ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ ತಿಂಗಳಿನಲ್ಲಿ ಕಾಚಿಗುಡ- ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಉದ್ಘಾಟಿಸಲಿದ್ದಾರೆ. ಈಗಾಗಲೇ ಪಾಯೋಗಿಕ ಸಂಚಾರವು ಯಶಸ್ವಿಯಾಗಿದೆ ಎಂದು ನೌರುತ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಮೂರನೇ ವಂದೇ ಭಾರತ ರೈಲು ಸಂಚಾರವು ಕಾಚಿಗುಡ– ಯಶವಂತಪುರ ನಡುವಿನ 609.81 ಕಿ.ಮೀ. ದೂರವನ್ನು 8 ತಾಸು 30 ನಿಮಿಷದಲ್ಲಿ ಸಂಚರಿಸಲಿದೆ. ಈ ರೈಲಿಗೆ ಆಂಧ್ರಪ್ರದೇಶದ ಮೆಹಬೂಬ್ ನಗರ, ಕರ್ನೂಲ್, ಅನಂತವರ ಮಾರ್ಗಗಳಲ್ಲಿ ಮಾತ್ರ ನಿಲುಗಡೆಯಾಗಲಿದೆ.
ಪ್ರತಿದಿನ ಬೆಳಗ್ಗೆ 5.30ಕ್ಕೆ ಕಾಚಿಗುಡದಿಂದ ಹೊರಟು ಮೆಹಬೂಬ್ ನಗರ, ಕರ್ನೂಲ್ ಸಿಟಿ, ಅನಂತಪುರ ಹಾಗೂ ಧರ್ಮಾವರಂ ಸಂಚರಿಸಿ ಮಧ್ಯಾಹ್ನ 2 ಗಂಟೆಗೆ ಯಶವಂತಪುರ ರೈಲು ನಿಲ್ದಾಣಕ್ಕೆ ತಲುಪಲಿದೆ. ನಂತರ ಮಧ್ಯಾಹ್ನ 2.45ಕ್ಕೆ ಯಶವಂತಪುರ ರೈಲು ನಿಲ್ದಾಣದಿಂದ ಹೊರಟು ಅನಂತಪುರ, ಕರ್ನೂಲ್ ಸಿಟಿ, ಮಹಬೂಬ್ ನಗರದ ಮೂಲಕ ರಾತ್ರಿ 11.45ಕ್ಕೆ ಕಾಚಿಗುಡ ರೈಲು ನಿಲ್ದಾಣಕ್ಕೆ ತಲುಪಲಿದೆ.
609.81 ಕಿ.ಮೀ. ವರೆಗೆ ಕಾಚಿಗುಡ- ಯುವಂತಪುರ ರೈಲು ಸಂಚಾರ:ಕಾಚಿಗುಡ- ಯುವಂತಪುರ ರೈಲು 609.81 ಕಿ.ಮೀ. ಕ್ರಮಿಸಲಿದೆ. ಅದರಲ್ಲಿ 355.03 ಕಿ.ಮೀ. ಡಬಲ್ ಲೈನ್ ಇದ್ದು, 254.78 ಕಿ.ಮೀ. ಸಿಂಗಲ್ ಲೈನ್ ಇರುತ್ತದೆ. ಬುಧವಾರ ರೈಲಿನ ಕಾರ್ಯಾಚರಣೆ ಇರುವುದಿಲ್ಲ. ಉಳಿದಂತೆ ವಾರದ ಎಲ್ಲ ದಿನಗಳಲ್ಲಿ ಕಾರ್ಯಾಚರಣೆ ಇರಲಿದೆ. ನಿನ್ನೆ ಮಧ್ಯಾಹ್ನ ಯಶವಂತಪುರ ರೈಲು ನಿಲ್ದಾಣದಲ್ಲಿ ತಲುಪಿದ ವಂದೇ ಭಾರತ್ ರೈಲಿನಲ್ಲಿ ಶಾಲಾ ವಿದ್ಯಾರ್ಥಿಗಳು, ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಮುಂತಾದವರಿದ್ದರು ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಹಿಂದೆ ಸಿಕಂದರಾಬಾದ್-ತಿರುಪತಿ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಚಾಲನೆ:ಎಪ್ರಿಲ್ ತಿಂಗಳ ಮೊದಲ ವಾರದಲ್ಲಿ ಹೈದರಾಬಾದ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಿಕಂದರಾಬಾದ್ - ತಿರುಪತಿಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ್ದರು. ಆಂಧ್ರಪ್ರದೇಶ ಮತ್ತು ತೆಲಂಗಾಣದ ನಡುವಿನ ಎರಡನೇ ವಂದೇ ಭಾರತ್ ರೈಲು ಇದಾಗಿತ್ತು. ಮೂರು ತಿಂಗಳ ಅಂತರದಲ್ಲಿ ಎರಡನೇ ಸೆಮಿ ಹೈಸ್ಪೀಡ್ ಎಕ್ಸ್‌ಪ್ರೆಸ್ ರೈಲು ಕಾರ್ಯಾರಂಭ ಆಗಿತ್ತು.
ಪ್ರಯಾಣದ ಅವಧಿ ಇಳಿಕೆ:ಸಿಕಂದರಾಬಾದ್- ತಿರುಪತಿ ಮಧ್ಯೆ ಪ್ರಾರಂಭವಾಗಿರುವ ದೇಶದ 13ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಇದಾಗಿದೆ. ನಲ್ಗೊಂಡ, ಗುಂಟೂರು, ಒಂಗೋಲ್ ಹಾಗೂ ನೆಲ್ಲೂರಿನಲ್ಲಿ ನಿಲುಗಡೆ ಆಗುತ್ತದೆ. ಎರಡು ನಗರಗಳ ನಡುವೆ 660 ಕಿ.ಮೀ. ಅಂತರವನ್ನು ಕ್ರಮಿಸಲಿದೆ. ಎಕ್ಸ್‌ಪ್ರೆಸ್ ರೈಲಿನಿಂದ ಪ್ರಯಾಣದ ಸಮಯ ಸುಮಾರು ಮೂರೂವರೆ ಗಂಟೆಗಳಷ್ಟು ಕಡಿತವಾಗಿದೆ.
ಇದನ್ನೂ ಓದಿ:ನಾರಿ ಶಕ್ತಿ ವಂದನ ಅಧಿನಿಯಮ್ ನವಭಾರತದ ಪ್ರಜಾಪ್ರಭುತ್ವ ಬದ್ಧತೆಯ ಸಂಕೇತ: ಪ್ರಧಾನಿ ಮೋದಿ