ಬೆಂಗಳೂರು :ಕೊರೊನಾ ಕಾರಣಕ್ಕೆ ಸಂಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರು ಶಿಕ್ಷಕರ ದಿನದಂದೇ ಬೀದಿಗಿಳಿದು ಧರಣಿ ನಡೆಸಿದರು.
ಶಿಕ್ಷಕರ ದಿನದಂದೇ ಬೀದಿಗಿಳಿದ ಖಾಸಗಿ ಶಾಲಾ ಶಿಕ್ಷಕರು.. ಕಪ್ಪುಪಟ್ಟಿ ಧರಿಸಿ ಧರಣಿ.. - ಬೆಂ ಗಳೂರಿನಲ್ಲಿ ಶಿಕ್ಷಕರಿಂದ ಪ್ರತಿಭಟನೆ
ಶಾಲೆಗಳು ಆರಂಭವಾಗದ ಕಾರಣ ತಿಂಗಳ ವೇತನಕ್ಕೆ ಕತ್ತರಿ ಬಿದ್ದಿದೆ. ಕೇಂದ್ರ ಸರ್ಕಾರ ಆನ್‌ಲಾಕ್ 4 ಜಾರಿ ಮಾಡಿದ್ರೂ ಸಹ ಇನ್ನೂ ಶಾಲಾ-ಕಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಈ ನಡುವೆ ಆನ್ಲೈನ್ ಬೋಧನೆ ಮಾಡಲಾಗುತ್ತಿದೆ..
ಕೈಗೆ ಕಪ್ಪು ಪಟ್ಟಿ ಧರಿಸಿ ನಗರದ ಶಿಕ್ಷಣ ಸದನದಲ್ಲಿ ನಾಮಫಲಕ ಹಿಡಿದು ಸಚಿವರ ಗಮನ ಸೆಳೆದರು. ಕೊರೊನಾ ವೈರಸ್ನಿಂದಾಗಿ ಶಿಕ್ಷಣ ಸಂಸ್ಥೆಗಳು, ಬೋಧಕ- ಬೋಧಕೇತರ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕುವಂತಾಯಿತು.
ಶಾಲೆಗಳು ಆರಂಭವಾಗದ ಕಾರಣ ತಿಂಗಳ ವೇತನಕ್ಕೆ ಕತ್ತರಿ ಬಿದ್ದಿದೆ. ಕೇಂದ್ರ ಸರ್ಕಾರ ಆನ್‌ಲಾಕ್ 4 ಜಾರಿ ಮಾಡಿದ್ರೂ ಸಹ ಇನ್ನೂ ಶಾಲಾ-ಕಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಈ ನಡುವೆ ಆನ್ಲೈನ್ ಬೋಧನೆ ಮಾಡಲಾಗುತ್ತಿದೆ. ಆದರೆ, ಹಲವು ಶಿಕ್ಷಕರು ಬೀದಿಗೆ ಬೀಳುವ ಪರಿಸ್ಥಿತಿ ಉಂಟಾಗಿದೆ. ಶಿಕ್ಷಣ ಬಿಟ್ಟು ಬೇರೆ ವ್ಯಾಪಾರ ಮಾಡುವಂತಾಗಿದೆ ಎಂದು ತಮ್ಮ ನೊವು ತೋಡಿಕೊಂಡಿದ್ದಾರೆ.