ಬೆಂಗಳೂರು :ಆಮ್ ಆದ್ಮಿ ಪಾರ್ಟಿಯ ರಾಜ್ಯ ಹಾಗೂ ಬೆಂಗಳೂರು ನಗರ ಪದಾಧಿಕಾರಿಗಳ ತಂಡದ ಪುನಾರಚನೆಯಾಗಿದೆ. ರಾಜ್ಯಾಧ್ಯಕ್ಷರಾಗಿ ಪೃಥ್ವಿ ರೆಡ್ಡಿ ಹಾಗೂ ನಗರಾಧ್ಯಕ್ಷರಾಗಿ ಮೋಹನ್ ದಾಸರಿ ಅವರು ಪುನರ್ ನೇಮಕವಾಗಿದ್ದಾರೆ ಎಂದು ಪಕ್ಷ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಎಎಪಿ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿರ್ದೇಶನದಂತೆ ಪಕ್ಷದ ಕರ್ನಾಟಕ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆಯವರು ರಾಜ್ಯ ಪದಾಧಿಕಾರಿಗಳ ತಂಡದ ಪುನಾರಚನೆ ಮಾಡಿದ್ದಾರೆ.
ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಹಾಗೂ ವಿಜಯ್ ಶರ್ಮಾರವರನ್ನು ರಾಜ್ಯ ಉಪಾಧ್ಯಕ್ಷರಾಗಿ ನೇಮಿಸಲಾಗಿದೆ. ಸಂಚಿತ್ ಸಹಾನಿಯವರು ರಾಜ್ಯ ಪ್ರಧಾನ ಕಾರ್ಯದರ್ಶಿ, ಹರಿಹರನ್‌ರವರು ರಾಜ್ಯ ಖಜಾಂಚಿ, ಜಗದೀಶ್.ವಿ ಸದಂ ರಾಜ್ಯ ಮಾಧ್ಯಮ ಉಸ್ತುವಾರಿಯಾಗಿ, ಕೆ. ಮಥಾಯ್ರನ್ನು ರಾಜ್ಯವಕ್ತಾರ ಹುದ್ದೆಗೆ ನೇಮಕ ಮಾಡಲಾಗಿದೆ.