ಕರ್ನಾಟಕ

karnataka

ETV Bharat / state

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿನ ಹುದ್ದೆಗಳ ನೇಮಕ ಆದೇಶಕ್ಕೆ ವಿಳಂಬ : ಅಭ್ಯರ್ಥಿಗಳಿಂದ ಧರಣಿ - ಕೆಪಿಎಸ್​ಸಿ ನೇಮಕಾತಿಗೆ ವಿಳಂಭ ನೀತಿ

ಕೆಪಿಎಸ್‌ಸಿ ಮೂಲಕ ಈಗಾಗಲೇ ಹುದ್ದೆಗಳಿಗೆ ನೇಮಿಸಿಕೊಂಡು ಈಗಾಗಲೇ ಒಂದು ವರ್ಷ ಪೂರೈಸಲಾಗಿದೆ. ಈ ನೇಮಕಾತಿಯ ಕಾಲಾವಧಿ ಕೂಡ ಮುಗಿಯುವ ಹಂತಕ್ಕೂ ಬಂದು ತಲುಪಿದೆ. ಇಷ್ಟಾಗಿದ್ದರೂ ನಮಗೆ ಇನ್ನೂ ನೇಮಕಾತಿ ಆದೇಶ ಪ್ರತಿ ನೀಡಿಲ್ಲ ಎಂದು ಅಭ್ಯರ್ಥಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.

ಅಲ್ಪಸಂಖ್ಯಾತ ಕಲ್ಯಾಣ ಸಚಿವ ಶ್ರೀಮಂತ ಪಾಟೀಲ ಮನೆ ಮುಂದೆ ಧರಣಿ
ಅಲ್ಪಸಂಖ್ಯಾತ ಕಲ್ಯಾಣ ಸಚಿವ ಶ್ರೀಮಂತ ಪಾಟೀಲ ಮನೆ ಮುಂದೆ ಧರಣಿ

By

Published : Mar 17, 2021, 3:37 AM IST

ಬೆಂಗಳೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇದ್ದ 222 ಹುದ್ದೆಗಳಿಗೆ ಕೆಪಿಎಸ್‌ಸಿ ಮೂಲಕ ನೇಮಕವಾಗಿದ್ದರೂ ಇನ್ನೂ ನೇಮಕಾತಿ ಆದೇಶ ನೀಡದಿರುವ ಸರ್ಕಾರದ ವಿಳಂಬ ನೀತಿ ಖಂಡಿಸಿ ನೇಮಕವಾದ ಅಭ್ಯರ್ಥಿಗಳು ಕಳೆದ ಮೂರು ದಿನಗಳಿಂದ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಶ್ರೀಮಂತ ಪಾಟೀಲ ಅವರ ಮನೆಯೆದುರು ಧರಣಿ ನಡೆಸುತ್ತಿದ್ದಾರೆ.

ಕೆಪಿಎಸ್‌ಸಿ ಮೂಲಕ ಈಗಾಗಲೇ ಹುದ್ದೆಗಳಿಗೆ ನೇಮಿಸಿಕೊಂಡು ಈಗಾಗಲೇ ಒಂದು ವರ್ಷ ಪೂರೈಸಲಾಗಿದೆ. ಈ ನೇಮಕಾತಿಯ ಕಾಲಾವಧಿ ಕೂಡ ಮುಗಿಯುವ ಹಂತಕ್ಕೂ ಬಂದು ತಲುಪಿದೆ. ಇಷ್ಟಾಗಿದ್ದರೂ ನಮಗೆ ಇನ್ನೂ ನೇಮಕಾತಿ ಆದೇಶ ಪ್ರತಿ ನೀಡಿಲ್ಲ ಎಂದು ಅಭ್ಯರ್ಥಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.

ಆರ್ಥಿಕ ಇಲಾಖೆಯವರು ನೇಮಕವಾದವರಿಗೆ ಆದೇಶ ನೀಡಲು ಇನ್ನೂ ಸಮ್ಮತಿಸದಿರುವುದೇ ಕಾರಣವಾಗಿದೆ ಎಂದು ದೂರಿರುವ ಅಭ್ಯರ್ಥಿಗಳು, ಬೇರೆ ಬೇರೆ ಇಲಾಖೆಯಲ್ಲಿರುವ ಸುಮಾರು 2500 ವಿವಿಧ ಹುದ್ದೆಗಳಿಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದ್ದು, ಕೇವಲ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ 222 ಹುದ್ದೆಗಳಿಗೆ ಇನ್ನೂ ಅನುಮತಿ ನೀಡದಿರುವುದು ತಾರತಮ್ಯ ನೀತಿ ಎಂದು ಧರಣಿನಿರತ ಅಭ್ಯರ್ಥಿಗಳು ಆರೋಪಿಸುತ್ತಿದ್ದಾರೆ.

ಕೂಡಲೇ ನೇಮಕಾತಿ ಆದೇಶ ನೀಡುವಂತೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಹಗಲು ರಾತ್ರಿ ಸಚಿವ ಶ್ರೀಮಂತ ಪಾಟೀಲ ಮನೆ ಎದುರು ರಾಜ್ಯದ ನಾನಾ ಭಾಗಗಳಿಂದ ಬಂದಿರುವ ಅಭ್ಯರ್ಥಿಗಳು ಧರಣಿ ನಡೆಸುತ್ತಿದ್ದಾರೆ. ನಮ್ಮ ಬೇಡಿಕೆಗಳು ಸಮಂಜಸವಾಗಿದ್ದು, ರಾಜ್ಯ ಸರ್ಕಾರವು ಆರ್ಥಿಕ ಇಲಾಖೆಯಿಂದ ಅನುಮತಿ ಪಡೆದುಕೊಂಡು ಕೂಡಲೇ ನೇಮಕ ಆದೇಶ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ.

ABOUT THE AUTHOR

...view details