ಕರ್ನಾಟಕ

karnataka

ETV Bharat / state

ರಾಜ್ಯದ 20 ಪೊಲೀಸರಿಗೆ ರಾಷ್ಟ್ರಪತಿ ಸೇವಾ ಪದಕ : ಇಲ್ಲಿದೆ ಪಟ್ಟಿ - Republic day

ರಾಷ್ಟ್ರಪತಿ ಸೇವಾ ಪದಕ ಪ್ರಶಸ್ತಿಗೆ ಸಿಐಡಿ ಎಡಿಜಿಪಿ ಕೆ ವಿ ಶರತ್ ಚಂದ್ರ ಆಯ್ಕೆ- 19 ಪೊಲೀಸ್ ಸಿಬ್ಬಂದಿಗೆ ಪೊಲೀಸ್ ಶ್ಲಾಘನೀಯ ಸೇವಾ ಪದಕ ಪ್ರಶಸ್ತಿ.

ಕೆ ವಿ ಶರತ್ ಚಂದ್ರ
ಕೆ ವಿ ಶರತ್ ಚಂದ್ರ

By

Published : Jan 25, 2023, 4:40 PM IST

Updated : Jan 25, 2023, 5:24 PM IST

ರಾಷ್ಟ್ರಪತಿಯವರ ಶ್ಲಾಘನೀಯ ಸೇವಾ ಪ್ರಶಸ್ತಿ ಪುರಸ್ಕೃತರು

ಬೆಂಗಳೂರು : ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಕೊಡಮಾಡುವ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಹಾಗೂ ಪೊಲೀಸ್ ಶ್ಲಾಘನೀಯ ಸೇವಾ ಪದಕದ ವಿಜೇತರ ಪಟ್ಟಿಯನ್ನು ಈ ಬಾರಿಯೂ ಬಿಡುಗಡೆಯಾಗಿದೆ. ಈ ಬಾರಿ ರಾಜ್ಯದ 20 ಜನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಜ್ಯದ ಓರ್ವ ಹಿರಿಯ ಐಪಿಎಸ್ ಅಧಿಕಾರಿಗೆ ಮಾನ್ಯ ರಾಷ್ಟ್ರಪತಿಯವರ ಸೇವಾ ಪದಕ ಹಾಗೂ 19 ಜನ ಅಧಿಕಾರಿ ಮತ್ತು ಸಿಬ್ಬಂದಿ ಪೊಲೀಸ್ ಶ್ಲಾಘನೀಯ ಸೇವಾ ಪದಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ರಾಷ್ಟ್ರಪತಿ ಸೇವಾ ಪದಕ ಪ್ರಶಸ್ತಿಗೆ ಸಿಐಡಿ ಎಡಿಜಿಪಿ ಕೆ. ವಿ ಶರತ್ ಚಂದ್ರ ಆಯ್ಕೆ: ಪೊಲೀಸ್ ಕ್ಷೇತ್ರದಲ್ಲಿ ನಿರ್ವಹಿಸಿದ ಸಾಧನೆಯನ್ನು ಗುರುತಿಸಿ ನೀಡಲಾಗುವ ಅತ್ಯುನ್ನತ ಪ್ರಶಸ್ತಿಯಾದ ರಾಷ್ಟ್ರಪತಿ ಸೇವಾ ಪದಕ ಪ್ರಶಸ್ತಿಗೆ ಸಿಐಡಿ ಎಡಿಜಿಪಿ ಕೆ. ವಿ ಶರತ್ ಚಂದ್ರ ಅವರು ಆಯ್ಕೆಯಾಗಿದ್ದಾರೆ. ಇವರು ಶಿಕ್ಷಕರ ನೇಮಕಾತಿ ಹಗರಣ ಸೇರಿದಂತೆ ಹಲವಾರು ಪ್ರಕರಣಗಳನ್ನು ಭೇದಿಸಿ ರಾಜ್ಯದಲ್ಲಿ ಉನ್ನತ ಹೆಸರನ್ನು ಸಂಪಾದಿಸಿದ್ದಾರೆ. ಈ ನಿಟ್ಟಿನಲ್ಲಿ ಅವರ ವೃತ್ತಿ ಜೀವನದ ಸಾಧನೆಯನ್ನು ಗುರುತಿಸಿ ಈ ಬಾರಿಯ ಗಣರಾಜ್ಯೋತ್ಸವದಂದು ಅವರಿಗೆ ರಾಷ್ಟ್ರಪತಿ ಸೇವಾ ಪದಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ರಾಷ್ಟ್ರಪತಿಯವರ ಶ್ಲಾಘನೀಯ ಸೇವಾ ಪ್ರಶಸ್ತಿ ಪುರಸ್ಕೃತರು

ಇದೇ ರೀತಿ ಇನ್ನುಳಿದ 19 ಪೊಲೀಸ್ ಸಿಬ್ಬಂದಿ ತಮ್ಮ ವೃತ್ತಿ ಬದುಕಿನ ಸಾಧನೆಗಾಗಿ ಪೊಲೀಸ್ ಶ್ಲಾಘನೀಯ ಸೇವಾ ಪದಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿಗೆ ಭಾಜನರಾದ ಸಿಬ್ಬಂದಿ ಹೆಸರು ಈ ಕೆಳಗಿನಂತಿದೆ.

ರಾಜ್ಯ ಗುಪ್ತವಾರ್ತೆಯ ಹೆಚ್ಚುವರಿ ನಿರ್ದೇಶಕ ಲಾಭುರಾಮ್, ಪೊಲೀಸ್ ಪ್ರಧಾನ ಕಚೇರಿಯ ಡಿವೈಎಸ್​ಪಿ ಎಸ್. ನಾಗರಾಜು, ಕರ್ನಾಟಕ ಕಾನೂನು ಪ್ರಾಧಿಕಾರದ ಡಿವೈಎಸ್​ಪಿಗಳಾದ ಪಿ ವೀರೆಂದ್ರ ಕುಮಾರ್ ಹಾಗೂ ಪಿ. ಪ್ರಮೋದ್ ಕುಮಾರ್, ಕರ್ನಾಟಕ ಲೋಕಾಯುಕ್ತದ ಡಿವೈಎಸ್​ಪಿ ಸಿದ್ದಲಿಂಗಪ್ಪಗೌಡ ಆರ್ ಪಾಟೀಲ್, ಎಸ್. ಟಿ‌. ಎಫ್ ಎನ್​ಕ್ರೋಚ್​ಮೆಂಟ್​​ನ ಡಿವೈಎಸ್​ಪಿ ದೀಪಕ್, ನಗರ ವಿಶೇಷ ವಿಭಾಗದ ಡಿವೈಎಸ್​ಪಿ ವಿಜಯ್. ಹೆಚ್, ಮಾದನಾಯಕನಹಳ್ಳಿ ಪೊಲೀಸ್ ಠಾಣಾ ಇನ್ಸ್​ಪೆಕ್ಟರ್​​ ಬಿ. ಎಸ್ ಮಂಜುನಾಥ್.

ಇದನ್ನೂ ಓದಿ :ಸಿಎಂ ಭ್ರಷ್ಟಾಚಾರದ ಪಿತಾಮಹ.. ಬಿಜೆಪಿ ವಿರುದ್ಧ ಕಾಂಗ್ರೆಸ್ ನಿಯೋಗದಿಂದ ಪೊಲೀಸರಿಗೆ ದೂರು

ಅಶೋಕನಗರ ಸಂಚಾರಿ‌ ಠಾಣಾ ಇನ್ಸ್​ಪೆಕ್ಟರ್​​ ರಾವ್ ಗಣೇಶ್ ಜನಾರ್ಧನ್, ದಾವಣಗೆರೆ ಸಂಚಾರ ವಿಭಾಗದ ಸರ್ಕಲ್ ಇನ್ಸ್​ಪೆಕ್ಟರ್​​ ಆರ್. ಪಿ. ಅನಿಲ್, ಬೆಂಗಳೂರು ನಗರ ಸಂಚಾರ ಮತ್ತು ಯೋಜನಾ ವಿಭಾಗದ ಇನ್ಸ್​ಪೆಕ್ಟರ್​​ ಮನೋಜ್ ಹೋವಳೆ, ಬೆಂಗಳೂರು ಕೆಎಸ್ಆರ್​ಪಿ ಇನ್ಸ್​ಪೆಕ್ಟರ್​ ಬಿ. ಟಿ ವರದರಾಜು, ಬೆಂಗಳೂರು ಕೆಎಸ್ಆರ್​ಪಿ ಎಆರ್​​ಎಸ್ಐಗಳಾದ ಟಿ. ಎ. ನಾರಾಯಣ್ ರಾವ್,

ಇದನ್ನೂ ಓದಿ:ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದರೆ ಸಾಲದು, ದೇಶ ರಾಮರಾಜ್ಯವಾಗಬೇಕು: ಪೇಜಾವರ ಶ್ರೀ

ಎಸ್. ಎಸ್ ವೆಂಕಟರಮಣ ಗೌಡ, ಎಸ್. ಎಂ ಪಾಟೀಲ್, ಸಿಐಡಿಯ ಹೆಡ್ ಕಾನ್ಸ್‌ಟೇಬಲ್ ಪ್ರಸನ್ನ ಕುಮಾರ್, ತುಮಕೂರು ಸಂಚಾರ ಪಶ್ಚಿಮ ಪೊಲೀಸ್ ಠಾಣಾ ಹೆಡ್ ಕಾನ್ಸ್‌ಟೇಬಲ್ ಪ್ರಭಾಕರ್ ಹೆಚ್. ಬೆಂಗಳೂರು ಎಸ್.ಸಿ.ಆರ್.ಬಿಯ ಮಹಿಳಾ ಹೆಡ್ ಕಾನ್ಸ್‌ಟೇಬಲ್ ಡಿ. ಸುಧಾ, ಸಿಟಿ ಕಂಟ್ರೋಲ್ ರೂಮ್ ಹೆಡ್ ಕಾನ್ಸ್‌ಟೇಬಲ್ ಟಿ. ಆರ್. ರವೀಂದ್ರ ಕುಮಾರ್, ಪೊಲೀಸ್ ಶ್ಲಾಘನೀಯ ಸೇವಾ ಪದಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಹುಬ್ಬಳ್ಳಿಯ ಆದಿತ್ಯ ಶಿವಳ್ಳಿಗೆ ಶೌರ್ಯ ಪ್ರಶಸ್ತಿ:ಜಲಪಾತದಲ್ಲಿ ಮುಳುಗುತ್ತಿದ್ದ ಮೂವರನ್ನು ರಕ್ಷಿಸಿ ಸಾಹಸ ಮೆರೆದಿದ್ದ ಹುಬ್ಬಳ್ಳಿಯ ನವನಗರದ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿ ಆದಿತ್ಯ ಎಂ. ಶಿವಳ್ಳಿ ಅವರು, ಭಾರತೀಯ ಮಕ್ಕಳ ಕಲ್ಯಾಣ ಪರಿಷತ್ತು (ಐಸಿಸಿಡಬ್ಲ್ಯೂ) ಗಣರಾಜ್ಯೋತ್ಸವದ ಅಂಗವಾಗಿ ನೀಡುವ 2022-23ನೇ ಸಾಲಿನ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ರಾಜ್ಯಮಟ್ಟದ ಈಜುಪಟು ಕೂಡ ಆಗಿರುವ ನಗರದ ಕುಸುಗಲ್ ರಸ್ತೆಯ ಸನ್‌ ಸಿಟಿ ಹೆರಿಟೇಜ್ ನಿವಾಸಿ ಆದಿತ್ಯ, ಸದ್ಯ ಬಿಬಿಎ–ಎಲ್‌ಎಲ್‌ಬಿ 5ನೇ ಸೆಮಿಸ್ಟರ್ ಓದುತ್ತಿದ್ದಾರೆ. ಆದಿತ್ಯ ಅವರು, ಸಂಕ್ರಾಂತಿ ಅಂಗವಾಗಿ 2020ರ ಜನವರಿ 14ರಂದು ಕುಟುಂಬದೊಂದಿಗೆ ಶಿರಸಿ ಬಳಿಯ ಮೋರೆಗಾರ ಜಲಪಾತಕ್ಕೆ ಪ್ರವಾಸ ಹೋಗಿದ್ದಾಗ, ಮೂವರನ್ನು ರಕ್ಷಿಸಿದ್ದರು. ಆದಿತ್ಯ ಅವರು ಜ. 26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ:ಗಣರಾಜ್ಯೋತ್ಸವಕ್ಕೆ ಕರ್ನಾಟಕದ 'ನಾರಿಶಕ್ತಿ' ಸ್ತಬ್ಧಚಿತ್ರ: ಕರ್ತವ್ಯ ಪಥದಲ್ಲಿ ತಾಲೀಮು

Last Updated : Jan 25, 2023, 5:24 PM IST

ABOUT THE AUTHOR

...view details