ಕರ್ನಾಟಕ

karnataka

ETV Bharat / state

ಖಾಸಗಿ ಹೋಟೆಲ್​ನಲ್ಲಿ ಬಿಜೆಪಿ ಶಾಸಕರ ಮೊಕ್ಕಾಂ, ರಾಷ್ಟ್ರಪತಿ ಚುನಾವಣೆಗೆ ಮಾದರಿ‌ ಮತದಾನ ಪ್ರಕ್ರಿಯೆ - ಖಾಸಗಿ ಹೋಟೇಲ್​ನಲ್ಲೇ ಬಿಜೆಪಿ ಶಾಸಕರ ವಾಸ್ತವ್ಯ

ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ರಾತ್ರಿಯಿಂದಲೇ ಬಿಜೆಪಿ ಶಾಸಕರು ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ನಲ್ಲಿ ತಂಗಿದ್ದು, ಸಿಎಂ ಬೊಮ್ಮಾಯಿ ಜೊತೆ ಭೋಜನ ಸೇವಿಸಿದರು.

presidential-election-karnataka-bjp-mlas-stay-in-private-hotel
ರಾಷ್ಟ್ರಪತಿ ಚುನಾವಣೆ: ಖಾಸಗಿ ಹೋಟೇಲ್​ನಲ್ಲೇ ಬಿಜೆಪಿ ಶಾಸಕರ ವಾಸ್ತವ್ಯ, ಮಾದರಿ‌ ಮತದಾನ

By

Published : Jul 17, 2022, 7:29 AM IST

ಬೆಂಗಳೂರು:ನಾಳೆರಾಷ್ಟ್ರಪತಿ ಚುನಾವಣೆ ನಡೆಯಲಿದ್ದು ಬಿಜೆಪಿ ಶಾಸಕರು ನಗರದ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದಾರೆ. ಸೋಮವಾರ ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆಗೂಡಿ ಎಲ್ಲ ಶಾಸಕರು ಬಸ್ ಮೂಲಕ ನೇರವಾಗಿ ಹೋಟೆಲ್‌ನಿಂದ ವಿಧಾನಸೌಧಕ್ಕೆ ತೆರಳಿ ಮತದಾನ‌ ಮಾಡುವರು.

ಶನಿವಾರ ರಾತ್ರಿಯಿಂದಲೇ ಶಾಸಕರು ಹೋಟೆಲ್‌ನಲ್ಲಿ ತಂಗಿದ್ದು, ಸಿಎಂ ಜೊತೆ ಭೋಜನ ಸೇವಿಸಿದರು. ಭಾನುವಾರ ದಿನಪೂರ್ತಿ ಶಾಸಕರು ಸಿಎಂ ಜೊತೆ ಹೋಟೆಲ್​ನಲ್ಲೇ ಇರಲಿದ್ದು, ರಾಷ್ಟ್ರಪತಿ ಚುನಾವಣೆ ಸಂಬಂಧ ಸಭೆ ನಡೆಸಲಿದ್ದಾರೆ. ಇಂದು ಬೆಳಗ್ಗೆ ಉಪಹಾರ ಸೇವಿಸಿದ ಬಳಿಕ ಎಲ್ಲಾ ಶಾಸಕರಿಗೆ ಮಾದರಿ‌ ಮತದಾನ ಪ್ರಕ್ರಿಯೆ ನಡೆಯಲಿದೆ.

ನಾಳೆ ಬೆಳಗ್ಗೆ ಸಿಎಂ ಬೊಮ್ಮಾಯಿ‌, ಬಿಜೆಪಿ ಶಾಸಕರೊಂದಿಗೆ ಉಪಹಾರ ಸೇವಿಸಿ 9.30ಕ್ಕೆ ಬಸ್ ಮೂಲಕ ವಿಧಾನಸೌಧಕ್ಕೆ ತೆರಳುವರು. ಬೆಳಗ್ಗೆ 10-12 ಗಂಟೆವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.

ಇದನ್ನೂ ಓದಿ:ಉಪರಾಷ್ಟ್ರಪತಿ ಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ ರಾಜ್ಯಪಾಲ ಜಗದೀಪ್​ ಧನ್ಕರ್ ಕಣಕ್ಕೆ

ABOUT THE AUTHOR

...view details