ಬೆಂಗಳೂರು: ಸಿಎಂ ಬೊಮ್ಮಾಯಿ ಪ್ರಧಾನಿ ಮೋದಿ ಭೇಟಿ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಹಾಡಿ ಹೊಗಳಿದ್ದಾರೆ. ನಿನ್ನೆ ಸಿಎಂ ಬಸವರಾಜ ಬೊಮ್ಮಾಯಿ ಪ್ರಧಾನಿ ಮೋದಿ ಭೇಟಿ ವೇಳೆ ಸುಮಾರು 20 ನಿಮಿಷ ಕಾಲ ಯಡಿಯೂರಪ್ಪ ಬಗ್ಗೆಯೇ ಮಾತಾಡಿದ್ದಾರೆ. ಯಡಿಯೂರಪ್ಪ ತ್ಯಾಗ, ಪರಿಶ್ರಮ, ಪಕ್ಷ ಸೇವೆ, ನಾಯಕತ್ವ ಗುಣಗಳನ್ನು ಹಾಡಿ ಹೊಗಳಿದ್ದಾರೆ ಎನ್ನಲಾಗಿದೆ.
ಪಿಎಂ ಮೋದಿ- ಸಿಎಂ ಬಸವರಾಜ್ ಬೊಮ್ಮಾಯಿ 40 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ. ಈ ವೇಳೆ ಮಾಜಿ ಸಿಎಂ ಬಗ್ಗೆ ಪ್ರಧಾನಿ ಮೋದಿ ಅವರೇ ಪ್ರಸ್ತಾಪ ಮಾಡಿದರು ಎನ್ನಲಾಗಿದೆ. ಈ ಮಾತು ಸುಮಾರು 20 ನಿಮಿಷಗಳ ಕಾಲ ಮುಂದುವರಿಯಿತು ಎಂದು ಹೇಳಲಾಗುತ್ತಿದೆ.