ಕರ್ನಾಟಕ

karnataka

ETV Bharat / state

ಆನ್​ಲೈನ್​ ಶಿಕ್ಷಣ ಎಫೆಕ್ಟ್: ಕಂಪ್ಯೂಟರ್, ಲ್ಯಾಪ್​ಟಾಪ್ ಬೆಲೆಯಲ್ಲಿ ಭಾರಿ ಹೆಚ್ಚಳ - Effect of Lockdown

ಆನ್​ಲೈನ್​ ಶಿಕ್ಷಣ ಹಿನ್ನೆಲೆಯಲ್ಲಿ ಕಂಪ್ಯೂಟರ್​, ಲ್ಯಾಪ್​ಟಾಪ್​ಗಳ ಬೆಲೆ ದುಪ್ಪಟ್ಟಾಗಿದೆ. ಇನ್ನು ಬೇಡಿಕೆ ಹೆಚ್ಚಾಗಿದ್ದರೂ ಲಾಕ್​ಡೌನ್​ನಿಂದ ಉತ್ಪತ್ತಿ ಕಡಿಮೆಯಾಗಿದೆ.

ಪೀಣ್ಯ ಕೈಗಾರಿಕಾ ಸಂಘದ ಕಾರ್ಯದರ್ಶಿ ವಿಜಯ್ ಮಾಕಲ್
ಪೀಣ್ಯ ಕೈಗಾರಿಕಾ ಸಂಘದ ಕಾರ್ಯದರ್ಶಿ ವಿಜಯ್ ಮಾಕಲ್

By

Published : Jul 14, 2020, 7:43 AM IST

ಬೆಂಗಳೂರು:ಕೊರೊನಾ ಹಿನ್ನೆಲೆಯಲ್ಲಿ ಆನ್​ಲೈನ್​ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ಆನ್​ಲೈನ್​ ಶಿಕ್ಷಣ ಶುರುವಾದ ಹಿನ್ನೆಲೆಯಲ್ಲಿ ಕಂಪ್ಯೂಟರ್​ ಹಾಗೂ ಲ್ಯಾಪ್​ಟಾಪ್​ಗಳ ಬೆಲೆ ಹೆಚ್ಚಳವಾಗಿದೆ.

50,000 ರೂ. ಬೆಲೆಯ ಲ್ಯಾಪ್​ಟಾಪ್​ಗೆ ಮಾರುಕಟ್ಟೆಯಲ್ಲಿ ಸದ್ಯದ ಬೆಲೆ 75,000 ರೂ. ಸದ್ಯ ದೇಶದಲ್ಲಿ ಉತ್ಪಾದನೆ ಕ್ಷೀಣಿಸಿದ ಹಿನ್ನೆಲೆಯಲ್ಲಿ ಬೆಲೆ ಹೆಚ್ಚಳ ಆಗಿದೆ ಎಂದು ಪೀಣ್ಯ ಕೈಗಾರಿಕಾ ಸಂಘದ ಕಾರ್ಯದರ್ಶಿ ವಿಜಯ್ ಮಾಕಲ್ ಈಟಿವಿ ಭಾರತ್​ಗೆ ತಿಳಿಸಿದ್ದಾರೆ.

ಪೀಣ್ಯ ಕೈಗಾರಿಕಾ ಸಂಘದ ಕಾರ್ಯದರ್ಶಿ ವಿಜಯ್ ಮಾಕಲ್

ಇನ್ನು ಬಡ ಸರ್ಕಾರಿ ಶಾಲಾ ಮಕ್ಕಳಿಗೆ ಇಷ್ಟೊಂದು ಹಣ ಖರ್ಚು ಮಾಡಿ ಲ್ಯಾಪ್​ಟಾಪ್ ಖರೀದಿ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸರ್ಕಾರ ಇದರ ಹೊಣೆಗಾರಿಕೆ ತೆಗೆದುಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಮತ್ತೆ ಲಾಕ್​ಡೌನ್ ಹೇರಿಕೆ ಮಾಡಿದರೆ ಚೇತರಿಕೆ ಕಾಣುತ್ತಿದ್ದ ಕಂಪ್ಯೂಟರ್ ಉಪಕರಣ ಸಂಬಂಧಿತ ಕೈಗಾರಿಕೆಗಳು ಕಾರ್ಯವನ್ನು ನಿಲ್ಲಿಸುತ್ತದೆ. ಇದರಿಂದ ಮತ್ತಷ್ಟು ಬೆಲೆ ಏರಿಕೆ ಆಗಲಿದೆ. ಲ್ಯಾಪ್​ಟಾಪ್​ ಕೇವಲ ಶಿಕ್ಷಣಕ್ಕೆ ಮಾತ್ರವಲ್ಲದೇ, ನೌಕರರು ಸಹ ಉಪಯೋಗಿಸುತ್ತಿದ್ದಾರೆ. ಪ್ರಸ್ತುತ ಕೊಂಚ ಬೇಡಿಕೆ ಹೆಚ್ಚಾಗಿದೆ. ಉತ್ಪನ್ನ ಕಡಿಮೆಯಾಗಿದೆ. ಇದರಿಂದ ದಿನಕ್ಕೆ ಕೋಟ್ಯಂತರ ರೂ. ವಹಿವಾಟು ನಡೆಸುತ್ತಿದ್ದ ಉದ್ಯಮಿಗಳಿಗೆ ಪೆಟ್ಟುಬಿದ್ದಿದೆ ಎಂದರು.

ABOUT THE AUTHOR

...view details