ಕರ್ನಾಟಕ

karnataka

ETV Bharat / state

ವೈದ್ಯಕೀಯ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳ ಸಾಧನೆ ದೊಡ್ಡದು: ರಾಷ್ಟ್ರಪತಿ ಕೋವಿಂದ್ ಶ್ಲಾಘನೆ - ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಘಟಿಕೋತ್ಸವ

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಗಿಯಾಗಿದ್ದರು. ಪದವಿ ಪಡೆದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಇಲ್ಲಿ ಪದಕ ಪಡೆದವರಲ್ಲಿ ಹೆಣ್ಣು ಮಕ್ಕಳೇ ಹೆಚ್ಚು. ಹೆಣ್ಣು ಮಕ್ಕಳು ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡುತ್ತಿದ್ದು, ಇದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

rajeevgandhi university convocation
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶ್ಲಾಘನೆ

By

Published : Feb 7, 2021, 12:32 PM IST

Updated : Feb 7, 2021, 12:49 PM IST

ಬೆಂಗಳೂರು:ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 23ನೇ ವಾರ್ಷಿಕ ಘಟಿಕೋತ್ಸವ ಇಂದು ನಿಮ್ಹಾನ್ಸ್ ಸಭಾಂಗಣದಲ್ಲಿ ನಡೆಯಿತು. ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಗಿಯಾದರು. ಇವರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹಾಗೂ ವಿವಿಯ ವಿಸಿ ಸಚ್ಚಿದಾನಂದ ವೇದಿಕೆ ಹಂಚಿಕೊಂಡರು. ಇದೇ ವೇಳೆ ನ್ಯೂರೋ ಸರ್ಜರಿಯಲ್ಲಿ ಜೀವಮಾನದ ಸಾಧನೆ ಮಾಡಿರುವ ಡಾ.ಎ. ಸತ್ಯರಂಜನ್ ದಾಸ್ ಹೆಗ್ಡೆ ಯವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಗಿ

ಪದವಿ ಪ್ರದಾನ ಮಾಡಿದ ಬಳಿಕ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಘಟಿಕೋತ್ಸವದಲ್ಲಿ ಭಾಗಿಯಾಗಿರುವುದು ಸಂತಸ ತಂದಿದೆ. ಪದವಿ ಪಡೆದ ಎಲ್ಲರಿಗೂ ಅಭಿನಂದನೆ. ಇಲ್ಲಿ ಪದಕ ಪಡೆದವರಲ್ಲಿ ಹೆಣ್ಣು ಮಕ್ಕಳೇ ಹೆಚ್ಚು. ಹೆಣ್ಣು ಮಕ್ಕಳು ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡುತ್ತಿದ್ದು, ಇದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕೋವಿಡ್-19 ನಿಂದ ಸಾಕಷ್ಟು ಸಂಕಷ್ಟ ಎದುರಾಯಿತು. ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಜೀವ ಸವಾಲಿಗಿಟ್ಟು ಕೆಲಸ ಮಾಡಿದರು. 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ ತರಬೇತಿ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಕಡಿಮೆ ಸಮಯದಲ್ಲಿ ಹಲವು ವ್ಯಾಕ್ಸಿನ್​ಗಳು ಕಂಡು ಹಿಡಿಯಲ್ಪಟ್ಟವು. ಆತ್ಮನಿರ್ಭರ ಭಾರತ ಕಾನ್ಸೆಪ್ಟ್ ಅಡಿಯಲ್ಲಿ ಕೇವಲ ನಮ್ಮ ದೇಶಗಳಲ್ಲಿ ಮಾತ್ರವಲ್ಲ, ನಾವು ವಿದೇಶಗಳಿಗೂ ಕೂಡ ವ್ಯಾಕ್ಸಿನ್ ನೀಡಿದ್ದೇವೆ ಎಂದು ಹೇಳಿದರು.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶ್ಲಾಘನೆ

ಇದನ್ನೂ ಓದಿ:ಮುಂಬೈನಿಂದ ಅಫ್ಘಾನಿಸ್ತಾನಕ್ಕೆ ಕೋವಿಡ್​ ಲಸಿಕೆ ರವಾನೆ

ನಿಮ್ಮ ಶಿಕ್ಷಣ ಇಲ್ಲಿಗೆ ಮುಗಿಯುವುದಿಲ್ಲ. ಒಂದು ಹಂತ ಮುಕ್ತಾಯವಾಗುತ್ತದಷ್ಟೇ. ಆರೋಗ್ಯ ಕ್ಷೇತ್ರದಲ್ಲಿ ಪ್ರತಿಕ್ಷಣ ಹೊಸ ಹೊಸ ಬೆಳವಣಿಗೆ ಆಗುತ್ತಲೇ ಇರುತ್ತವೆ. ವೈರಸ್ ಅನ್ನು ಹೇಗೆ ತಕ್ಷಣಕ್ಕೆ ಅರ್ಥ ಮಾಡಿಕೊಂಡು ಅಧ್ಯಯನ ನಡೆಸಿ ಪರಿಹಾರ ಕಂಡು ಹಿಡಿಬೇಕು ಅನ್ನೋದಕ್ಕೆ ನಮ್ಮ ವಿಜ್ಞಾನಿಗಳೇ ಉದಾಹರಣೆ. ಎಲ್ಲ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿರಲಿ, ಯೂನಿವರ್ಸಿಟಿಯಲ್ಲಿರುವ ಸಂಪತ್ತು ಬಳಸಿಕೊಂಡು ನಿಮ್ಮ ಜ್ಞಾನ ವೃದ್ಧಿಸಿಕೊಳ್ಳಿ ಎಂದು ರಾಷ್ಟ್ರಪತಿಗಳು ಕರೆ ನೀಡಿದರು.

ವಿವಿಯ ವಿವಿಧ ವಿಷಯಗಳಲ್ಲಿ 33,629 ಅಭ್ಯರ್ಥಿಗಳು ಪದವಿ ಪಡೆದರು. ಇವರ ಪೈಕಿ 30 ಪಿಹೆಚ್​ಡಿ, 115 ಸೂಪರ್ ಸ್ಪೆಷಾಲಿಟಿ, 5,824 ಸ್ನಾತಕೋತ್ತರ ಪದವಿ, 351 ಸ್ನಾತಕೋತ್ತರ ಡಿಪ್ಲೊಮಾ ಪದವಿ, 79 ಫೆಲೋಷಿಪ್ ಕೋರ್ಸ್, 9 ಸರ್ಟಿಫಿಕೇಟ್ ಕೋರ್ಸ್ ಹಾಗೂ 27,221 ಸ್ನಾತಕ ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ವಿಶ್ವವಿದ್ಯಾಲಯದ ಎಲ್ಲಾ ನಿಖಾಯಗಳ ಒಟ್ಟು ವಿದ್ಯಾರ್ಥಿಗಳ ಒಟ್ಟಾರೆ ಫಲಿತಾಂಶ ಪ್ರತಿಶತ 82 ಆಗಿದೆ. 122 ಚಿನ್ನದ ಪದಕಗಳು 8 ನಗದು ಬಹುಮಾನಗಳಿಗೆ ಒಟ್ಟು 111 ವಿದ್ಯಾರ್ಥಿಗಳು ಭಾಜನರಾದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವ

ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು:

ವಿದ್ಯಾರ್ಥಿ ಹೆಸರು ಕೋರ್ಸ್ ಪದಕ
ಡಾ.ಮಾಲಾ ಎಂ ಬಿಡಿಎಸ್ 3 ಚಿನ್ನದ ಪದಕ
ಡಾ.ವೈಷ್ಣವಿ ಕಾಮತ್ ಬಿಡಿಎಸ್ 3 ಚಿನ್ನದ ಪದಕ
ಡಾ. ಸಫಿಯಾ ಡಿ ಫಾರ್ಮ್ 3 ಚಿನ್ನದ ಪದಕಗಳು

ಡಾ. ಸಂದೀಪ್ ರಾವ್

ಕೊರಡ್ಕಲ್

ಎಂಬಿಬಿಎಸ್ 2 ಚಿನ್ನದ ಪದಕ ಡಾ. ಅನ್ಶಿತ ಟಂಡನ್ ಬಿಡಿಎಸ್ 2 ಚಿನ್ನದ ಪದಕ ಡಾ. ಸೌಮ್ಯ ಎ ಡಿ ಫಾರ್ಮ್ 2 ಚಿನ್ನದ ಪದಕ

ಟಿ.ಡಿ.ಆಶಿನಿ ದಿಲ್ಹಾರ

ಫರ್ನಾಂಡೊ

ಬಿಪಿಟಿ 2 ಚಿನ್ನದ ಪದಕ

ರಾಥೋಡ್ ಸೊನಾಲಿ

ದೇವಾನಂದ

ಬಿಎಸ್ ಸಿ ನರ್ಸಿಂಗ್ 2 ಚಿನ್ನದ ಪದಕ ಖುಷಿರಾಜ್ ಪೊಖರೆಲ್

ಬಿಎಸ್ ಸಿ ಆಲೈಡ್

ಹೆಲ್ತ್ ಸೈನ್ಸಸ್

2 ಚಿನ್ನದ ಪದಕ ಸೂರಜ್ ಯಾದವ್ ಬಿ ಫಾರ್ಮ್ 2 ಚಿನ್ನದ ಪದಕ
Last Updated : Feb 7, 2021, 12:49 PM IST

For All Latest Updates

ABOUT THE AUTHOR

...view details