ಕರ್ನಾಟಕ

karnataka

ETV Bharat / state

ಭಾರತ್​ ಬಂದ್​ಗೆ ಖಾಸಗಿ ಶಾಲೆಗಳ ಬೆಂಬಲ: ಒಂದು ದಿನ ಆನ್​ಲೈನ್​​ ಕ್ಲಾಸ್ ಸ್ಥಗಿತ‌

ರೂಪ್ಸಾ, ಕುಸುಮ ಸೇರಿದಂತೆ ಹಲವು ಖಾಸಗಿ ಶಾಲೆ ಸಂಘಟನೆಗಳು ನಾಳೆ ಇರುವ ಭಾರತ್​​ ಬಂದ್​​ಗೆ ಬೆಂಬಲ ನೀಡಿವೆ.‌ ನಾಳೆ ಒಂದು ದಿನ ಆನ್​ಲೈನ್ ಕ್ಲಾಸ್ ಸ್ಥಗಿತಗೊಳಿಸುವ ಮೂಲಕ ಬೆಂಬಲ ವ್ಯಕ್ತಪಡಿಸಿವೆ.

ರೈತರ ಬಂದ್​​ಗೆ ಖಾಸಗಿ ಶಾಲೆಗಳ ಬೆಂಬಲ
ರೈತರ ಬಂದ್​​ಗೆ ಖಾಸಗಿ ಶಾಲೆಗಳ ಬೆಂಬಲ

By

Published : Dec 7, 2020, 5:27 PM IST

ಬೆಂಗಳೂರು:ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಾಳೆ ಭಾರತ್​ ಬಂದ್​ಗೆ ಕರೆ ನೀಡಿದ್ದಾರೆ. ರೈತರ ಈ ಬಂದ್​ಗೆ ರಾಜ್ಯದಲ್ಲಿರುವ ಎಲ್ಲ ಖಾಸಗಿ ಅನುದಾನ ರಹಿತ ಶಾಲೆಗಳು ಬೆಂಬಲ ವ್ಯಕ್ತಪಡಿಸಿವೆ.

ರೂಪ್ಸಾ, ಕುಸುಮ ಸೇರಿದಂತೆ ಹಲವು ಖಾಸಗಿ ಶಾಲೆ ಸಂಘಟನೆಗಳು ಬಂದ್​​ಗೆ ಬೆಂಬಲ ನೀಡಿವೆ.‌ ನಾಳೆ ಒಂದು ದಿನ ಆನ್​ಲೈನ್ ಕ್ಲಾಸ್ ಸ್ಥಗಿತಗೊಳಿಸುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.

ರೈತರ ಬಂದ್​​ಗೆ ಖಾಸಗಿ ಶಾಲೆಗಳ ಬೆಂಬಲ

ಆನ್​ಲೈನ್ ಪರೀಕ್ಷೆ ಹೊರತುಪಡಿಸಿ ದಿನನಿತ್ಯ ನಡೆಯುತ್ತಿದ್ದ, ಪಾಠಗಳಿಗೆ ಬ್ರೇಕ್ ಹಾಕಲಾಗುತ್ತಿದೆ. ಈಗಾಗಲೇ ಹಲವು ಜಿಲ್ಲಾ ಸದಸ್ಯರಿಗೆ ಈ ಕುರಿತು ಮಾಹಿತಿ ರವಾನೆ ಮಾಡಲಾಗಿದೆ. ಜೊತೆಗೆ ಕೇಂದ್ರ ಸಂಘಟನೆಗಳು ಇದೇ ಉದ್ದೇಶ ಹೊಂದಿದ್ದು, ಆನ್​ಕ್ಲಾಸ್ ಸ್ಥಗಿತಗೊಳಿಸಲಿದ್ದಾರೆ ಎಂದು ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಹೇಳಿದ್ದಾರೆ.

ಇದನ್ನು ಓದಿ:ಕೃಷಿ ಕಾನೂನು ವಿರೋಧಿಸಿ ಪ್ರತಿಭಟನೆ: ಎಮ್ಮೆ ಮುಂದೆ ಪುಂಗಿ ಊದಿ ರೈತನಿಂದ ಅಣಕ!

ರೂಪ್ಸಾ ಸಂಘಟನೆಯ ಅಧ್ಯಕ್ಷ ಲೋಕೇಶ್ ತಾಳಿಕೋಟೆ ಮಾತನಾಡಿ, ರೈತರು ಕರೆ ಕೊಟ್ಟಿರುವ ಭಾರತ ಬಂದ್​ಗೆ ನಾವು ಬೆಂಬಲಿಸುತ್ತಿದ್ದು, ಸಾಂಕೇತಿಕವಾಗಿ ಒಂದು ದಿನದ ಆನ್​ಲೈನ್ ಕ್ಲಾಸ್ ಸ್ಥಗಿತಗೊಳಿಸುತ್ತಿದ್ದೇವೆ ಎಂದಿದ್ದಾರೆ.

ABOUT THE AUTHOR

...view details