್ಥ. ನಿನಗೆ ಗಂಭೀರತೆಯೇ ಇಲ್ಲ. ಬಿಜೆಪಿ ಸಂಸದೆ ಮನೇಕಾ ಗಾಂಧಿ ಅವರು ಹಿಂದೂ ಹೆಸರುಗಳ ಮೇಲೆ ಬರೆದ ಪುಸ್ತಕ ಓದಿಕೊಳ್ಳಲಿ. ಪ್ರತಾಪ್ ಸಿಂಹ ಅವರಿಗೆ ಹಿಂದೂ ಮತ್ತು ಬೌದ್ಧ ಎರಡು ಧರ್ಮದ ಬಗ್ಗೆಯೂ ಅರಿವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ವೈಯಕ್ತಿಕ ದಾಳಿ ಮಾಡಿದ್ರೆ, ಕಾನೂನು ಹೋರಾಟಕ್ಕೆ ಸಿದ್ಧರಾಗಿರಿ. ಇನ್ಮೇಲೆ ಹೋರಾಟಕ್ಕೆ ಬಂದ್ರೆ ಓಕೆ. ನನಗೆ ಬುದ್ಧ- ಬಸವ ತತ್ವ ಗೊತ್ತು. ಅಂಬೇಡ್ಕರ್ ಸಂವಿಧಾನವೂ ಸಹ ಗೊತ್ತು ಎಂದರು.
ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು. ನಡೆದರೆ ಮೂರನೇ ಸಿಎಂ ಬರ್ತಾರೆ ಎಂದಿದ್ದೆ. ಈ ಮಾತಿಗೆ ನಾನು ಈಗಲೂ ಬದ್ಧ. ಆದರೆ, ತನಿಖೆ ಆ ರೀತಿ ನಡೆಯುತ್ತಿದೆಯೇ? ಶ್ರೀಕಿ ಅರೆಸ್ಟ್ ಮಾಡಿ ಒಂದು ವರ್ಷ ಆಗಿದೆ. ಆದರೂ, ಚಾರ್ಜ್‌ಶೀಟ್ ಸಲ್ಲಿಕೆ ಮಾಡಿಲ್ಲ. ರಾಬಿನ್ ಖಂಡೆವಾಲ ವಾಲೆಟ್‌ನಲ್ಲಿ ಬಿಟ್ ಕಾಯಿನ್, ಶ್ರೀಕಿ ವಾಲೆಟ್‌ನಲ್ಲಿ 31.8 ಬಿಟ್ ಕಾಯಿನ್ ಇತ್ತು. ಇದನ್ನ ಯಾಕೆ ಇವರು ಬಹಿರಂಗ ಪಡಿಸಲಿಲ್ಲ?.
31 ಇದ್ದದ್ದು 186 ಬಿಟ್ ಕಾಯಿನ್ ಹೇಗೆ ಬಂತು? 186 ಬಿಟ್ ಕಾಯಿನ್ ಸಿಕ್ಕಿದ್ದು ಹೇಗೆ ಮಾಯವಾಯ್ತು?. 31 ಬಿಟ್ ಕಾಯಿನ್ ಬಗ್ಗೆ ಸುದ್ದಿಗೋಷ್ಠಿ ಮಾಡ್ತಾರೆ. 186 ಬಿಟ್ ಕಾಯಿನ್ ಬಗ್ಗೆ ಯಾಕೆ ಮಾತನಾಡಲ್ಲ. ಹ್ಯಾಕರ್‌ನ ಹಿಡಿದಿದ್ದೇವೆಂದು ಬೆನ್ನುತಟ್ಟಿಕೊಂಡ್ರಿ ಅಷ್ಟೇ ಎಂದು ಪೊಲೀಸರ ತನಿಖೆಯ ಬಗ್ಗೆ ಪ್ರಿಯಾಂಕ್ ಅನುಮಾನ ವ್ಯಕ್ತಪಡಿಸಿದರು.
ಸರ್ಕಾರ ಇಂಟರ್ ಪೋಲ್ಗೆ ಪತ್ರ ಬರೆಯುತ್ತೆ. 23 ಸಾವಿರ ಮಾತ್ರ ಪತ್ರದಲ್ಲಿ ತಪ್ಪು ಮಾಹಿತಿ ನೀಡ್ತಾರೆ. ಕಳೆದ ಏಪ್ರಿಲ್‌ನಲ್ಲೇ ಇಂಟರ್ ಫೋಲ್ಗೆ ಪತ್ರ ಬರೆಯುತ್ತಾರೆ. ಕೇಸ್ ನಂಬರ್ ಇಲ್ಲ. ಫೈಲ್ ನಂಬರ್ ಇಲ್ಲ. ಎಲ್ಲವನ್ನೂ ಮುಚ್ಚಿ ಹಾಕಿ ತನಿಖೆ ಮಾಡ್ತಿದ್ದಾರೆ. ತುಮಕೂರಿನ ಬೇಲ್ ಅಪ್ಲಿಕೇಶನ್ ಇಟ್ಟು ಪಿಸಿ ಮಾಡ್ತಾರೆ. ಯಾರದ್ದೋ ಬೇಲ್ ಅಪ್ಲಿಕೇಶನ್ ತೋರಿಸಿ ಮುಚ್ಚಿಡುತ್ತಾರೆ. ಈ ರೀತಿ ತಪ್ಪು ಮಾಹಿತಿ ಕೊಡುವುದು ಸರಿಯೇ? ಎಂದು ಪ್ರಶ್ನಿಸಿದರು.
ಶ್ರೀಕಿ ಕಸ್ಟಡಿಯಲ್ಲಿದ್ದಾಗ 5000 ಬಿಟ್ ಕಾಯಿನ್ ವರ್ಗಾವಣೆ ಆಗಿದೆ. ಅದು ಆಕಡೆ, ಈಕಡೆ ವರ್ಗಾವಣೆ ಆಗಿದ್ಹೇಗೆ?. ಶ್ರೀಕಿ ಕಸ್ಟಡಿಯಲ್ಲಿದ್ದಾಗ ಟ್ರಾನ್ಸಾಕ್ಷನ್ ಆಗಿದೆ. ಕಸ್ಟಡಿಯಲ್ಲಿದ್ದಾಗ ಬೇರೆ ಬೇರೆ ವರ್ಗಾವಣೆಯಾಗಿದ್ಹೇಗೆ? ಯಾರ ಅಕೌಂಟ್ಗಳಿಗೆ ವರ್ಗಾವಣೆಯಾಗಿದೆ. ವರ್ಗಾವಣೆಗೊಂಡಿರುವ ಅಕೌಂಟ್ ಯಾರದ್ದು? ಅವರ ಅಕೌಂಟ್ಗಳಿಗೆ ಯಾಕೆ ವರ್ಗಾವಣೆಯಾಯ್ತು?.
18.21 ಕೋಟಿ ಟ್ರಾನ್ಸಾಕ್ಷನ್ ಆಗಿದ್ಹೇಗೆ?. ಇದರ ಬಗ್ಗೆ ಯಾಕೆ ಚಾರ್ಜ್‌ಶೀಟ್ ಸಲ್ಲಿಸಿಲ್ಲ. ನಾವು ಇದರ ಬಗ್ಗೆ ಊಹಾಪೋಹದ ಪ್ರಶ್ನೆ ಎತ್ತಿಲ್ಲ. ಪೊಲೀಸರ ಅಧಿಕೃತ ದಾಖಲೆ ಇಡ್ಕೊಂಡೇ ಕೇಳಿದ್ದೇವೆ. ಇದೆಲ್ಲವೂ ಪೊಲೀಸರ ದಾಖಲೆಗಳೇ.. ನಮ್ಮ ಪ್ರಶ್ನೆಗೆ ಉತ್ತರ ಕೊಡಿ ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.
ಓದಿ:ಹೈಕೋರ್ಟ್ ತಳಮಹಡಿ ಕಚೇರಿ ಸ್ಥಳಾಂತರಕ್ಕೆ KGID ಕಟ್ಟಡ ನೀಡುವಂತೆ ಸರ್ಕಾರಕ್ಕೆ ಮನವಿ