ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಖಾಸಗಿ ಬಸ್ಸುಗಳ ಓಡಾಟ ಜೋರಾಗಿದೆ. ಈಗಾಗಲೇ ಖಾಸಗಿ ಬಸ್ಸುಗಳಿಗೆ ಪರ್ಮಿಟ್ ವಿಸ್ತರಣೆ ಮಾಡಿದೆ. ಆದರೆ ಸಾರಿಗೆ ಮುಷ್ಕರವನ್ನು ಬಂಡವಾಳ ಮಾಡಿಕೊಂಡು ನಿಯಮ ಉಲ್ಲಂಘನೆ ಮಾಡುತ್ತಿದ್ದ 2 ಖಾಸಗಿ ಬಸ್ಗಳನ್ನ ಜಪ್ತಿ ಮಾಡಲಾಗಿದೆ.
ಸಾರಿಗೆ ಅಧಿಕಾರಿಗಳ ಕಾರ್ಯಾಚರಣೆ: ನಿಯಮ ಉಲ್ಲಂಘಿಸಿದ ಖಾಸಗಿ ಬಸ್ಗಳ ಜಪ್ತಿ - ಬೆಂಗಳೂರು ಸುದ್ದಿ
ವಿಮೆ ಇಲ್ಲದೆ ಸಂಚರಿಸುತ್ತಿದ್ದ 2 ಖಾಸಗಿ ಬಸ್ಗಳನ್ನು ರಾಜಾಜಿನಗರದ ಸಾರಿಗೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಖಾಸಗಿ ಬಸ್ಸುಗಳ ಜಪ್ತಿ
ಬೆಂಗಳೂರಿನಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದು, ನಿಯಮ ಉಲ್ಲಂಘನೆ ಮಾಡುತ್ತಿದ್ದ ಎರಡು ಖಾಸಗಿ ಬಸ್ಗಳನ್ನು ವಶಕ್ಕೆ ಪಡೆದಿದ್ದಾರೆ.
ರಾಜಾಜಿನಗರದ ಸಾರಿಗೆ ಇಲಾಖೆ ಅಧಿಕಾರಿ ಬಾಲಕೃಷ್ಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.