ಕರ್ನಾಟಕ

karnataka

ETV Bharat / state

ಆರ್​​.ಶಂಕರ್ ಮನೆ ಪೂಜೆಗೆ ಬಂದಿದ್ದ ಅರ್ಚಕರ ಮೇಲೆ ಹಲ್ಲೆ: ಚಿನ್ನಾಭರಣ ದೋಚಿ ದುಷ್ಕರ್ಮಿಗಳು ಪರಾರಿ - ಮಾಜಿ ಸಚಿವ ಆರ್‌.ಶಂಕರ್

ಅರ್ಚಕರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡ ಅವರ ಬಳಿಯಿದ್ದ ಚಿನ್ನದ ಸರ, ಹಣ ಮತ್ತು ಮೊಬೈಲ್ ದೋಚಿ ಪರಾರಿಯಾಗಿದ್ದಾರೆ. ಅಲ್ಲದೇ ಮಾರಾಕಾಸ್ತ್ರದಿಂದ ಹಲ್ಲೆ ನಡೆಸಿದ್ದಾರೆ.

priest-who-attended-puja-at-r-shanker-house-attacked-by-mobs
ಆರ್​​.ಶಂಕರ್ ಮನೆಯಲ್ಲಿ ಪೂಜೆಗೆ ಬಂದಿದ್ದ ಅರ್ಚಕನ ಮೇಲೆ ದುಷ್ಕರ್ಮಿಗಳ ಹಲ್ಲೆ

By

Published : Sep 23, 2021, 1:09 PM IST

ಬೆಂಗಳೂರು:ಮಾಜಿ ಸಚಿವ ಆರ್‌.ಶಂಕರ್ ಮನೆಯಲ್ಲಿ ಪೂಜೆ ಮುಗಿಸಿ ಮನೆಗೆ ಹೊರಟಿದ್ದ ಅರ್ಚಕನನ್ನು ಹಿಂಬಾಲಿಸಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ದುಷ್ಕರ್ಮಿಗಳು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಬೆಳಕಿಗೆ ಬಂದಿದೆ.

ಸೆ.20 ರಂದು ಹುಣ್ಣಿಮೆ ಪ್ರಯುಕ್ತ ಕಲ್ಯಾಣನಗರದಲ್ಲಿರುವ ಮಾಜಿ ಸಚಿವ ಆರ್.ಶಂಕರ್ ತಮ್ಮ ನಿವಾಸದಲ್ಲಿ ಸತ್ಯನಾರಾಯಣ ಪೂಜೆ ಹಮ್ಮಿಕೊಂಡಿದ್ದರು. ಇದಕ್ಕಾಗಿ ಮನೋರಾಯನಪಾಳ್ಯದ ಅರ್ಚಕ ಮಣಿಕಂಠ ಶರ್ಮಾ ಎಂಬುವರನ್ನು ಪೂಜೆಗೆ ಬರಮಾಡಿಕೊಂಡಿದ್ದರು.

ಇದರಂತೆ ಮಾಜಿ ಸಚಿವರ ಮನೆಯಲ್ಲಿ ಪೂಜಾ ಕಾರ್ಯ ಮುಗಿಸಿಕೊಂಡು ಅಂದು ರಾತ್ರಿ 10.30 ವೇಳೆಗೆ ತಮ್ಮ ಕಾರಿನಲ್ಲಿ ಮನೆಗೆ ತೆರಳುವ ವೇಳೆ ಈ ಅವಘಡ ನಡೆದಿದೆ. ಹೆಣ್ಣೂರು ಅಂಡರ್ ಪಾಸ್ ಬಳಿ ಹೋಗುವಾಗ ಹಿಂಬಾಲಿಸಿಕೊಂಡು ಬಂದಿದ್ದ ದುಷ್ಕರ್ಮಿಗಳು ಅರ್ಚಕರ ಕಾರಿಗೆ ಏಕಾಏಕಿ ಗುದ್ದಿದ್ದಾರೆ‌. ಕಾರು ನಿಲ್ಲಿಸಿ ಮಣಿಕಂಠ ಶರ್ಮಾ ಪ್ರಶ್ನಿಸಿದ್ದಾರೆ‌.

ಆರ್​​.ಶಂಕರ್ ಮನೆಯಲ್ಲಿ ಪೂಜೆಗೆ ಬಂದಿದ್ದ ಅರ್ಚಕ

ಅರ್ಚಕ ಕಾರಿನಿಂದ ಕೆಳಗಿಳಿಯುತ್ತಿದ್ದಂತೆ ಮಚ್ಚು ಲಾಂಗ್ ತೋರಿಸಿದ್ದಲ್ಲದೇ ಹಲ್ಲೆ ನಡೆಸಿದ್ದಾರೆ. ಬಳಿಕ ಅರ್ಚಕರ ಬಳಿ ಇದ್ದ 60 ಗ್ರಾಂ ತೂಕದ ಚಿನ್ನದ ಸರ, 20 ಸಾವಿರ ನಗದು, ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ.

ಆರ್​​.ಶಂಕರ್ ಮನೆಯಲ್ಲಿ ಪೂಜೆಗೆ ಬಂದಿದ್ದ ಅರ್ಚಕ

ಘಟನೆಯಲ್ಲಿ ಗಾಯಗೊಂಡಿದ್ದ ಅರ್ಚಕರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನೆ ಸಂಬಂಧ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಬೆಳಗಾವಿ: ತೋಟದಲ್ಲಿ ಕೆಲಸಕ್ಕಿದ್ದ ಮಹಿಳೆ ಮೇಲೆ ಮಾಲೀಕನಿಂದಲೇ ಅತ್ಯಾಚಾರ!

ABOUT THE AUTHOR

...view details