ದೊಡ್ಡಬಳ್ಳಾಪುರ:ಅಂಬೇಡ್ಕರ್ ಜಯಂತಿ ಆಚರಣೆ ಮಾಡಲು ಗ್ರಾಮದ ಜನರು ಊರಿನ ಮುಂಭಾಗದಲ್ಲಿ ಅಂಬೇಡ್ಕರ್ ಬ್ಯಾನರ್ ಕಟ್ಟಿದ್ದರು. ಬ್ಯಾನರ್ ಕಟ್ಟಲು ಗ್ರಾಮದ ಇನ್ನೊಂದು ಸಮುದಾಯದ ಯುವಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಜಯಂತಿ ಬಳಿಕ ಯುವಕರು ಅಂಬೇಡ್ಕರ್ ಬ್ಯಾನರ್ ಹರಿದು ಬೆಂಕಿ ಇಟ್ಟು ಅವಮಾನಗೊಳಿಸಿದ್ದಾರೆ ಎಂದು ದಲಿತ ಸಂಘಟನೆಗಳು ಆರೋಪಿಸಿವೆ.
ಅಂಬೇಡ್ಕರ್ ಬ್ಯಾನರ್ ಹರಿದು ಸುಟ್ಟ ಪ್ರಕರಣ: ಯುವಕರಿಗೆ ಶಿಕ್ಷೆ ನೀಡುವಂತೆ ದಲಿತ ಸಂಘಟನೆಗಳ ಆಗ್ರಹ - ಬೆಂಗಳೂರು ಸುದ್ದಿ, ಬಿಆರ್ ಅಂಬೇಡ್ಕರ್ ಜಯಂತಿ,
ಅಂಬೇಡ್ಕರ್ ಬ್ಯಾನರ್ಗೆ ಬೆಂಕಿ ಇಟ್ಟು ಮಹಾನಾಯಕನಿಗೆ ಅವಮಾನ ಮಾಡಿದ ಯುವಕರ ವಿರುದ್ಧ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ದೊಡ್ಡಬಳ್ಳಾಪುರ ತಾಲೂಕಿನ ಗಂಟಿಗಾನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ದಲಿತರು ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿ ಅಚರಣೆಗಾಗಿ ಅಂಬೇಡ್ಕರ್ ಅರವರ ಬ್ಯಾನರ್ ಕಟ್ಟಿದ್ದರು. ಅಂಬೇಡ್ಕರ್ ಬ್ಯಾನರ್ ಕಟ್ಟದಂತೆ ಗ್ರಾಮದ ಕೆಲ ಯುವಕರು ದಲಿತರಿಗೆ ಎಚ್ಚರಿಕೆ ನೀಡಿದ್ದರು. ಆದರೆ ಗ್ರಾಮದ ದಲಿತರು ಅಂಬೇಡ್ಕರ್ ಬ್ಯಾನರ್ ಕಟ್ಟಿ ಜಯಂತಿ ಆಚರಣೆ ಮಾಡಿದ್ದರು.
ಇದರಿಂದ ದ್ವೇಷಕಾರಿದ ಯುವಕರು ಏಪ್ರಿಲ್ 18ರ ರಾತ್ರಿ ಅಂಬೇಡ್ಕರ್ ಬ್ಯಾನರ್ ಹರಿದು ಬೆಂಕಿ ಇಟ್ಟು ಅವಮಾನ ಮಾಡಿದ್ದಾರೆ ಎನ್ನಲಾಗಿದೆ. ಈ ಹಿಂದೆಯು ಸಹ ಯುವಕರು ಅಂಬೇಡ್ಕರ್ ಬ್ಯಾನರ್ ಹರಿದು ಸಗಣಿ ಎರಚಿದ್ದರಂತೆ. ಮತ್ತೆ ಮತ್ತೆ ಆ ಯುವಕರು ಅಂಬೇಡ್ಕರ್ಗೆ ಅವಮಾನ ಮಾಡುತ್ತಿದ್ದಾರೆ. ಅವರ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಮಾಡುವ ಎಚ್ಚರಿಕೆಯನ್ನ ದಲಿತ ಸಂಘಟನೆಯವರು ನೀಡಿದ್ದಾರೆ.