ಬೆಂಗಳೂರು: ಬೆಂಗಳೂರು ನಗರವು ಪ್ರಕೃತಿಯೊಂದಿಗೆ ಗಾಢವಾದ ಬಾಂಧವ್ಯವನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪರಿಸರ ಪ್ರೀತಿಯ ಕುರಿತಾದ ಟ್ವೀಟ್ಗಳಿಗೆ ಕನ್ನಡದಲ್ಲೇ ಪ್ರತಿಕ್ರಿಯಿಸಿ ಶಹಬ್ಬಾಸ್‌ಗಿರಿ ನೀಡಿರುವ ಪ್ರಧಾನಿ ಮೋದಿ ಅವರು, "ಇದು ಬೆಂಗಳೂರು ಮತ್ತು ಅದರ ಮರಗಳ ಬಗೆಗಿನ ಆಸಕ್ತಿದಾಯಕ ವಿಷಯವಾಗಿದೆ. ಬೆಂಗಳೂರು ನಗರವು ಮರಗಳು ಮತ್ತು ಕೆರೆಗಳು ಸೇರಿದಂತೆ ಪ್ರಕೃತಿಯೊಂದಿಗೆ ಬಹಳ ಗಾಢವಾದ ಬಾಂಧವ್ಯವನ್ನು ಹೊಂದಿದೆ. ತಮ್ಮ ಪಟ್ಟಣಗಳು ಮತ್ತು ನಗರಗಳ ಬಗೆಗಿನ ಇಂತಹ ಅಂಶಗಳನ್ನು ಪ್ರಚಾರಪಡಿಸುವಂತೆ ನಾನು ಇತರರನ್ನು ಒತ್ತಾಯಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ವರ್ಷಪೂರ್ತಿ ಅರಳುವ ವೈವಿಧ್ಯಮಯ ಮರಗಳ ಸಂಗ್ರಹವಿದೆ ಎಂದು ನಿಮಗೆ ತಿಳಿದಿದೆಯೇ? ಯುಗಗಳ ಹಿಂದೆ ನಗರವನ್ನು ಯೋಜಿಸಿದಾಗ, ಒಂದು ಮರ ಅರಳುವುದನ್ನು ನಿಲ್ಲಿಸುವ ಸಂದರ್ಭದಲ್ಲಿ, ಇನ್ನೊಂದು ಮರ ಅದರ ಸ್ಥಾನವನ್ನು ತುಂಬುವ ರೀತಿಯಲ್ಲಿ ಮರಗಳು ಇರುವಂತೆ ಗಿಡಗಳನ್ನು ನೆಟ್ಟು ಬೆಳೆಸಲಾಗಿತ್ತು. ಪರಿಣಾಮವಾಗಿ ಎಲ್ಲ ಋತುವಿನಲ್ಲೂ ಹೂವಿನ ಸ್ವರಮೇಳವಾಗಿ ಹೊರಹೊಮ್ಮಿದೆ ಎಂದು ಪರಿಸರವಾದಿ ಮತ್ತು ಕಲಾವಿದೆ ಆದ ಸುಭಾಷಿಣಿ ಚಂದ್ರಮಣಿ ಎಂಬುವವರು ಟ್ವೀಟ್ ಮಾಡಿದ್ದರು.