ಬೆಂಗಳೂರು: 'ಶೀಲಂ ಪರಮ ಭೂಷಣಂ' ಧ್ಯೇಯ ವಾಕ್ಯ ಕೆಡೆಟ್‌ಗಳಿಗೆ ಯಾವಾಗಲೂ ಮಾರ್ಗದರ್ಶಕ ಜ್ಯೋತಿಯಾಗಿ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದ್ದಾರೆ. ಸೋಮವಾರ ಬೆಂಗಳೂರಿನ ರಾಷ್ಟ್ರೀಯ ಸೈನಿಕ ಉದ್ಘಾಟಿಸಿ ಶಾಲೆಯ ಪ್ಲಾಟಿನಂ ಜ್ಯುಬಿಲಿ ಆಚರಣೆ ಉದ್ದೇಶಿಸಿ ಅವರು ಮಾತನಾಡಿದರು. ಸ್ಥಾಪನೆಯಾದಾಗಿನಿಂದ ಶಾಲೆಯು ಬಹಳ ದೂರ ಸಾಗಿ ಬಂದಿದೆ ಮತ್ತು ದೇಶದ ಅತ್ಯುತ್ತಮ ಬೋರ್ಡಿಂಗ್ ಶಾಲೆಗಳಲ್ಲಿ ಒಂದಾಗಿದೆ. ಪ್ರಸ್ತುತ 23 ರಾಜ್ಯಗಳ ಕೆಡೆಟ್‌ಗಳು ಈ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದರು.
ಶಾಲೆ ಏಕತೆಯನ್ನು ಪ್ರತಿನಿಧಿಸುತ್ತದೆ:ಜಮ್ಮು ಮತ್ತು ಕಾಶ್ಮೀರದಿಂದ ಕೇರಳದವರೆಗೆ ಈ ಶಾಲೆಯ ಕೆಡೆಟ್‌ಗಳು ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರತಿನಿಧಿಸುತ್ತಾರೆ ಎಂದು ಹೊಗಳಿದರು. ಈ ಪರಸ್ಪರ ಬೆರೆಯುವಿಕೆಯು ಕೆಡೆಟ್‌ಗಳಿಗೆ ತಮ್ಮ ಸಹಪಾಠಿಯ ಸಂಸ್ಕೃತಿ, ಭಾಷೆ ಮತ್ತು ಸಂಪ್ರದಾಯಗಳನ್ನು ಕಲಿಯಲು ಮತ್ತು ಪ್ರಶಂಸಿಸಲು ಸಹಾಯ ಮಾಡಿದೆ ಎಂದು ಸಂತಸಗೊಂಡರು.
ಬಾಲಕಿಯರ ಪ್ರವೇಶ:ಈ ಶೈಕ್ಷಣಿಕ ವರ್ಷದಿಂದ ದೇಶದಾದ್ಯಂತ ಇರುವ ರಾಷ್ಟ್ರೀಯ ಮಿಲಿಟರಿ ಶಾಲೆಗಳಿಗೆ ಬಾಲಕಿಯರ ಕೆಡೆಟ್‌ಗಳು ಪ್ರವೇಶ ಪಡೆಯಲಿದ್ದಾರೆ. ನಮ್ಮ ಹೆಣ್ಣು ಮಕ್ಕಳು ಹಲವಾರು ಮೈಲಿಗಳನ್ನು ದಾಟಿ ವಿವಿಧ ಕ್ಷೇತ್ರಗಳಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸಿ ದೇಶವೇ ಹೆಮ್ಮೆ ಪಡುವಂತೆ ಮಾಡುತ್ತಿದ್ದಾರೆ ಎಂದರು.