ಕರ್ನಾಟಕ

karnataka

ETV Bharat / state

ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಸುವ ಸಾಮರ್ಥ್ಯವಿರುವುದು ಈ ಕ್ಷೇತ್ರಕ್ಕೆ ಮಾತ್ರ.. ! - latest corona effct news

ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಅಭಿಪ್ರಾಯದಂತೆ ನಿರುದ್ಯೋಗಿಗಳಿಗೆ ಉದ್ಯೋಗವನ್ನು ಸೃಷ್ಟಿಸುವ ಸಾಮರ್ಥ್ಯವಿರುವ ಕ್ಷೇತ್ರವೆಂದರೆ ಅದು ಕೃಷಿ ಕ್ಷೇತ್ರ. ಇದನ್ನು ಮನಗಂಡು ಇಂದಿನ ಯುವಕರಲ್ಲಿ ಹಾಗೂ ರೈತರಲ್ಲಿ ಕೃಷಿಯ ಬಗ್ಗೆ ಇನ್ನು ಹೆಚ್ಚಿನ ಆಸಕ್ತಿ ಮೂಡಿಸಲು ಜನಪ್ರಿಯ ಯೋಜನೆಗಳನ್ನು ರೂಪಿಸುವ ಮೂಲಕ ಅನುಷ್ಠಾನಗೊಳಿಸಲು ದೂರದೃಷ್ಟಿಯ ಜೊತೆಗೆ ರೈತರುಗಳಿಗೆ ಪ್ರಯೋಜನವಾಗುವ ಅಂಶಗಳನ್ನು ಸರ್ಕಾರವು ಅಳವಡಿಸಿಕೊಳ್ಳಬೇಕಿದೆ ಎನ್ನುತ್ತಾರೆ ಕೃಷಿ ತಜ್ಞರು.

primary scetor
ಕೊರೊನಾ ಎಫೆಕ್ಟ್

By

Published : Apr 21, 2020, 7:46 PM IST

ಬೆಂಗಳೂರು : ಕೊರೊನಾ ಹೊಡೆತದಿಂದ ಇಡೀ ದೇಶ ಅರ್ಥಿಕ ಹಿಂಜರಿತವಾಗಿರುವುದನ್ನು ಮನಗಂಡು ಮುಂಬರುವ ದಿನಗಳಲ್ಲಿ ಕೃಷಿ ಕ್ಷೇತ್ರವನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಚರ್ಚೆಗಳು ನನಡೆಯುತ್ತಿವೆ.

ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಅಭಿಪ್ರಾಯದಂತೆ ನಿರುದ್ಯೋಗಿಗಳಿಗೆ ಉದ್ಯೋಗವನ್ನು ಸೃಷ್ಟಿಸುವ ಸಾಮರ್ಥ್ಯವಿರುವ ಕ್ಷೇತ್ರವೆಂದರೆ ಅದು ಕೃಷಿ ಕ್ಷೇತ್ರ. ಇದನ್ನು ಮನಗಂಡು ಇಂದಿನ ಯುವಕರಲ್ಲಿ ಹಾಗೂ ರೈತರಲ್ಲಿ ಕೃಷಿಯ ಬಗ್ಗೆ ಇನ್ನು ಹೆಚ್ಚಿನ ಆಸಕ್ತಿ ಮೂಡಿಸಲು ಜನಪ್ರಿಯ ಯೋಜನೆಗಳನ್ನು ರೂಪಿಸುವ ಮೂಲಕ ಅನುಷ್ಠಾನಗೊಳಿಸಲು ದೂರದೃಷ್ಟಿಯ ಜೊತೆಗೆ ರೈತರುಗಳಿಗೆ ಪ್ರಯೋಜನವಾಗುವ ಅಂಶಗಳನ್ನು ಸರ್ಕಾರವು ಅಳವಡಿಸಿಕೊಳ್ಳಬೇಕಿದೆ ಎನ್ನುತ್ತಾರೆ ಕೃಷಿ ತಜ್ಞರು.

ಸಲಹೆಗಳೇನು? :

ರೈತರುಗಳು ಬೆಳೆದ ಬೆಳೆಗಳಿಗೆ ನ್ಯಾಯಯುತವಾಗಿ ಬೆಲೆ ಸಿಗಬೇಕಾದರೆ ರೈತರು ಬೆಳೆದ ಬೆಳೆಗಳನ್ನು ಸರ್ಕಾರವೇ ಖರೀದಿಸಬೇಕು. ಖರೀದಿಸಿದ ವಸ್ತುಗಳಿಗೆ ಮಾರುಕಟ್ಟೆ ಒದಗಿಸಲು ಹಾಗೂ ಸಾರ್ವಜನಿಕರಿಗೆ ಸಿಗುವಂತಾಗಲೂ ಕೃಷಿ, ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಇಲಾಖೆಗಳ ಸಮನ್ವಯವನ್ನು ಸಾಧಿಸಬೇಕು. ಉದಾಹರಣೆಗೆ ರೈತರು ಬೆಳೆದ ತರಕಾರಿ, ಹಣ್ಣುಗಳನ್ನು ತೋಟಗಾರಿಕೆ ಇಲಾಖೆಯ ಹಾಪ್‍ಕಾಂಪ್ಸ್ ಮೂಲಕ ಎಲ್ಲ ಪ್ರದೇಶಗಳಿಗೆ ತಲುಪಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಮನ್ವಯತೆಯಿಂದ ತಾತ್ಕಾಲಿಕವಾಗಿ ಸಂಚಾರಿ ಹಾಪ್‍ ಕಾಮ್ಸ್​​​​​​​ ಮಳಿಗೆಗಳನ್ನು ಕೂಡಲೇ ತೆರೆಯಬೇಕಾಗುತ್ತದೆ.

ಮುಂಗಾರು ಹಂಗಾಮಿನ ಹಿನ್ನೆಲೆಯಲ್ಲಿ ರೈತರಿಗೆ ಬೇಕಾದ ಬಿತ್ತನೆ ಬೀಜ, ಗೊಬ್ಬರ ಹಾಗೂ ಇನ್ನಿತರೆ ಕೃಷಿ ಉಪಯೋಗಿ ವಸ್ತುಗಳನ್ನು ತಾಲೂಕು ಮತ್ತು ಹೋಬಳಿಗೆ ಬಂದು ರೈತರುಗಳು ಖರೀದಿಸುವುದನ್ನು ತಪ್ಪಿಸಿ, ರೈತರ ಮನೆ ಬಾಗಿಲಿಗೆ ತಲುಪಿಸುವಂತಹ ವ್ಯವಸ್ಥೆ ಕೈಗೊಳ್ಳಬೇಕು. ಇದಕ್ಕೆ ಗ್ರಾಮೀಣ ಪ್ರದೇಶದ ಸಂಬಂಧಿಸಿದ ಮಾರ್ಗಗಳಲ್ಲಿ ಸಂಚರಿಸುವ ಕೆಎಸ್​ಆರ್​ಟಿಸಿ. ಗ್ರಾಮೀಣಾ ಸಾರಿಗೆ ಬಸ್​ಗಳನ್ನು ಅವಶ್ಯತೆಗನುಗುಣವಾಗಿ ಸದ್ಭಳಕೆ ಮಾಡಿಕೊಳ್ಳುವ ಮೂಲಕ ಸಂಚಾರಿ ರೈತ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸಿ, ರೈತರುಗಳಿಗೆ ಬೇಕಾದ ಸಲಹೆ ಮಾರ್ಗದರ್ಶನಗಳನ್ನು ಟಾಲ್ ಫ್ರೀ ನಂಬರ್ ನೀಡಿ ಅದರ ಮೂಲಕ ನೀಡುವಂತಾಗಬೇಕು.

ಸಬ್ಸಿಡಿ ಬೀಜ ಯೋಜನೆಯನ್ನು ಕೂಡಲೇ ಸ್ಥಗಿತಗೊಳಿಸಿ, ರಾಜ್ಯಾದ್ಯಂತ ಸರ್ಕಾರಿ ಬೀಜ ಸಂಸ್ಥೆಗಳ ಮೂಲಕ ಸೀಡ್ ಫಾರ್ಮ್‌ ಗಳನ್ನು ಸ್ಥಾಪಿಸಿ, ಸದಾ ಚಟುವಟಿಕೆಗಳಿಂದ ತೊಡಗುವ ಮೂಲಕ ಮೂಲ ಬೀಜಗಳನ್ನು ಪರಿಣಿತ ರೈತರುಗಳಿಗೆ ವಿತರಿಸಿ ಅವರ ಹೊಲಗಳಲ್ಲೇ ಬೀಜೋತ್ಪಾದನೆ ಮಾಡಿಸಿ ಸರ್ಕಾರವೇ ಖರೀದಿಸಿದಾಗ ಸರ್ಕಾರಕ್ಕೆ ಆದಾಯದ ಮೂಲ ಹೆಚ್ಚಾಗುತ್ತದೆ ಎನ್ನುತ್ತಾರೆ ಕೃಷಿ ತಜ್ಞರು.

ಅನುಭವಿ ರೈತರನ್ನು ಗುರುತಿಸಿ ಬೀಜೋತ್ಪಾದನಾ ತರಬೇತಿ ನೀಡಿ, ಅವರುಗಳ ಮೂಲಕ ಬೀಜೋತ್ಪಾದನೆ ಮಾಡಿಸಿದಾಗ ಸರ್ಕಾರಕ್ಕೆ ಆದಾಯವಾಗುತ್ತದೆ. ಇನ್ನು ಗ್ರಾಮ ಮಟ್ಟದಲ್ಲಿ ಸರಳ ಪ್ರಯೋಗಾಲಯಗಳನ್ನು ಸ್ಥಾಪಿಸಿ ಆ ಮೂಲಕ ಬೀಜ ಮೊಳಕೆ ಪರೀಕ್ಷೆ, ತಳಿಶುದ್ಧತೆಯನ್ನು ಇಲಾಖೆಯ ತಜ್ಞರ ಮೂಲಕ ನಡೆಸಬೇಕು.

ಮುಂಬರುವ ದಿನಗಳಲ್ಲಿ ಕೊರೊನಾ ವೈರಾಣು ಯಾವ ಯಾವ ರೀತಿಯಲ್ಲಿ ಅಪೋಷಣೆ ಮಾಡಿಕೊಳ್ಳುತ್ತದೋ, ಯಾರಿಗೂ ಗೊತ್ತಿಲ್ಲ. ಆದುದರಿಂದ ಸಾಮಾಜಿಕ ಅಂತರವನ್ನು ಕಾಯ್ದುಗೊಳ್ಳುವ ಮೂಲಕ ಕೃಷಿ ಚಟುವಟಿಕೆಗಳಲ್ಲಿ ಸ್ವಾವಲಂಬನೆ ರೂಢಿಸಿಕೊಳ್ಳವುದು ಸೂಕ್ತ. ಅನವಶ್ಯಕವಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕೃಷಿ ಚಟುವಟಿಕೆಗಳಿಗಾಗಿ ರೈತರು ಓಡಾಡುವುದನ್ನು ತಪ್ಪಿಸಬೇಕಿದೆ ಎಂಬುದು ತಜ್ಞರ ಸಲಹೆ.

ABOUT THE AUTHOR

...view details