ಬೆಂಗಳೂರು : 6 ರಿಂದ 14 ವರ್ಷ ವಯೋಮಾನದ ಎಲ್ಲಾ ಮಕ್ಕಳಿಗೆ ಕಡ್ಡಾಯ ಮತ್ತು ಉಚಿತ ಶಿಕ್ಷಣವನ್ನು ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯಡಿ ನೀಡುತ್ತಿದ್ದು, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಶುಲ್ಕವನ್ನು ಆರ್ಟಿಇ ಕಾಯ್ದೆ 2009ರ ಸೆಕ್ಷನ್ 12(2)ರ ಅಡಿಯಲ್ಲಿ ಸರ್ಕಾರ ಮರುಭರಣ ಮಾಡಿದೆ.
2019-20ನೇ ಸಾಲಿನಲ್ಲಿ 500 ಕೋಟಿ ಬಿಡುಗಡೆಯಾಗಿದೆ. 11432 ಶಾಸಗಿ ಶಾಲೆಗಳ 506694 ವಿದ್ಯಾರ್ಥಿಗಳ ಶುಲ್ಕ ಮರುಪಾವತಿಗಾಗಿ ಅನುದಾನ ಬಳಕೆ ಮಾಡಲಾಗಿದೆ.
2020-21ರ ಸಾಲಿಗೆ 11386 ಖಾಸಗಿ ಶಾಲೆಗಳ 475083 ವಿದ್ಯಾರ್ಥಿಗಳ ಶುಲ್ಕ ಮರುಪಾವತಿಗೆ 550 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.