ಬೆಂಗಳೂರು: ರಾಜ್ಯದ ಬಹುತೇಕ ಎಲ್ಲೆಡೆ ಸ್ಮಾರ್ಟ್ ಕೊಠಡಿಗಳಲ್ಲಿ ಸರ್ಕಾರಿ ತರಗತಿಗಳು ಆರಂಭಗೊಂಡಿವೆ, ಆದರೆ, ಖಾಸಗೀ ಶಾಲೆಗಳು ಇನ್ನೂ ಆರಂಬಿಸಿಲ್ಲ. ಶಾಲೆಗೆ ಮಕ್ಕಳನ್ನು ಕಳುಹಿಸುವಂತೆ ಪೋಷಕರಿಗೆ ಒತ್ತಾಯವೇನಿಲ್ಲ. ಆದರೆ, ಮಕ್ಕಳು ಶಾಲೆಗೆ ಬರಬೇಕಿದೆ. ಖಾಸಗೀ ಶಾಲೆ ಆರಂಭಿಸಲೇಬೇಕು ಇಲ್ಲವಾದರೆ ಕ್ರಮಕ್ಕೆ ಮುಂದಾಗಲು ಯೋಚಿಸಲಿದ್ದೇವೆ ಎಂದು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಚಿವ ಬಿಸಿ ನಾಗೇಶ್ ಎಚ್ಚರಿಕೆ ನೀಡಿದ್ದಾರೆ.
ಖಾಸಗಿ ಶಿಕ್ಷಣ ಸಂಸ್ಥೆಗಳು ಕೂಡಲೇ ಶಾಲೆ ತೆರೆಯಬೇಕು: ಸಚಿವ ಬಿ ಸಿ ನಾಗೇಶ್ ಸೂಚನೆ - education minister B C Nagesh
ಖಾಸಗೀ ಶಾಲೆ ಆರಂಭಿಸಲೇಬೇಕು ಇಲ್ಲವಾದರೆ ಕ್ರಮಕ್ಕೆ ಮುಂದಾಗಲು ಯೋಚಿಸಲಿದ್ದೇವೆ ಎಂದು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದ್ದಾರೆ.
ಹೆಚ್ ಎಸ್ ಆರ್ ಬಡಾವಣೆಯ ಅಗರ ಸರ್ಕಾರಿ ಶಾಲೆಯಲ್ಲಿ ಅತ್ಯಾಧುನಿಕ ಸ್ಮಾರ್ಟ್ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿ, ಉಡುಪಿ-ದಕ್ಷಿಣ ಕನ್ನಡ ಭಾಗದಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇಳಿದಿದೆ. ಹೀಗಾಗಿ ಶಾಲೆ ತೆರೆಯುವ ಸೂಚನೆ ಸಧ್ಯದಲ್ಲೇ ಹೊರಡಿಸಲಾಗುತ್ತದೆ. ಉಳಿದಂತೆ ಸರ್ಕಾರಿ ಶಾಲೆಯ ಎಸ್ ಒ ಪಿ ತಂತ್ರಜ್ಞಾನದ ಮೂಲಕ ಮಕ್ಕಳ ಡಿಜಿಟಲ್ ದಾಖಲೀಕರಣ ಯಶಸ್ವಿಯಾಗಿ ನಡೆಯುತ್ತಿರುವುದಾಗಿ ತಿಳಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಶೇಕಡ 70ರಷ್ಟು ಎಸ್ಒಪಿ ದಾಖಲೆ ಸ್ವಾಗತಾರ್ಹವಾದದ್ದು, ತುಮಕೂರಿನಲ್ಲಿ 64%, ಬೀದರ್ನಲ್ಲಿ: 32%, ರಾಯಚೂರಿನಲ್ಲಿ 44% ಎಸ್ ಒಪಿ ದಾಖಲೀಕರಣವಾಗಿದೆ. ಉಳಿದಂತೆ ಕಲ್ಯಾಣ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ನೆಟ್ವರ್ಕ್ ಸಮಸ್ಯೆಯ ನಡುವೆಯೂ 55% ದಾಖಲಾಗಿದೆ ಎಂದರು.