ಬೆಂಗಳೂರು:ಮಾನವೀಯತೆ ಮರೆತು ಕೋವಿಡ್ ಸೋಂಕಿತ ಕುಟುಂಬಸ್ಥರಿಂದ ಲಕ್ಷಾಂತರ ರೂಪಾಯಿ ವಸೂಲಿಗೆ ಇಳಿದಿದ್ದ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಕಡಿವಾಣ ಹಾಕಿದೆ. ಚಿಕಿತ್ಸೆ ಸೋಗಿನಲ್ಲಿ ಲಕ್ಷಾಂತರ ರೂಪಾಯಿ ಶುಲ್ಕ ವಸೂಲಿ ಮಾಡುತ್ತಿದ್ದ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಕಟ್ಟಿಸಿಕೊಂಡಿದ್ದ ಹಣ ರಿಫಂಡ್ ಮಾಡಿವೆ.
ಖಾಸಗಿ ಆಸ್ಪತ್ರೆಗಳ ಧನದಾಹಕ್ಕೆ ಸರ್ಕಾರದ ಬ್ರೇಕ್... ರೋಗಿಗಳ ಹಣ ರಿಫಂಡ್ - Private covid Hospital
ಐಪಿಎಸ್ ಅಧಿಕಾರಿಗಳಾದ ಅಲೋಕ್ ಕುಮಾರ್, ಡಿ.ರೂಪಾ, ಐಎಎಸ್ ಅಧಿಕಾರಿ ಹರ್ಷ ಗುಪ್ತ ನೇತೃತ್ವದ ತಂಡ ಇತ್ತೀಚೆಗೆ ಖಾಸಗಿ ಆಸ್ಪತ್ರೆಗಳ ಭೇಟಿ ವೇಳೆ ರೋಗಿಗಳಿಂದ ಲಕ್ಷಾಂತರ ರೂಪಾಯಿ ವಸೂಲಿ ಬಗ್ಗೆ ತಿಳಿದು ಆಸ್ಪತ್ರೆಯ ಆಡಳಿತ ಮಂಡಳಿಗೆ ಎಚ್ಚರಿಕೆ ಕೊಟ್ಟಿತ್ತು. ಈ ಬೆನ್ನಲ್ಲೆ ಖಾಸಗಿ ಆಸ್ಪತ್ರೆಗಳು ಸೋಂಕಿತರಿಂದ ಪಡೆದಿದ್ದ ಹಣವನ್ನು ವಾಪಸ್ ನೀಡಿವೆ.
![ಖಾಸಗಿ ಆಸ್ಪತ್ರೆಗಳ ಧನದಾಹಕ್ಕೆ ಸರ್ಕಾರದ ಬ್ರೇಕ್... ರೋಗಿಗಳ ಹಣ ರಿಫಂಡ್ Private hospitals refunds their covid treatment money statement](https://etvbharatimages.akamaized.net/etvbharat/prod-images/768-512-8196784-thumbnail-3x2-bng.jpg)
ಇದರಿಂದ ಸದ್ಯ ಲಾಕ್ಡೌನ್ ನಡುವೆ ರೋಗಿಗಳು ನಿಟ್ಟುಸಿರು ಬಿಡುವಂತಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ, ನಿಗದಿಗಿಂತ ಹೆಚ್ಚು ಹಣ ವಸೂಲಿ ಸೇರಿದಂತೆ ರಾಜ್ಯ ಸರ್ಕಾರ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ವಿಶೇಷ ತಂಡ ರಚಿಸಿತ್ತು. ಐಪಿಎಸ್ ಅಧಿಕಾರಿಗಳಾದ ಅಲೋಕ್ ಕುಮಾರ್, ಡಿ.ರೂಪಾ, ಐಎಎಸ್ ಅಧಿಕಾರಿ ಹರ್ಷ ಗುಪ್ತ ನೇತೃತ್ವದ ತಂಡ ಇತ್ತೀಚೆಗೆ ಖಾಸಗಿ ಆಸ್ಪತ್ರೆಗಳ ಭೇಟಿ ವೇಳೆ ರೋಗಿಗಳಿಂದ ಲಕ್ಷಾಂತರ ರೂಪಾಯಿ ವಸೂಲಿ ಬಗ್ಗೆ ತಿಳಿದು ಆಸ್ಪತ್ರೆಯ ಆಡಳಿತ ಮಂಡಳಿಗಳಿಗೆ ಎಚ್ಚರಿಕೆ ಕೊಟ್ಟಿತ್ತು.
ಇದರ ಫಲಶೃತಿ ಎಂಬಂತೆ ಕೊರೊನಾ ಸೋಂಕಿತರಿಂದ ಕಟ್ಟಸಿಕೊಂಡಿದ್ದ ಹಣವನ್ನು ಮರುಪಾವತಿ ಮಾಡಿದೆ. ಈ ಬಗ್ಗೆ ರೋಗಿಯ ಕುಟುಂಬಸ್ಥರು ಪ್ರತಿಕ್ರಿಯಿಸಿದ್ದು, ಸರ್ಕಾರ ರಚಿಸಿದ ವಿಶೇಷ ತಂಡದಿಂದ ಆಸ್ಪತ್ರೆಯಲ್ಲಿ ಕಟ್ಟಿದ್ದ ಲಕ್ಷಾಂತರ ರೂಪಾಯಿ ಹಣವನ್ನು ನಮಗೆ ಮರಳಿ ಹಿಂದಿರುಗಿಸಿರುವುದು ಖುಷಿ ತಂದಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.