ಕರ್ನಾಟಕ

karnataka

By

Published : Jul 5, 2022, 3:09 PM IST

ETV Bharat / state

ಜುಲೈ 10ಕ್ಕೆ ಬೆಂಗಳೂರಿಗೆ ದ್ರೌಪದಿ ಮುರ್ಮು ಭೇಟಿ: ದೇವೇಗೌಡರ ಭೇಟಿ ಸಾಧ್ಯತೆ

ರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳ ಅಭ್ಯರ್ಥಿಯಾದ ಯಶವಂತ ಸಿನ್ಹಾ ರಾಜ್ಯಕ್ಕೆ ಭೇಟಿ ನೀಡಿದ ಬೆನ್ನಲ್ಲೆ ಎನ್​​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಭೇಟಿಗೆ ದಿನಾಂಕ ನಿಗದಿಯಾಗಿದೆ.

presidential-polls-nda-candidate-draupadi-murmu-to-visit-bengaluru-on-july-10th
ಜುಲೈ 10ಕ್ಕೆ ಬೆಂಗಳೂರಿಗೆ ದ್ರೌಪದಿ ಮುರ್ಮು ಭೇಟಿ

ಬೆಂಗಳೂರು: ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಜುಲೈ 10ರಂದು ಬೆಂಗಳೂರಿಗೆ ಆಗಮಿಸುತ್ತಿದ್ದು, ಬಿಜೆಪಿ ಶಾಸಕರು, ಸಂಸದರ ಮತ ಯಾಚನೆ ಮಾಡಲಿದ್ದಾರೆ. ಇದೇ ವೇಳೆ, ಜೆಡಿಎಸ್ ವರಿಷ್ಠ ಹೆಚ್​.ಡಿ ದೇವೇಗೌಡರನ್ನು ಖುದ್ದಾಗಿ ಭೇಟಿ ಮಾಡಿ ಬೆಂಬಲ ಕೇಳುವ ಸಾಧ್ಯತೆ ಇದೆ.

ಜುಲೈ 18ರಂದು ರಾಷ್ಟ್ರಪತಿ ಚುನಾವಣೆಗೆ ಮತದಾನ ನಡೆಯಲಿದೆ. ಪ್ರತಿಪಕ್ಷಗಳ ಅಭ್ಯರ್ಥಿಯಾದ ಯಶವಂತ ಸಿನ್ಹಾ ರಾಜ್ಯ ಭೇಟಿ ಬೆನ್ನಲ್ಲೆ ಆಡಳಿತಾರೂಢ ಮೈತ್ರಿಕೂಟದ ಅಭ್ಯರ್ಥಿ ದ್ರೌಪದಿ ಮುರ್ಮು ಜುಲೈ 10ರಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

ಅಂದು ಸಂಜೆ 5 ಗಂಟೆಗೆ ಖಾಸಗಿ ಹೋಟೆಲ್​ನಲ್ಲಿ ಬಿಜೆಪಿ ಸಂಸದರು ಮತ್ತು ಶಾಸಕರ ಸಭೆ ಆಯೋಜನೆ ಮಾಡಲಾಗಿದ್ದು, ಈ ಸಭೆಯಲ್ಲಿ ಭಾಗಿಯಾಗಿ ಮುರ್ಮು ಮತ ಯಾಚಿಸಲಿದ್ದಾರೆ. ಇತ್ತ, ದೇವೇಗೌಡರಿಗೆ ದೂರವಾಣಿ ಕರೆ ಮಾಡಿ ಬೆಂಬಲ ಕೇಳಿರುವ ಅವರು ಬೆಂಗಳೂರಿಗೆ ಆಗಮಿಸಿದಾಗ ಖುದ್ದಾಗಿ ಭೇಟಿಯಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ:ಪಿಎಸ್​ಐ ನೇಮಕಾತಿ ಹಗರಣ.. ಗೃಹ ಸಚಿವರ ವಜಾ, ಬೊಮ್ಮಾಯಿ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ

ABOUT THE AUTHOR

...view details