ಕರ್ನಾಟಕ

karnataka

ETV Bharat / state

ಶುಲ್ಕ ನಿಗದಿ ಮಾಡಿಕೊಳ್ಳಲು ಖಾಸಗಿ ಶಾಲೆಗಳು ಅರ್ಹವಾಗಿವೆ: ಹೈಕೋರ್ಟ್ - ಈಟಿವಿ ಭಾರತ ಕನ್ನಡ

ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ತಮ್ಮ ಶಾಲೆಗಳಲ್ಲಿ ನ್ಯಾಯಸಮ್ಮತವಾದ ಶುಲ್ಕವನ್ನು ನಿಗದಿ ಪಡಿಸಿಕೊಳ್ಳಲು ಅರ್ಹವಾಗಿವೆ ಎಂದು ಹೈಕೋರ್ಟ್​ ತಿಳಿಸಿದೆ.

private-schools-are-eligible-to-charge-reasonable-fees-says-highcourt
ಖಾಸಗಿ ಶಾಲೆಗಳು ಶುಲ್ಕ ನಿಗದಿಪಡಿಸಿಕೊಳ್ಳಲು ಅರ್ಹವಾಗಿವೆ : ಹೈಕೋರ್ಟ್

By

Published : Dec 12, 2022, 6:05 PM IST

ಬೆಂಗಳೂರು:ರಾಜ್ಯದ ಅನುದಾನರಹಿತ ಶಾಲೆಗಳು ಶುಲ್ಕ ನಿಗದಿಪಡಿಸಿಕೊಳ್ಳುವುದು ಸೇರಿದಂತೆ ಕರ್ನಾಟಕ ಶಿಕ್ಷಣ ಕಾಯಿದೆ 1983ರ ಕೆಲವು ಸೆಕ್ಷನ್‌ಗಳನ್ನು ಖಾಸಗಿ ಶಾಲೆಗಳಿಗೆ ಅನ್ವಯಿಸುವುದಕ್ಕೆ ತಿಳಿಸಿರುವ ಹೈಕೋರ್ಟ್, ಈ ಸಂಬಂಧದ ಕೆಲವು ಅಂಶಗಳನ್ನು ಅಸಾಂವಿಧಾನಿಕ ಎಂದು ಘೋಷಣೆ ಮಾಡಿದೆ.

ಕರ್ನಾಟಕ ಅನುದಾನ ರಹಿತ ಶಾಲೆಗಳ ನಿರ್ವಹಣಾ ಸಂಘ(ಕುಸ್ಮಾ) ಸೇರಿದಂತೆ ಇತರ ಖಾಸಗಿ ಶಾಲೆಗಳ ಸಂಘಟನೆಗಳು 1995ರಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆಲೋಕ್ ಆರಾಧೆ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಕರ್ನಾಟಕ ಶಿಕ್ಷಣ ಕಾಯಿದೆ 1983ರ ಸೆಕ್ಷನ್ 3(2)(ಎ ಯಿಂದ ಎಚ್), ಸೆಕ್ಷನ್ 7(1)(ಎ ಯಿಂದ ಐ), ಸೆಕ್ಷನ್ 38, 41(2)(ಬಿ)(3), ಸೆಕ್ಷನ್ 41(5), ಸೆಕ್ಷನ್ 42,43,44,48 ಮತ್ತು 67 ರ ಸಿಂಧುತ್ವವನ್ನು ಪ್ರಶ್ನಿಸಲಾಗಿತ್ತು.

ಕರ್ನಾಟಕ ಶಿಕ್ಷಣ ಕಾಯಿದೆ 1983ರ 1995ರ ನಿಯಮ 10(3)(ಸಿ)(2)ರ ಪ್ರಕಾರ ಮಾನ್ಯತೆ ಪಡೆದ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ವರ್ಷಕ್ಕೆ ಗರಿಷ್ಠ 600 ರೂ. ಶುಲ್ಕ ವಿಧಿಸಬೇಕು ಎಂಬುದನ್ನು ರದ್ದುಪಡಿಸಿದೆ. ಓ.ಎಂ.ಪೈ ಫೌಂಡೇಷನ್‌ನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ಈ ನಿಯಮ ಮುಂದುವರೆಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಅದೇ ರೀತಿಯಲ್ಲಿ 1995ರ ನಿಯಮ 10(3)(ಅ)(ಎ) ಮತ್ತು 1999ರ ನಿಯಮ 4(4)ರಂತೆ ಬೋಧನಾ ಶುಲ್ಕದ ಪ್ರಮಾಣದಲ್ಲಿ ಕೇವಲ 10 ರಷ್ಟು ಮಾತ್ರ ಅವಧಿಯ ಶುಲ್ಕ ಪಡೆಯುವುದನ್ನು ರದ್ದು ಪಡಿಸಿದ್ದು, ಖಾಸಗಿ ಅನುದಾನರಹಿತ ಶಾಲೆಗಳಿಗೆ ಸಂಬಂಧಿಸಿದಂತೆ ಈ ನಿಯಮಗಳು ಅನ್ವಯಿಸುವುದಿಲ್ಲ. ಅಲ್ಲದೇ, ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ತಮ್ಮ ಶಾಲೆಗಳಲ್ಲಿ ಶುಲ್ಕವನ್ನು ನ್ಯಾಯಸಮ್ಮತವಾಗಿ ನಿಗದಿಪಡಿಸಿಕೊಳ್ಳಲು ಅರ್ಹವಾಗಿವೆ ಎಂದು ನ್ಯಾಯಪೀಠ ತಿಳಿಸಿದೆ.

ಇದನ್ನೂ ಓದಿ :ವಕೀಲರ ಕಚೇರಿ ಗುಮಾಸ್ತರ ಕಲ್ಯಾಣಕ್ಕಾಗಿ ಯೋಜನೆ: ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್

ABOUT THE AUTHOR

...view details